Ganja

ಬೆಂಗಳೂರು ಪೊಲೀಸರ ಬೃಹತ್ ಕಾರ್ಯಾಚರಣೆ; ಸುರಂಗದೊಳಗೆ ಅಡಗಿಸಿಟ್ಟಿದ್ದ 1 ಟನ್ ಗೂ ಅಧಿಕ ಗಾಂಜಾ ವಶ; ನಾಲ್ವರ ಬಂಧನ
ಡ್ರಗ್ ವಿರುದ್ಧ ಬೆಂಗಳೂರು ನಗರ ಪೊಲೀಸರು ಸಮರ ಮುಂದುವರಿಸಿದ್ದು, ಕೇಂದ್ರ ವಿಭಾಗದ ಪೊಲೀಸರು ನಡೆಸಿದ ಬೃಹತ್ ಕಾರ್ಯಾಚರಣೆಯಲ್ಲಿ ಸುರಂಗದೊಳಗೆ ಅಡಗಿಸಿಟ್ಟಿದ್ದ 1 ಟನ್ 350 ಕೆ.ಜಿ, 300 ಗ್ರಾಂ ತೂಕದ ಗಾಂಜಾವನ್ನು ಪೊಲೀಸರು ಜಪ್ತಿ ಮಾಡಿ, ನಾಲ್ವರು ಕುಖ್ಯಾತ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದ್ದಾರೆ.

ಸ್ಯಾಂಡಲ್ ವುಡ್ ನಲ್ಲಿ ನಶೆ ಗೌಜಲು: ಮೊಳಕಾಲ್ಮೂರಿನಲ್ಲಿ ಗಾಂಜಾ ಗಮ್ಮತ್ತು; ಕಟಾವಿಗೆ ಬಂದ 20 ಸಾವಿರ ಕೆಜಿ ಗಾಂಜಾ ವಶ
ಮೊಳಕಾಲ್ಮೂರು ತಾಲ್ಲೂಕಿನ ವಡೇರಹಳ್ಳಿ ಗ್ರಾಮದ 4 ಎಕರೆ 20 ಕುಂಟೆಯಲ್ಲಿ ಜಮೀನಿನಲ್ಲಿ 2 ಕೋಟಿಗೂ ಅಧಿಕ ಮೌಲ್ಯದ ಗಾಂಜಾ ಪತ್ತೆಯಾಗಿದೆ.

ಸಿಸಿಬಿ ಪೊಲೀಸರ ಇತಿಹಾಸದಲ್ಲಿಯೇ ದಾಖಲೆ: 1 ಕೋಟಿ ರೂ. ಮೌಲ್ಯದ 2 ಕ್ವಿಂಟಾಲ್ ಗಾಂಜಾ ವಶ; 3 ಬಂಧನ
ಮಹತ್ವದ ಕಾರ್ಯಾಚರಣೆಯೊಂದರಲ್ಲಿ ಕೇಂದ್ರ ಅಪರಾಧ ವಿಭಾಗ(ಸಿಸಿಬಿ) ಪೊಲೀಸರು ಸುಮಾರು 1 ಕೋಟಿ ಮೌಲ್ಯದ 2 ಕ್ವಿಂಟಾಲ್ ಗಾಂಜಾ ವಶಪಡಿಸಿಕೊಂಡಿದ್ದಾರೆ.

ಬೆಂಗಳೂರು ಪೊಲೀಸರ ಭರ್ಜರಿ ಬೇಟೆ: ಮಾದಕ ವಸ್ತು ಮಾರಾಟ, 65 ಜನರ ಬಂಧನ, 8.42 ಕೆ.ಜಿ ಗಾಂಜಾ ವಶ
ಮಾದಕ ವಸ್ತು ಸೇವನೆ, ಮಾರಾಟ ಮಾಡುತ್ತಿದ್ದ 65 ಜನರನ್ನು ಉತ್ತರ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

