Gadag

ಗದಗ: ಬಸ್ ಸೌಲಭ್ಯವಿಲ್ಲದೆ ಪರೀಕ್ಷಾ ಕೇಂದ್ರಕ್ಕೆ ತೆರಳಲು ಟ್ರ್ಯಾಕ್ಟರ್, ಆಟೋಗಳಲ್ಲಿ ಬರುತ್ತಿರುವ ವಿದ್ಯಾರ್ಥಿಗಳು
ಜಿಲ್ಲೆಯ ರಾನ್ ತಾಲೂಕಿನ ಪ್ರವಾಹ ಪೀಡಿತ ಪ್ರದೇಶಗಳ ಸುಮಾರು 400 ದ್ವಿತೀಯ ವರ್ಷದ ಪದವಿ ಪೂರ್ವ ವಿದ್ಯಾರ್ಥಿಗಳು ತಮ್ಮ ಗ್ರಾಮಗಳಿಂದ 60 ಕಿಮೀ ದೂರದಲ್ಲಿರುವ ತಮ್ಮ ಪರೀಕ್ಷಾ ಕೇಂದ್ರವನ್ನು ತಲುಪಲು ಕಷ್ಟಪಡುತ್ತಿದ್ದಾರೆ. ಪ್ರವಾಹ ಪೀಡಿತ ಗ್ರಾಮಗಳಿಗೆ ಬಸ್ ಸೌಲಭ್ಯವಿಲ್ಲ.

ಗದಗ: ಬಿಜೆಪಿ ಟಿಕೆಟ್ ಆಕಾಂಕ್ಷಿಯಿಂದ 'ಒಂದು ರೂಪಾಯಿ-ಒಂದು ರೊಟ್ಟಿ' ಅಭಿಯಾನ ಆರಂಭ
ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದ್ದು, ಈ ನಡುವಲ್ಲೇ ಗದಗದಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಯೊಬ್ಬರು ‘ಒಂದು ರೂಪಾಯಿ-ಒಂದು ರೊಟ್ಟಿ’ ಪ್ರಚಾರವನ್ನು ಆರಂಭಿಸಿದ್ದಾರೆ.

ಬಂಜರು ಭೂಮಿಯಲ್ಲಿ ನಳನಳಿಸುವ ಹಸಿರು: 10 ಸಾವಿರಕ್ಕೂ ಹೆಚ್ಚು ಗಿಡ, ಮರ ನೆಟ್ಟು ಪೋಷಿಸುತ್ತಿರುವ ಕರ್ನಾಟಕ ವಿವಿ!
ಉಸಿರಾಡುವ ಗಾಳಿ ಪ್ರಾಣವಾಯು. ಇಂತಹ ಗಾಳಿಯೇ ವಿಷವಾದರೆ ಜೀವಿಗಳ ಜೀವನ ನಿಜಕ್ಕೂ ನರಕ. ಉಸಿರಾಡಲು ಶುದ್ಧ ಗಾಳಿಯನ್ನು ನೀಡುವ ಮರಗಳನ್ನು ವರ್ಷಕ್ಕೊಮ್ಮೆ ಪರಿಸರ ದಿನದಂದು ಮಾತ್ರ ನೆನಪು ಮಾಡಿಕೊಳ್ಳುವ ಪರಿಸ್ಥಿತಿ ಇದೆ. ಆದರೆ, ಮರಗಳನ್ನು ಕೇವಲ ನೆನಪು ಮಾಡಿಕೊಂಡರೆ ಸಾಲದು. ಅವುಗಳನ್ನು ಉಳಿಸಿ, ಬೆಳೆಸುವತ್ತ ಸಹ ಗಮನಹರಿಸುವುದು ಮುಖ್ಯವಾಗಿದೆ.

