Forest

ಚಂದ್ರಮೋಹನ್ ನಿರ್ದೇಶನದ ಸಿನಿಮಾ ಟೈಟಲ್ ಘೋಷಣೆ; 'ಫಾರೆಸ್ಟ್' ಚಿತ್ರದಲ್ಲಿ ಬಹುತಾರಾಗಣ
ಈ ಹಿಂದೆ ಡಬಲ್ ಇಂಜಿನ್ ಮತ್ತು ಬ್ರಹ್ಮಚಾರಿ ಚಿತ್ರಗಳನ್ನು ನಿರ್ದೇಶಿಸಿದ್ದ ಚಂದ್ರಮೋಹನ್ ಅವರು ತಮ್ಮ ಮೂರನೇ ಸಿನಿಮಾ ನಿರ್ದೇಶಿಸಲು ಸಿದ್ಧರಾಗಿದ್ದಾರೆ ಎಂದು ನಾವು ಮೊದಲೇ ವರದಿ ಮಾಡಿದ್ದೆವು. ಇದು ಬಹು ತಾರಾಗಣದ ಚಿತ್ರವಾಗಿದ್ದು, ನಟರಾದ ಅನೀಶ್, ಗುರುನಂದನ್, ಚಿಕ್ಕಣ್ಣ ಮತ್ತು ರಂಗಾಯಣ ರಘು ಇದ್ದಾರೆ.

ಕೊಡಗು: ಅರಣ್ಯ ವಲಯದಲ್ಲಿ ತಾಪಮಾನ ಏರಿಕೆ; ಬಿಸಿಲಿನ ಝಳಕ್ಕೆ ಬೇಸತ್ತು ಹಳ್ಳಿಗಳತ್ತ ನುಗ್ಗುತ್ತಿವೆ ಆನೆಗಳು!
ಅರಣ್ಯ ವಲಯದಲ್ಲಿ ಹೆಚ್ಚುತ್ತಿರುವ ತಾಪಮಾನ ಹಾಗೂ ನೀರಿನ ಮಟ್ಟ ಕುಸಿತದಿಂದಾಗಿ ಆನೆಯ ಹಿಂಡುಗಳು ನೀರು ಮತ್ತು ಮೇವನ್ನು ಅರಸಿ ಸೋಮವಾರಪೇಟೆ ತಾಲೂಕಿನ ಕಾಜೂರು ಗ್ರಾಮದ ಎಸ್ಟೇಟ್‌ಗಳಿಗೆ ಆಗಾಗ್ಗೆ ಭೇಟಿ ನೀಡುತ್ತಿವೆ. ಇದು ನಿವಾಸಿಗಳಲ್ಲಿ ಭಯ ಹುಟ್ಟಿಸಿದೆ.

ಸಸಿಗಳ ನೆಡುತ್ತಿದ್ದರೂ ಅರಣ್ಯ ಮಾತ್ರ ವಿಸ್ತರಣೆಯಾಗುತ್ತಿಲ್ಲ: ಸಿಎಂ ಸಿದ್ದರಾಮಯ್ಯ
ರಾಜ್ಯದ ಭೂ ಪ್ರದೇಶದಲ್ಲಿ ಶೇ. 20 ರಷ್ಟು ಮಾತ್ರ ಅರಣ್ಯ ಪ್ರದೇಶವಿದ್ದು, ಕನಿಷ್ಠ ಶೇ. 33 ಕ್ಕೆ ಅರಣ್ಯ ಪ್ರದೇಶದ ವಿಸ್ತರಣೆಯಾಗಬೇಕಿದೆ. ಆಗಮಾತ್ರ ಹವಾಮಾನ ವೈಪರೀತ್ಯಗಳನ್ನು ತಡೆಯಲು ಸಾಧ್ಯ. ಈ ವರ್ಷ ಮಳೆಯಿಲ್ಲದೇ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಹೇಳಿದರು.

ಅರಣ್ಯ ಒತ್ತುವರಿದಾರರ ವಿರುದ್ಧ ಕ್ರಮ: ಸಚಿವ ಈಶ್ವರ್ ಖಂಡ್ರೆ
ಅರಣ್ಯ ಭೂಮಿ ಒತ್ತುವರಿ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪರಿಸರ ಮತ್ತು ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಮಂಗಳವಾರ ಹೇಳಿದ್ದಾರೆ.

