ವಿಶಾಖಪಟ್ಟಣ

ವಿಶಾಖಪಟ್ಟಣದಲ್ಲಿ RSS, 32 ಅಂಗಸಂಸ್ಥೆಗಳ ಸಭೆ; Gen-Z ಗಳ ಬಗ್ಗೆ ಮಹತ್ವದ ಚರ್ಚೆ
ಪರಸ್ಪರ ಸಮನ್ವಯ ಮತ್ತು ಸಹಕಾರವನ್ನು ಹೆಚ್ಚಿಸುವಂತಹ ವಿಷಯಗಳನ್ನು ಹಾಗೂ ಸಾರ್ವಜನಿಕ ಕಲ್ಯಾಣ ಮತ್ತು ನೀತಿ-ಸಂಬಂಧಿತ ವಿಷಯಗಳನ್ನು ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಅವರು ಹೇಳಿದರು.

ಸುರಂಗ ರಸ್ತೆ ಯೋಜನೆ: ತಂತ್ರಜ್ಞಾನ ಅರಿಯಲು ವಿಶಾಖಪಟ್ಟಣಂ ತೆರಳಿದ BBMP ಎಂಜಿನಿಯರ್‌ಗಳು; ಶೀಘ್ರದಲ್ಲೇ ಕಾಶ್ಮೀರಕ್ಕೂ ಭೇಟಿ
ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ಉಪಮುಖ್ಯಮಂತ್ರಿ ಮತ್ತು ಬೆಂಗಳೂರು ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ್ ಈ ಯೋಜನೆಗೆ ಒತ್ತಾಯಿಸುತ್ತಿದ್ದಾರೆ.

ಆಂಧ್ರಪ್ರದೇಶ: ಸಿಂಹಾಚಲ ದೇವಸ್ಥಾನ ಚಂದನೋತ್ಸವ ವೇಳೆ ಗೋಡೆ ಕುಸಿತ, 8 ಸಾವು; ತಲಾ 25 ಲಕ್ಷ ರೂ ಪರಿಹಾರ ಘೋಷಣೆ; Video
ವಿಶಾಖಪಟ್ಟಣಂನ ಶ್ರೀ ವರಾಹಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಚಂದನೋತ್ಸವ ಕಾರ್ಯಕ್ರಮ ನಡೆಯತ್ತಿತ್ತು. ಉತ್ಸವ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಅಪಾರ ಸಂಖ್ಯೆಯಲ್ಲಿ ಜನರ ಸೇರಿದ್ದರು. ಈ ವೇಳೆ ಗೋಡೆ ಕುಸಿದು ಬಿದ್ದಿದೆ.

ಇಂಗ್ಲೆಂಡ್ ವಿರುದ್ಧ ಗೆಲುವು: ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ಪಟ್ಟಿಯಲ್ಲಿ ಮೇಲೇರಿದ ಟೀಂ ಇಂಡಿಯಾ
ಇಂಗ್ಲೆಂಡ್ ತಂಡದ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಜಯ ಗಳಿಸಿದ ಭಾರತ ತಂಡ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ಅಂಕಪಟ್ಟಿಯಲ್ಲಿ ಮೇಲೇರಿದೆ.

ಬುಮ್ರಾ, ಅಶ್ವಿನ್ ಮ್ಯಾಜಿಕ್: ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ನಲ್ಲಿ ಭಾರತಕ್ಕೆ ಭರ್ಜರಿ ಜಯ, ಸರಣಿ ಸಮಬಲ
ಇಂಗ್ಲೆಂಡ್ ವಿರುದ್ಧ ಎರಡನೇ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಶರ್ಮಾ ಬಳಗವು ಗೆಲುವು ಸಾಧಿಸುವ ಮೂಲಕ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-1ರ ಸಮಬಲ ಸಾಧಿಸಿದೆ.

2ನೇ ಟೆಸ್ಟ್: 2ನೇ ಇನ್ನಿಂಗ್ಸ್ ನಲ್ಲಿ ಭಾರತ 255ರನ್ ಗಳಿಗೆ ಆಲೌಟ್, ಇಂಗ್ಲೆಂಡ್ ಗೆ ಗೆಲ್ಲಲು 399 ರನ್ ಗಳ ಗುರಿ
ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸ್ ನಲ್ಲಿ ಭಾರತ ತಂಡ 255ರನ್ ಗಳಿಗೆ ಸರ್ವಪತನ ಕಂಡಿದ್ದು, ಆ ಮೂಲಕ 143 ರನ್ ಗಳ ಮುನ್ನಡೆಯೊಂದಿಗೆ ಇಂಗ್ಲೆಂಡ್ ಗೆ ಗೆಲ್ಲಲು 399ರನ್ ಗಳ ಬೃಹತ್ ಗುರಿ ನೀಡಿದೆ.

ವಿಶಾಖಪಟ್ಟಣ: ಕಟ್ಟಡ ಕುಸಿತ, ಮೂವರ ಸಾವು; ಹುಟ್ಟುಹಬ್ಬದ ಸಂಭ್ರಮದಲ್ಲಿದ್ದವರಿಗೆ ಕಾದಿತ್ತು ಆಘಾತ!
ಮಹಾರಾಣಿಪೇಟೆಯ ರಾಮಜೋಗಿಪೇಟೆಯಲ್ಲಿ ಗುರುವಾರ ಮುಂಜಾನೆ ಮೂರು ಅಂತಸ್ತಿನ ಕಟ್ಟಡ ಕುಸಿದು ಬಿದ್ದ ಪರಿಣಾಮ ಕುಟುಂಬದ ಮೂವರು ಸಾವನ್ನಪ್ಪಿದ್ದಾರೆ

ಸಿಕಂದರಾಬಾದ್-ವಿಶಾಖಪಟ್ಟಣಂ ವಂದೇ ಭಾರತ್ ರೈಲಿಗೆ ಪ್ರಧಾನಿ ಮೋದಿ ಚಾಲನೆ
ತೆಲಂಗಾಣದ ಸಿಕಂದರಾಬಾದ್ ಮತ್ತು ಆಂಧ್ರಪ್ರದೇಶದ ಬಂದರು ನಗರವಾದ ವಿಶಾಖಪಟ್ಟಣ ನಡುವಿನ ವಂದೇ ಭಾರತ್ ರೈಲು ಸೇವೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾನುವಾರ ಚಾಲನೆ ನೀಡಿದ್ದಾರೆ.

'ದಯವಿಟ್ಟು ನನ್ನ ಮಗುವನ್ನು ಉಳಿಸಿ': ಆಸ್ಪತ್ರೆ ಆವರಣದಲ್ಲಿ ತಾಯಿಯ ಆಕ್ರಂದನದ ನಡುವೆಯೇ ಪ್ರಾಣ ಬಿಟ್ಟ ಕೋವಿಡ್ ಸೋಂಕಿತ ಮಗು
ಆಂಧ್ರಪ್ರದೇಶದ ವಿಶಾಖಪಟ್ಟಣದ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕು ಪೀಡಿತ ತನ್ನ ಮಗುವಿಗೆ ಚಿಕಿತ್ಸೆ ನೀಡುವಂತೆ ತಾಯಿ ವೈದ್ಯರನ್ನು ಗೋಗರೆಯುತ್ತಿದ್ದ ಬೆನ್ನಲ್ಲೇ ಮಡಿಲಲ್ಲಿದ್ದ ಮಗು ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಬೆಳಕಿಗೆ ಬಂದಿದೆ.

