GST

ನಮ್ಮ ಬಾಕಿ ಪಾವತಿಸದಿದ್ದರೆ ಕೇಂದ್ರ ಜಿಎಸ್‌ಟಿ ರದ್ದುಗೊಳಿಸಬೇಕು: ಮಮತಾ ಬ್ಯಾನರ್ಜಿ
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ರಾಜ್ಯಕ್ಕೆ ನೀಡಬೇಕಾದ ಜಿಎಸ್ ಟಿ ಪಾಲನ್ನು ಪಾವತಿಸದಿದ್ದರೆ ಜಿಎಸ್ ಟಿಯನ್ನು ತೆಗೆದುಹಾಕಬೇಕು ಎಂದು...

ಆಗಸ್ಟ್ ನಲ್ಲಿ ಜಿಎಸ್ ಟಿ ಕಲೆಕ್ಷನ್ ಶೇ.28 ರಷ್ಟು ಹೆಚ್ಚಳ; 1.43 ಲಕ್ಷ ಕೋಟಿ ರೂ. ಸಂಗ್ರಹ
ಕಳೆದ ಆಗಸ್ಟ್ ತಿಂಗಳಲ್ಲಿ ಸರಕು ಮತ್ತು ಸೇವಾ ತೆರಿಗೆ(ಜಿಎಸ್ ಟಿ) ಸಂಗ್ರಹದಲ್ಲಿ ಶೇಕಡಾ 28 ರಷ್ಟು ಏರಿಕೆಯಾಗಿದ್ದು, ಜಿಎಸ್ ಟಿ ಕಲೆಕ್ಷನ್ 1.49 ಲಕ್ಷ ಕೋಟಿ ರೂಪಾಯಿಗೆ ತಲುಪಿದೆ.

ಮನೆ ಬಾಡಿಗೆ ಮೇಲೆ ಜಿಎಸ್ ಟಿ ಇಲ್ಲ, ಆದ್ರೆ ಉದ್ಯಮ ನಡೆಸಲು ಮನೆ ಬಾಡಿಗೆ ಪಡೆದವರಿಗೆ ಶೇ.18ರಷ್ಟು ಜಿಎಸ್ ಟಿ: ಕೇಂದ್ರ ಸ್ಪಷ್ಟನೆ
ಮನೆ ಬಾಡಿಗೆ ಮೇಲಿನ ಜಿಎಸ್‌ಟಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಶುಕ್ರವಾರ ಸ್ಪಷ್ಟೀಕರಣ ನೀಡಿದ್ದು, ವಸತಿ ಘಟಕವನ್ನು ಉದ್ಯಮ ನಡೆಸಲು ಬಾಡಿಗೆಗೆ ನೀಡಿದರೆ ಮಾತ್ರ ಶೇ. 18 ರಷ್ಟು ಜಿಎಸ್ ಟಿ ವಿಧಿಸಲಾಗುವುದು ಎಂದು ಹೇಳಿದೆ.

ಜಿಎಸ್ ಟಿ ಕಲೆಕ್ಷನ್ ನಲ್ಲಿ ಶೇ. 28 ರಷ್ಟು ಏರಿಕೆ, ರೂ. 1. 49 ಲಕ್ಷ ಕೋಟಿ ಸಂಗ್ರಹ
ಆರ್ಥಿಕ ಚೇತರಿಕೆ ಮತ್ತು ತೆರಿಗೆ ವಂಚನೆ ತಡೆಗೆ ಕ್ರಮಗಳನ್ನು ತೆಗೆದುಕೊಂಡ ನಂತರ ಜುಲೈ ತಿಂಗಳಲ್ಲಿ ತೆರಿಗೆ ಸಂಗ್ರಹದಲ್ಲಿ ಶೇಕಡಾ 28 ರಷ್ಟು ಏರಿಕೆಯಾಗಿದ್ದು, ರೂ. 1.49 ಲಕ್ಷ ಕೋಟಿಗೆ ತಲುಪಿದೆ.

ಸಣ್ಣ ಮಳಿಗೆಗಳು ಮಾರಾಟ ಮಾಡುವ ಕಡಿಮೆ ಪ್ರಮಾಣದ ವಸ್ತುಗಳ ಮೇಲೆ ಜಿಎಸ್‌ಟಿ ವಿಧಿಸುವುದಿಲ್ಲ: ಕೇರಳ ಸಿಎಂ ಪಿಣರಾಯಿ ವಿಜಯನ್
ಜಿಎಸ್ ಟಿ ವಿಚಾರವಾಗಿ ಕೇಂದ್ರ ಸರ್ಕಾರಕ್ಕೆ ಸಡ್ಡು ಹೊಡಿದಿರುವ ಕೇರಳ ಸಿಎಂ ಪಿಣರಾಯಿ ವಿಜಯನ್, ಸರ್ಕಾರದ ಕುಟುಂಬ ಶ್ರೀ ಮತ್ತು ಸಣ್ಣ ಮಳಿಗೆಗಳು ಮಾರಾಟ ಮಾಡುವ ಕಡಿಮೆ ಪ್ರಮಾಣದ ವಸ್ತುಗಳ ಮೇಲೆ ಜಿಎಸ್‌ಟಿ ವಿಧಿಸುವುದಿಲ್ಲ ಎಂದು ಘೋಷಿಸಿದ್ದಾರೆ.

