Gadag

ದಾಖಲೆ ಇಲ್ಲದ ಖಾಸಗಿ ಬಸ್ ವಶಕ್ಕೆ: ಗದಗ ಹೊರವಲಯದಲ್ಲಿ ಊಟ-ನಿದ್ರೆ ಇಲ್ಲದೆ 49 ಆಂಧ್ರ ಪ್ರವಾಸಿಗರ ಪರದಾಟ!
ಸೂಕ್ತ ದಾಖಲೆ ಇಲ್ಲದೆ ಸಂಚಾರ ನಡೆಸುತ್ತಿದ್ದ ಖಾಸಗಿ ಬಸ್ ವೊಂದನ್ನು ಆರ್ಟಿಒ ಅಧಿಕಾರಿಗಳು ವಶಕ್ಕೆ ಪಡೆದಿದ್ದು, ಇದರ ಪರಿಣಾಮ ಬಸ್ ನಲ್ಲಿ ಸಂಚರಿಸುತ್ತಿದ್ದ ಆಂಧ್ರಪ್ರದೇಶದ 49 ಪ್ರಯಾಣಿಕರು ಗದಗದ ಹೊರವಲಯದಲ್ಲಿ ಊಟ-ನಿದ್ರೆ ಇಲ್ಲದೆ ಪರದಾಡಿದ ಘಟನೆ ಬೆಳಕಿಗೆ ಬಂದಿದೆ.

ಗದಗ: ಅಪಘಾತದಲ್ಲಿ ಕಾಲು ಕಳೆದುಕೊಂಡ ಯುವಕ, ಮಾನವೀಯತೆ ಮರೆತು ವಿಡಿಯೋ ಮಾಡಿದ ಜನ!
ಬೈಕ್ನಿಂದ ಕೆಳಗೆ ಬಿದ್ದ ಯುವಕನ ಮೈಮೇಲೆ ಟಿಪ್ಪರ್ ಹರಿದು ಕಾಲು ಕಳೆದುಕೊಂಡ ಘಟನೆ ಗದಗ ಜಿಲ್ಲೆ ಮಲ್ಲಸಮುದ್ರ ಗ್ರಾಮದ ಬಳಿ ನಡೆದಿದೆ.

ಗದಗ: ರಥೋತ್ಸವದ ವೇಳೆ ಚಕ್ರದಡಿ ಸಿಲುಕಿ ಇಬ್ಬರು ಭಕ್ತರ ದಾರುಣ ಸಾವು!
ರಥೋತ್ಸವದ ವೇಳೆ ಚಕ್ರದಡಿ ಸಿಲುಕಿ ಇಬ್ಬರು ಭಕ್ತರು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟ ಘಟನೆ ಗದಗ ಜಿಲ್ಲೆಯ ರೋಣ ಪಟ್ಟಣದಲ್ಲಿ ಶನಿವಾರ ವರದಿಯಾಗಿದೆ.

ಕಿಡ್ನಿ ಕಸಿ ಶಸ್ತ್ರಚಿಕಿತ್ಸೆಯಲ್ಲಿ ಹೊಸ ಭರವಸೆ ಮೂಡಿಸಿದ ಗದಗದ ಗ್ರಾಮೀಣ ಆಸ್ಪತ್ರೆ; ಅತ್ಯಲ್ಪ ವೆಚ್ಚದಲ್ಲಿ ಸೌಲಭ್ಯ!
ವೈದ್ಯಕೀಯ ಕ್ಷೇತ್ರದಲ್ಲಿನ ಪ್ರಗತಿಗಳು ರೋಗಿಗಳನ್ನು ಸಾವಿನ ದವಡೆಯಿಂದ ಪಾರು ಮಾಡಿ ಆಶಾಕಿರಣ ಮೂಡಿಸುತ್ತಿವೆ. ಆದರೆ ಅದಕ್ಕೆ ಭರಿಸಬೇಕಿರುವ ವೆಚ್ಚಗಳನ್ನು ಹೊಂದಿಸುವುದು ಅನೇಕರಿಗೆ ಕಷ್ಟ. ಪ್ರಮುಖವಾಗಿ ಈ ಸಮಸ್ಯೆ ಗ್ರಾಮೀಣ ಭಾಗದವರನ್ನು ಹೆಚ್ಚು ಬಾಧಿಸುತ್ತದೆ.

