ಮುಂಡರಗಿ: ಬೀಯರ್ ಬಾಟಲಿಯಿಂದ ಹೊಡೆದು ಯುವಕನ ಹತ್ಯೆ!
ಯುವಕನೋರ್ವನ ತಲೆಗೆ ಬೀಯರ್ ಬಾಟಲಿಯಿಂದ ಹೊಡೆದು ಹತ್ಯೆ ಮಾಡಿರುವ ಘಟನೆ ಗದಗ ಜಿಲ್ಲೆಯ ಮುಂಡರಗಿಯಲ್ಲಿ ನಡೆದಿದೆ. ರಾತ್ರಿ ಮೂವರು ಗೆಳೆಯರು ಭರ್ಜರಿ ಎಣ್ಣೆ ಪಾರ್ಟಿ ಮಾಡಿ ನಿದ್ರೆ ಹೋಗಿದ್ದು, ನಡು ರಾತ್ರಿಯಲ್ಲಿ ಓರ್ವನ ಹತ್ಯೆಯಾಗಿದೆ. ಪಾರ್ಟಿ ಮಾಡಿದ ಗೆಳೆಯರು ಕಂಗಾಲಾಗಿ ಊರಿಗೆ ಬಂದು ವಿಷಯ ತಿಳಿಸಿದ್ದಾರೆ.

ಮುಂಡರಗಿ: ಯುವಕನೋರ್ವನ ತಲೆಗೆ ಬೀಯರ್ ಬಾಟಲಿಯಿಂದ ಹೊಡೆದು ಹತ್ಯೆ ಮಾಡಿರುವ ಘಟನೆ ಗದಗ ಜಿಲ್ಲೆಯ ಮುಂಡರಗಿಯಲ್ಲಿ ನಡೆದಿದೆ. ರಾತ್ರಿ ಮೂವರು ಗೆಳೆಯರು ಭರ್ಜರಿ ಎಣ್ಣೆ ಪಾರ್ಟಿ ಮಾಡಿ ನಿದ್ರೆ ಹೋಗಿದ್ದು, ನಡು ರಾತ್ರಿಯಲ್ಲಿ ಓರ್ವನ ಹತ್ಯೆಯಾಗಿದೆ. ಪಾರ್ಟಿ ಮಾಡಿದ ಗೆಳೆಯರು ಕಂಗಾಲಾಗಿ ಊರಿಗೆ ಬಂದು ವಿಷಯ ತಿಳಿಸಿದ್ದಾರೆ.
ಸುಭಾಷ್ ನಾಯಕ್ (23) ಕೊಲೆಯಾದ ಯುವಕ. ಕೊಪ್ಪಳ ಜಿಲ್ಲೆ ಹೈದರ್ ನಗರ ತಾಂಡಾದ ನಿವಾಸಿಯಾಗಿದ್ದು, ಬುಧವಾರ ರಾತ್ರಿ ಹೊರವಲಯದಲ್ಲಿ ಮೂವರು ಗೆಳೆಯರು ಸೇರಿ ಪಾರ್ಟಿ ಮಾಡಿದ್ದಾರೆ. ಆದರೆ, ತಡರಾತ್ರಿ ನಡುರಾತ್ರಿ ಎದ್ದು ನೋಡಿದಾಗ ಸುಭಾಷ್ ಕೊಲೆಯಾಗಿದ್ದಾನೆ. ಗಾಬರಿಗೊಂಡ ಯುವಕರು ತಾಂಡಾಕ್ಕೆ ಹೋಗಿ ವಿಷಯ ತಿಳಿಸಿದ್ದಾರೆ.
ಜೊತೆಗಿದ್ದ ಗೆಳೆಯರು ನೀಡುತ್ತಿರುವ ಮಾಹಿತಿ ಗೊಂದಲಕಾರಿಯಾಗಿದ್ದು, ಅನುಮಾನ ಮೂಡಿದೆ. ಸ್ಥಳಕ್ಕೆ ಮುಂಡರಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶ್ವಾನದಳ, ಫಾರೆನ್ಸಕ್ ತಂಡದಿಂದ ಪರಿಶೀಲನೆ ನಡೆದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