ಸಣ್ಣ ಅಂಗಡಿಗಳ ಸರಕು ಸಾಮಾಗ್ರಿಗಳ ಮೇಲೆ ಜಿಎಸ್‌ಟಿ ಹೇರುವುದಿಲ್ಲ: ಕೇರಳ ಸರ್ಕಾರ
ಹಾಲಿನ ಉತ್ಪನ್ನಗಳ ಮೇಲಿನ ಜಿಎಸ್ ಟಿ ಹೇರಿಕೆ ವಿಚಾರ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವಂತೆಯೇ ಇತ್ತ ಕೇರಳ ಸರ್ಕಾರ ಸಣ್ಣ ಅಂಗಡಿಗಳ ಸರಕು ಸಾಮಾಗ್ರಿಗಳ ಮೇಲೆ ಜಿಎಸ್‌ಟಿ ಹೇರುವುದಿಲ್ಲ ಎಂದು ಘೋಷಣೆ ಮಾಡಿದೆ.

ತೆರಿಗೆ ಸೋರಿಕೆ ತಡೆಯಲು ಪ್ಯಾಕ್ ಮಾಡಿದ ಆಹಾರದ ಮೇಲೆ ಶೇ.5ರಷ್ಟು ಜಿಎಸ್‌ಟಿ ಅಗತ್ಯ: ವಿತ್ತ ಸಚಿವೆ ನಿರ್ಮಲಾ
ಧಾನ್ಯಗಳು ಮತ್ತು ಬೇಳೆಕಾಳುಗಳು ಸೇರಿದಂತೆ ಪ್ಯಾಕ್ ಮಾಡಿದ ಆಹಾರ ಧಾನ್ಯಗಳ ಮೇಲೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವಿಧಿಸುವ ನಿರ್ಧಾರವನ್ನು ರಾಜ್ಯಗಳೊಂದಿಗೆ ಒಮ್ಮತದಿಂದ ತೆಗೆದುಕೊಳ್ಳಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಸ್ಪಷ್ಟಪಡಿಸಿದ್ದಾರೆ.

ಸಂಸತ್ ಅಧಿವೇಶನ: ಜಿಎಸ್ ಟಿ, ಬೆಲೆ ಏರಿಕೆ ವಿರುದ್ಧ ಪ್ರತಿಪಕ್ಷಗಳ ಗದ್ದಲ; ಉಭಯ ಸದನಗಳ ಕಲಾಪ ಮಧ್ಯಾಹ್ನಕ್ಕೆ ಮುಂದೂಡಿಕೆ
ಮುಂಗಾರು ಅಧಿವೇಶನದ ಎರಡನೇ ದಿನವಾದ ಇಂದು ಕೂಡಾ ಕೆಲವು ಹೊಸ ಉತ್ಪನ್ನಗಳ ಮೇಲೆ ಜಿಎಸ್ ಟಿ ವಿಧಿಸಿರುವುದನ್ನು ವಿರೋಧಿಸಿ ಪ್ರತಿಪಕ್ಷಗಳಾದ ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಡಿಎಂಕೆ ಮತ್ತಿತರ ಪಕ್ಷಗಳ ಸದಸ್ಯರು ಭಿತ್ತಿಪತ್ರ ಹಿಡಿದು, ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು.

ಪ್ಯಾಕ್ ಮಾಡಿದ, ಲೇಬಲ್ ಮಾಡಿದ ಆಹಾರದ ಮೇಲಿನ ಜಿಎಸ್‌ಟಿ ಹಿಂಪಡೆಯಿರಿ: ಕೇಂದ್ರಕ್ಕೆ ದೆಹಲಿ ಸಿಎಂ ಕೇಜ್ರಿವಾಲ್ ಆಗ್ರಹ
ಮೊದಲೇ ಪ್ಯಾಕ್ ಮಾಡಿದ ಮತ್ತು ಲೇಬಲ್ ಮಾಡಿದ ಆಹಾರ ಪದಾರ್ಥಗಳ ಮೇಲೆ ಹೊಸದಾಗಿ ವಿಧಿಸಿರುವ ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ)ಯನ್ನು ಹಿಂಪಡೆಯುವಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್...