ಹಾಸನ ಪಶ್ಚಿಮ ಘಟ್ಟದಲ್ಲಿ ಕಾಡ್ಗಿಚ್ಚು: ಶೇ.40ರಷ್ಟು ಗಾಯಗೊಂಡಿದ್ದರೂ ಸಹಾಯಕ್ಕಾಗಿ 4 ಕಿಮೀ ನಡೆದಿದ್ದ ಅರಣ್ಯ ವೀಕ್ಷಕ!
ಫೆಬ್ರವರಿ 16 ರಂದು ಸಕಲೇಶಪುರದಲ್ಲಿ ಕಾಡ್ಗಿಚ್ಚು ನಂದಿಸಲು ಹೋಗಿ ಶೇ 40ರಷ್ಟು ಸುಟ್ಟ ಗಾಯಕ್ಕೆ ಒಳಗಾಗಿದ್ದ ಅರಣ್ಯ ವೀಕ್ಷಕ ತುಂಗೇಶ್ ಡಿಎಂ (37) ಅವರು, ಸಹಾಯ ಪಡೆದುಕೊಳ್ಳಲು ಸುಮಾರು 4 ಕಿಮೀ ದೂರ ನಡೆದಿದ್ದರು ಎಂಬ ಮಾಹಿತಿ ಇದೀಗ ತಿಳಿದುಬಂದಿದೆ.

ಚಾರ್ಮಾಡಿ ಘಾಟ್‌ನಲ್ಲಿ ಕಾಡ್ಗಿಚ್ಚು: 60 ಎಕರೆ ಅರಣ್ಯ ಬೆಂಕಿಗಾಹುತಿ
ಚಿಕ್ಕಮಗಳೂರು ಜಿಲ್ಲೆಯ ಚಾರ್ಮಾಡಿ ಘಾಟ್ ಸಮೀಪದ ಸೋಮನಕಾಡು ಪ್ರದೇಶದಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಸುಮಾರು 60 ಎಕರೆ ಅರಣ್ಯ ಪ್ರದೇಶ ಬೆಂಕಿಗಾಹುತಿಯಾಗಿದೆ.

ಪಶ್ಚಿಮ ಘಟ್ಟ ರಕ್ಷಣೆಗೆ 50 ವರ್ಷಗಳ ಯೋಜನೆ ರೂಪಿಸಿ: ಅಧಿಕಾರಿಗಳಿಗೆ ಸಿಎಂ ಬೊಮ್ಮಾಯಿ ಸೂಚನೆ
ಜೀವ ವೈವಿಧ್ಯತೆಯ ತಾಣವಾಗಿರುವ ಪಶ್ಚಿಮ ಘಟ್ಟಗಳನ್ನು ರಕ್ಷಿಸಲು ಮುಂದಿನ 50 ವರ್ಷಗಳ ಕಾಲ ಅದರ ರಕ್ಷಣೆಗೆ ವಿಷನ್ ಡಾಕ್ಯುಮೆಂಟ್ ಸಿದ್ಧಪಡಿಸಿ ಮತ್ತು ರಕ್ಷಣೆಗಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಶನಿವಾರ ಸೂಚನೆ ನೀಡಿದರು.

ರಾಜ್ಯದಲ್ಲಿ ಪರಿಸರ ವೃದ್ಧಿಗೆ ಮುಂದಿನ ಬಜೆಟ್‌ನಲ್ಲಿ ವಿಶೇಷ ಯೋಜನೆ: ಸಿಎಂ ಬೊಮ್ಮಾಯಿ
ರಾಜ್ಯದಲ್ಲಿ ಪರಿಸರ ವೃದ್ಧಿಗೆ ಮುಂದಿನ ಬಜೆಟ್‌ನಲ್ಲಿ ವಿಶೇಷ ಯೋಜನೆಯನ್ನು ರೂಪಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶನಿವಾರ ಹೇಳಿದ್ದಾರೆ.

ಕೊಡಗು: ನಕ್ಸಲ್ ವಿರೋಧಿ ಪಡೆ ಕಮಾಂಡೊಗಳಿಂದ ನಕ್ಸಲ್ ಪೀಡಿತ ಪ್ರದೇಶದ ಅರಣ್ಯವಾಸಿಗಳಿಗೆ ಫುಡ್ ಕಿಟ್ ವಿತರಣೆ
ದಟ್ಟ ಅರಣ್ಯದಲ್ಲಿ ಕಾರ್ಯಾಚರಣೆ ನಡೆಸುವ ನಕ್ಸಲ್ ವಿರೋಧಿ ಪಡೆ ಕಮಾಂಡೋಗಳು ಕಾಡಿನಲ್ಲಿರುವ ಬಡ ನಿವಾಸಿಗಳಿಗೆ ಆಹಾರ ಧಾನ್ಯ ವಿತರಿಸಿದ್ದಾರೆ

