ಆಂಧ್ರಪ್ರದೇಶ: 3,200 ಕೆ.ಜಿ ಗಾಂಜಾ ವಶಕ್ಕೆ
ಆಂಧ್ರಪ್ರದೇಶದ ವಿಶಾಖಪಟ್ಟಣಂ ಗ್ರಾಮೀಣ ಪೊಲೀಸರು ಮಿಂಚಿನ ಕಾರ್ಯಾಚರಣೆಯ್ನು ನಡೆಸಿ ಅಂದಾಜು ರೂ.2 ಕೋಟಿ ಮೌಲ್ಯದ 3,200 ಕೆಜಿ ಗಾಂಜಾವನ್ನು ಚಿಂತಲಪಲ್ಲಿವೀದಿಯ ಪದೇರು ಬಳಿ ಮಂಗಳವಾರ ವಶಕ್ಕೆ ಪಡೆದುಕೊಂಡಿದ್ದಾರೆ...

ವಿಶಾಖಪಟ್ಟಣ: ಆಂಧ್ರಪ್ರದೇಶದ ವಿಶಾಖಪಟ್ಟಣಂ ಗ್ರಾಮೀಣ ಪೊಲೀಸರು ಮಿಂಚಿನ ಕಾರ್ಯಾಚರಣೆಯ್ನು ನಡೆಸಿ ಅಂದಾಜು ರೂ.2 ಕೋಟಿ ಮೌಲ್ಯದ 3,200 ಕೆಜಿ ಗಾಂಜಾವನ್ನು ಚಿಂತಲಪಲ್ಲಿವೀದಿಯ ಪದೇರು ಬಳಿ ಮಂಗಳವಾರ ವಶಕ್ಕೆ ಪಡೆದುಕೊಂಡಿದ್ದಾರೆ.
ಗಾಂಜಾವನ್ನು ಸಾಗಣೆ ಮಾಡುತ್ತಿದ್ದ ಮೂವರನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದು, ಬಂಧಿತರನ್ನು ಕೆ.ದುಗ್ಗಿ ನಾಯ್ಡು (45), ಕೆ. ರಾಜೇಶ್ 927) ಮತ್ತು ಎಂ. ನವೀನ್ ಎಂದು ಗುರ್ತಿಸಲಾಗಿದೆ.
ಆರೋಪಿಗಳು ಚಿಂತಲಪಲ್ಲಿವೀದಿಯಿಂದ ಅಂಕಾಪಲ್ಲಿಗೆ ಗಾಂಜಾವನ್ನು ರವಾನೆ ಮಾಡುತ್ತಿದ್ದು. ನಂತರ ಇಲ್ಲಿಂದ ಇತರೆ ಪ್ರದೇಶಗಳಿಗೆ ವಿತರಣೆಮಾಡಲು ಯೋಜನೆ ರೂಪಿಸಿದ್ದರು. ಖಚಿತ ಮಾಹಿತಿ ಆಧಾರದ ಮೇಲೆ ಪೊಲೀಸರು ವಾಹನವನ್ನು ತಡೆದು ಪರಿಶೀಲನೆ ನಡೆಸಿ ರೂ.2 ಕೋಟಿ ಮೌಲ್ಯದ ಗಾಂಜಾವನ್ನು ವಶಕ್ಕೆ ಪಡೆದುಕೊಂಡಿದದಾರೆ.
ಆಯಿಲ್ ಟ್ಯಾಂಕರ್ ನಲ್ಲಿ ಗಾಂಜಾವನ್ನು ಸಾಗಾಣೆ ಮಾಡಲಾಗುತ್ತಿತ್ತು. ಟ್ಯಾಂಕ್ರ ದುಗ್ಗಿ ನಾಯ್ಡು ಅವರಿಗೆ ಸೇರಿದ್ದಾಗಿತ್ತು. ಹೈದರಾಬಾದ್ ನಿಂದ ಟ್ಯಾಂಕರ್ ನ್ನು ತರಲಾಗಿದ್ದು, ಟ್ಯಾಂಕರ್ ನ್ನು ಗಾಂಜಾ ಸಾಗಾಣಿಕೆಗೆ ಬಳಕೆ ಮಾಡುತ್ತಿದ್ದರು. ಟ್ಯಾಂಕರ್ ಅಲ್ಲದೆಯೇ ಸ್ಕಾರ್ಪಿಯೋ ಕಾರಿನಲ್ಲೂ ಗಾಂಜಾವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