ದೊರಕದ ಭೂಪತ್ರ: ಲಕ್ಕುಂಡಿ ಗ್ರಾಮಸ್ಥರ ಧರಣಿ; ಬೇಡಿಕೆ ಈಡೇರಿಸದಿದ್ದರೆ ವಿಧಾನಸಭೆ ಚುನಾವಣೆ ಬಹಿಷ್ಕಾರ!
ಜಮೀನಿಗೆ ಸಂಬಂಧಿಸಿದ ದಾಖಲೆ ಪತ್ರ ನೀಡಲು ವಿಳಂಬ ಮಾಡುತ್ತಿರುವುದರಿಂದ ಆಕ್ರೋಶಗೊಂಡ ಗದಗ ಜಿಲ್ಲೆಯ ಲಕ್ಕುಂಡಿಯ 72 ಕುಟುಂಬಗಳು ಕಳೆದ ಎರಡು ದಿನಗಳಿಂದ ಗ್ರಾಮ ಪಂಚಾಯಿತಿ ಕಚೇರಿ ಎದುರು ಧರಣಿ ನಡೆಸುತ್ತಿದ್ದು, ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ವಿಧಾನಸಭೆ ಚುನಾವಣೆ ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಹಿಟ್ ಆ್ಯಂಡ್ ರನ್ ಕೇಸ್: ಪೊಲೀಸ್ ಹೆಡ್ ಕಾನ್ಸ್ಸ್ಟೇಬಲ್ ಸಾವು
ಕರ್ತವ್ಯ ಮುಗಿಸಿ ಮನೆಗೆ ತೆರಳುತ್ತಿದ್ದ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಅಪಘಾತದಲ್ಲಿ ಮೃತಪಟ್ಟ ಘಟನೆ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಬರದೂರು ಬಳಿ ನಡೆದಿದೆ.

ಗಣಿ ದಂಧೆಕೋರರಿಂದ ಕಪ್ಪತಗುಡ್ಡದ ಗುಡ್ಡವನ್ನು ಉಳಿಸಿ: ಪ್ರಧಾನಿ ಮೋದಿಗೆ ಪತ್ರ ಬರೆದ ನಂದಿವೇರಿ ಶಿವಕುಮಾರ ಸ್ವಾಮೀಜಿ
ಗಣಿ ದಂಧೆಕೋರರಿಂದ ಕಪ್ಪತಗುಡ್ಡದ ಗುಡ್ಡವನ್ನು ಉಳಿಸುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ನಂದಿವೇರಿಮಠದ ಶಿವಕುಮಾರ ಸ್ವಾಮೀಜಿ ಅವರು ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ.

ಗದಗವನ್ನು ಮೊಬೈಲ್ ಕಳ್ಳತನ ಮುಕ್ತ ನಗರ'ವನ್ನಾಗಿಸಲು 'ಮೊಬಿಫೈ ತಂತ್ರಜ್ಞಾನ' ಆರಂಭಿಸಿದ ಪೊಲೀಸರು, ಜನರಿಂದ ಉತ್ತಮ ಪ್ರತಿಕ್ರಿಯೆ
ಗದಗವನ್ನು 'ಮೊಬೈಲ್ ಕಳ್ಳತನ ಮುಕ್ತ ನಗರ'ವನ್ನಾಗಿಸಲು ಗದಗ ಪೊಲೀಸ್ ಇಲಾಖೆ ಮೊಬಿಫೈ ಎಂಬ ಉಪಕ್ರಮವನ್ನು ಆರಂಭಿಸಿದ್ದು, ಇದಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ.

ಬೆಂಗಳೂರು: ನೆರೆಹೊರೆಯವರ ಮುಂದೆ ಕೂಗಾಡಿದ ಕುಡುಕ ತಂದೆಯ ಹತ್ಯೆಗೈದ ಪುತ್ರ
ನೆರೆಹೊರೆಯವರ ಮುಂದೆ ಕುಟುಂಬಸ್ಥರ ಮೇಲೆ ಕೂಗಾಡಿದ ಕುಡಕ ತಂದೆಯನ್ನು ಪುತ್ರನೊಬ್ಬ ಹತ್ಯೆ ಮಾಡಿರುವ ಘಟನೆ ನರಗುಂದ ತಾಲೂಕಿನ ಹದ್ಲಿ ಗ್ರಾಮದಲ್ಲಿ ನಡೆದಿದೆ.

ಗದಗ: ಆಟೋ- ಮಿನಿ ಬಸ್ ನಡುವೆ ಭೀಕರ ಅಪಘಾತ; ಮೂರು ಮಂದಿ ಸ್ಥಳದಲ್ಲೇ ಸಾವು, 8 ಮಂದಿಗೆ ಗಾಯ
ಭಾನುವಾರ ರಾತ್ರಿ ಬೆಟಗೇರಿ ಹೊರವಲಯದಲ್ಲಿ ಮಿನಿ ಬಸ್‌ಗೆ ಆಟೋರಿಕ್ಷಾ ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಎಂಟು ಮಂದಿ ಗಾಯಗೊಂಡಿದ್ದಾರೆ.

