ಬಾಳೆಹಣ್ಣಿನ ಗೊನೆಗಳ ನಡುವೆ ಸಾಗಿಸುತ್ತಿದ್ದ 20 ಲಕ್ಷ ರೂ. ಮೌಲ್ಯದ 108 ಕೆಜಿ ಗಾಂಜಾ ಪತ್ತೆ
ಜುಲೈ 21 ರ ಮಂಗಳವಾರ ಪಿಕ್ ಅಪ್ ಟ್ರಕ್‌ನಲ್ಲಿ ತುಂಬಿದ ಬಾಳೆಹಣ್ಣಿನ ಗೊನೆಗಳ ನಡುವೆ ಅಡಗಿಸಿಟ್ಟಿದ್ದ ಒಂದು ಕ್ವಿಂಟಾಲ್ ಗಾಂಜಾವನ್ನು ಪತ್ತೆ ಹಚ್ಚುವಲ್ಲಿ ಕಾಸರಗೋಡು ಜಿಲ್ಲೆ ಮಂಜೇಶ್ವರ ಠಾಣೆ ಪೊಲೀಸ್ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಆದರೆ ಆರೋಪಿಗಳು ಪೋಲೀಸರ ಕೈಗೆ ಸಿಕ್ಕದೆ ಪರಾರಿಯಾಗಿದ್ದಾರೆ.

ಕಾಸರಗೋಡು: ಜುಲೈ 21 ರ ಮಂಗಳವಾರ ಪಿಕ್ ಅಪ್ ಟ್ರಕ್‌ನಲ್ಲಿ ತುಂಬಿದ ಬಾಳೆಹಣ್ಣಿನ ಗೊನೆಗಳ ನಡುವೆ ಅಡಗಿಸಿಟ್ಟಿದ್ದ ಒಂದು ಕ್ವಿಂಟಾಲ್ ಗಾಂಜಾವನ್ನು ಪತ್ತೆ ಹಚ್ಚುವಲ್ಲಿ ಕಾಸರಗೋಡು ಜಿಲ್ಲೆ ಮಂಜೇಶ್ವರ ಠಾಣೆ ಪೊಲೀಸ್ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಆದರೆ ಆರೋಪಿಗಳು ಪೋಲೀಸರ ಕೈಗೆ ಸಿಕ್ಕದೆ ಪರಾರಿಯಾಗಿದ್ದಾರೆ.
ವಿಶ್ವಾಸಾರ್ಹ ಮೂಲಗಳಿಂದ ಬಂದ ಮಾಹಿತಿ ಆಧರಿಸಿ ಪೊಲೀಸರು ಮಂಗಳವಾರ ಸಂಜೆ ಈ ಕಾರ್ಯಾಚರಣೆಯನ್ನು ನಡೆಸಿದ್ದು ಪೊಲೀಸರು ಮಂಜೇಶ್ವರ ಕುಂಜತ್ತ್ರ್ ಪಡವಿನಲ್ಲಿ ವಾಹನಗಳನ್ನು ಪರಿಶೀಲಿಸುತ್ತಿದ್ದಾಗ, ಆ ಮಾರ್ಗದಲ್ಲಿ ಬಂದ ಪಿಕ್-ಅಪ್ ಟ್ರಕ್ ಒಂದರಲ್ಲಿ ಕ್ವಿಂಟಾಲ್ ತೂಕದ ಗಾಂಜಾ ಪತ್ತೆಯಾಗಿದೆ.
ಟ್ರಕ್ ಪೋಲೀಸರ ಪರಿಶೀಲನೆಗೆ ಸಿಕ್ಕದೆ ಮುಂದೆ ವೇಗವಾಗಿ ಚಲಿಸುವಾಗ ವಾಹನವನ್ನು ಬೆನ್ನಟ್ಟಿದ ಪೊಲೀಸರು ವಾಹನ ಅಡ್ಡಗಟ್ಟುವಲ್ಲಿ ಯಶಸ್ವಿಯಾದರು. ಆದರೆ ಪೊಲೀಸರ ಕಣ್ತಪ್ಪಿಸಿ ಆರೋಪಿಗಳು ಪರಾರಿಯಾಗಿದ್ದಾರೆ. ವಾಹನವನ್ನು ಕೂಲಂಕಷವಾಗಿ ಪರಿಶೀಲನೆ ನಡೆಸಿದ ಪೊಲೀಸರು 108 ಕೆಜಿ ಗಾಂಜಾವನ್ನು ಸ್ಯಾಚೆಟ್‌ಗಳಲ್ಲಿ ತುಂಬಿರುವುದನ್ನು ಕಂಡುಕೊಂಡರು. ಪೊಲೀಸರು ಈಗ ಆರೋಪಿಗಳ ಶೋಧದಲ್ಲಿ ತೊಡಗಿದ್ದು ಪ್ರಶ್ನಾರ್ಹ ವಾಹನವು ಕರ್ನಾಟಕ ನೋಂದಣಿ ಸಂಖ್ಯೆಯನ್ನು ಹೊಂದಿದೆ, ಮತ್ತು ಆ ಸಂಖ್ಯೆ ನಕಲಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವಶಪಡಿಸಿಕೊಂಡ ಗಂಜಾದ ಮಾರುಕಟ್ಟೆ ಮೌಲ್ಯ ಅಂದಾಜು 20 ಲಕ್ಷ ರೂ. ಎಂದು ಹೇಳಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


