ಬೆಂಗಳೂರು: ನೆರೆಹೊರೆಯವರ ಮುಂದೆ ಕೂಗಾಡಿದ ಕುಡುಕ ತಂದೆಯ ಹತ್ಯೆಗೈದ ಪುತ್ರ
ನೆರೆಹೊರೆಯವರ ಮುಂದೆ ಕುಟುಂಬಸ್ಥರ ಮೇಲೆ ಕೂಗಾಡಿದ ಕುಡಕ ತಂದೆಯನ್ನು ಪುತ್ರನೊಬ್ಬ ಹತ್ಯೆ ಮಾಡಿರುವ ಘಟನೆ ನರಗುಂದ ತಾಲೂಕಿನ ಹದ್ಲಿ ಗ್ರಾಮದಲ್ಲಿ ನಡೆದಿದೆ.

ಗದಗ: ನೆರೆಹೊರೆಯವರ ಮುಂದೆ ಕುಟುಂಬಸ್ಥರ ಮೇಲೆ ಕೂಗಾಡಿದ ಕುಡಕ ತಂದೆಯನ್ನು ಪುತ್ರನೊಬ್ಬ ಹತ್ಯೆ ಮಾಡಿರುವ ಘಟನೆ ನರಗುಂದ ತಾಲೂಕಿನ ಹದ್ಲಿ ಗ್ರಾಮದಲ್ಲಿ ನಡೆದಿದೆ.
ಮಲಕಸಾಬ್ ಕಾಳೇಖಾನ್ (40) ಮೃತ ವ್ಯಕ್ತಿಯಾಗಿದ್ದಾರೆ. ಮೌಲಾಸಾಬ್ ಕಾಳೇಖಾನ್ ತಂದೆಯನ್ನು ಹತ್ಯೆ ಮಾಡಿದ ವ್ಯಕ್ತಿಯಾಗಿದ್ದಾರೆ.
ಫೆಬ್ರವರಿ 16ರ ರಾತ್ರಿ 10 ಗಂಟೆ ಸುಮಾರಿಗೆ ಮಲಕಸಾಬ್ ಕಾಳೇಖಾನ್ ಕುಡಿದು ಮನೆಗೆ ಬಂದಿದ್ದು, ಹೊರಗೆ ನಿಂತು ಕುಟುಂಬಸ್ಥರ ಮೇಲೆ ಕೂಗಾಡಲು ಆರಂಭಿಸಿದ್ದಾರೆ. ಈ ವೇಳೆ ಕುಟುಂಬಸ್ಥರು ಮನೆಗೆ ಬಂದು ಕುಳಿತು ಮಾತನಾಡುವಂತೆ ತಿಳಿಸಿದ್ದಾರೆ. ಆದರೂ ಕೇಳದ ಮಲಕಸಾಬ್ ಕೂಗಾಡುವುದನ್ನು ಮುಂದುವರೆಸಿದ್ದಾರೆ. ಇದರಿಂದ ಕೋಪಗೊಂಡ ಮಲಕಸಾಬ್ ಅವರು ಕೊಡಲಿ ತೆಗೆದುಕೊಂಡು ತಂದೆಯ ಕುತ್ತಿಗೆಗೆ ಹೊಡೆದಿದ್ದಾನೆ.
ಕೂಡಲೇ ಮಲಕಸಾಬ್ ಕೆಳಗೆ ಬಿದ್ದಿದ್ದು, ನೆರೆಮನೆಯವರು 108 ಆ್ಯಂಬುಲೆನ್ಸ್'ಕರೆ ಮಾಡಿ ನರಗುಂದ ತಾಲೂಕು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್'ಗೆ ಕರೆದೊಯ್ಯುವಂತೆ ಸಲಹೆ ನೀಡಿದ್ದಾರೆ. ಕಿಮ್ಸ್'ಗೆ ಕರೆದೊಯ್ಯುವಾಗ ಮಾರ್ಗಮಧ್ಯೆಯೇ ಮಲಕಸಾಬ್ ಅವರು ಮೃತಪಟ್ಟಿದ್ದಾರೆ.
ಘಟನೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮಲಕಸಾಬ್ ಅವರ ಪುತ್ರನನ್ನು ಬಂಧನಕ್ಕೊಳಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