ಮುಂಡರಗಿ: ಬೀಯರ್ ಬಾಟಲಿಯಿಂದ ಹೊಡೆದು ಯುವಕನ ಹತ್ಯೆ!
ಯುವಕನೋರ್ವನ ತಲೆಗೆ ಬೀಯರ್ ಬಾಟಲಿಯಿಂದ ಹೊಡೆದು ಹತ್ಯೆ ಮಾಡಿರುವ ಘಟನೆ ಗದಗ ಜಿಲ್ಲೆಯ ಮುಂಡರಗಿಯಲ್ಲಿ ನಡೆದಿದೆ. ರಾತ್ರಿ ಮೂವರು ಗೆಳೆಯರು ಭರ್ಜರಿ ಎಣ್ಣೆ ಪಾರ್ಟಿ ಮಾಡಿ ನಿದ್ರೆ ಹೋಗಿದ್ದು, ನಡು ರಾತ್ರಿಯಲ್ಲಿ ಓರ್ವನ ಹತ್ಯೆಯಾಗಿದೆ. ಪಾರ್ಟಿ ಮಾಡಿದ ಗೆಳೆಯರು ಕಂಗಾಲಾಗಿ ಊರಿಗೆ ಬಂದು ವಿಷಯ ತಿಳಿಸಿದ್ದಾರೆ.

ಗದಗ: ನಾಲ್ವರು ಅಮಾಯಕರ ಕೊಲೆ ಪ್ರಕರಣ ಭೇದಿಸಿದ ಪೊಲೀಸರು; ತಂದೆ-ತಾಯಿ ಕೊಲೆಗೆ ಸುಪಾರಿ ಕೊಟ್ಟ ಮಗ ಸೇರಿ 8 ಜನರ ಬಂಧನ
ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಗದಗ ಜಿಲ್ಲೆಯ ಬೆಟಗೇರಿಯಲ್ಲಿ ನಾಲ್ವರು ಅಮಾಯಕರ ಕೊಲೆ ಪ್ರಕರಣದ ರಹಸ್ಯವನ್ನು ಪೊಲೀಸರು ಬೇಧಿಸಿದ್ದಾರೆ.

ಗದಗ: ನಗರ ಸಭೆ ಉಪಾಧ್ಯಕ್ಷೆಯ ಪುತ್ರ ಸೇರಿ ಒಂದೇ ಕುಟುಂಬದ ನಾಲ್ವರ ಹತ್ಯೆ; ಮಲಗಿದ್ದಲ್ಲೇ ಭೀಕರ ಕೊಲೆ!
ಗದಗ- ಬೆಟಗೇರಿ ನಗರಗರಸಭೆ ಉಪಾಧ್ಯಕ್ಷೆಯ ಪುತ್ರ ಸೇರಿದಂತೆ ಮಲಗಿದಲ್ಲೇ ಒಂದೇ ಕುಟುಂಬದ ನಾಲ್ವರನ್ನು ದುಷ್ಕರ್ಮಿಗಳು ಭೀಕರವಾಗಿ ಕೊಲೆ ಮಾಡಿರುವ ಘಟನೆ ನಗರದ ದಾಸರ ಓಣಿಯಲ್ಲಿ ನಡೆದಿದೆ.

RSS ಸಮವಸ್ತ್ರದಲ್ಲೇ ಬಿಜೆಪಿ ಕಾರ್ಯಕರ್ತ ಕಾಂಗ್ರೆಸ್ ಸೇರ್ಪಡೆ!
ಬಿಜೆಪಿ ಹಿರಿಯ ಕಾರ್ಯಕರ್ತನೋರ್ವ ಆರ್ಎಸ್ಎಸ್ ಸಮವಸ್ತ್ರದಲ್ಲೇ ಕಾಂಗ್ರೆಸ್ ಸೇರ್ಪಡೆಯಾಗಿ ಎಲ್ಲರ ಗಮನಸೆಳೆದಿದ್ದಾರೆ.

ನರೇಗಾ ಯೋಜನೆ ಎಫೆಕ್ಟ್: ಜನರ ವಲಸೆ ಪ್ರಮಾಣದಲ್ಲಿ ಇಳಿಕೆ; ಸ್ವಗ್ರಾಮದಲ್ಲೇ ಬದುಕು ಕಟ್ಟಿಕೊಳ್ಳಲು ಆಸಕ್ತಿ!
ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಕೂಲಿ ಆಧರಿತ ಕಾಮಗಾರಿಗಳು ಪರಿಣಾಮಕಾರಿ ರೀತಿಯಲ್ಲಿ ಕೆಲಸ ಮಾಡುತ್ತಿದ್ದು, ಜನರು ಗುಳೆ ಹೋಗದೆ ಯೋಜನೆಯ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ.