ಬಾಳೆಹಣ್ಣಿನ ಗೊನೆಗಳ ನಡುವೆ ಸಾಗಿಸುತ್ತಿದ್ದ 20 ಲಕ್ಷ ರೂ. ಮೌಲ್ಯದ 108 ಕೆಜಿ ಗಾಂಜಾ ಪತ್ತೆ
ಜುಲೈ 21 ರ ಮಂಗಳವಾರ ಪಿಕ್ ಅಪ್ ಟ್ರಕ್‌ನಲ್ಲಿ ತುಂಬಿದ ಬಾಳೆಹಣ್ಣಿನ ಗೊನೆಗಳ ನಡುವೆ ಅಡಗಿಸಿಟ್ಟಿದ್ದ ಒಂದು ಕ್ವಿಂಟಾಲ್ ಗಾಂಜಾವನ್ನು ಪತ್ತೆ ಹಚ್ಚುವಲ್ಲಿ ಕಾಸರಗೋಡು ಜಿಲ್ಲೆ ಮಂಜೇಶ್ವರ ಠಾಣೆ ಪೊಲೀಸ್ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಆದರೆ ಆರೋಪಿಗಳು ಪೋಲೀಸರ ಕೈಗೆ ಸಿಕ್ಕದೆ ಪರಾರಿಯಾಗಿದ್ದಾರೆ.

ಬೆಂಗಳೂರು: ಬರ್ತ್ ಡೇ ಪಾರ್ಟಿ ನಂತರ ಇಬ್ಬರ ಸಾವು; ಗಾಂಜಾ ಸೇವನೆ ಶಂಕೆ
ಹುಟ್ಟುಹಬ್ಬದ ಪಾರ್ಟಿಯಲ್ಲಿ ಗಾಂಜಾ ಸೇವನೆ ಮಾಡಿದ್ದರಿಂದ ಯುವಕರಿಬ್ಬರೂ ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದೆ.

ಡ್ರೋನ್ ಕ್ಯಾಮರಾ ಸಹಾಯದಿಂದ 8 ಲಕ್ಷ ಮೌಲ್ಯದ ಗಾಂಜಾ ಪತ್ತೆ !
ವಿಜಯಪುರದ ಹೆಬ್ಬಲಟ್ಟಿ ಗ್ರಾಮದಲ್ಲಿ ಬೆಳೆದಿದ್ದ ಸುಮಾರು 8 ಲಕ್ಷ ಮೌಲ್ಯದ ಗಾಂಜಾವನ್ನು ಅಬಕಾರಿ ಅಧಿಕಾರಿಗಳು ಡ್ರೋನ್ ಕ್ಯಾಮರಾಗಳ ಸಹಾಯದಿಂದ ಪತ್ತೆ ಹಚ್ಚಿದ್ದಾರೆ.

ಬೆಂಗಳೂರು: 28 ಕೆಜಿ ಗಾಂಜಾದೊಂದಿಗೆ ಯುವಕನ ಬಂಧನ
ಮಾದಕದ್ರವ್ಯ ನಿಯಂತ್ರಣ ವಿಭಾಗದ (ಎನ್ ಸಿಬಿ) ಅಧಿಕಾರಿಗಳು ಯುವಕನೊಬ್ಬನನ್ನು ಬಂಧಿಸಿ ...

ಆಂಧ್ರಪ್ರದೇಶ: 3,200 ಕೆ.ಜಿ ಗಾಂಜಾ ವಶಕ್ಕೆ
ಆಂಧ್ರಪ್ರದೇಶದ ವಿಶಾಖಪಟ್ಟಣಂ ಗ್ರಾಮೀಣ ಪೊಲೀಸರು ಮಿಂಚಿನ ಕಾರ್ಯಾಚರಣೆಯ್ನು ನಡೆಸಿ ಅಂದಾಜು ರೂ.2 ಕೋಟಿ ಮೌಲ್ಯದ 3,200 ಕೆಜಿ ಗಾಂಜಾವನ್ನು ಚಿಂತಲಪಲ್ಲಿವೀದಿಯ ಪದೇರು ಬಳಿ ಮಂಗಳವಾರ ವಶಕ್ಕೆ ಪಡೆದುಕೊಂಡಿದ್ದಾರೆ...

