FLOODS

ಉತ್ತರ ಕನ್ನಡ: ಪ್ರವಾಹ ಪೀಡಿತರ ರಕ್ಷಣೆಗೆ ಭಾರತೀಯ ಕರಾವಳಿ ರಕ್ಷಣಾ ಪಡೆ, ನೌಕಾದಳ; ಪ್ರವಾಹದಲ್ಲಿ ಕೊಚ್ಚಿಹೋದ ಜನ ಜೀವನ
ಉತ್ತರ ಕರ್ನಾಟಕದಲ್ಲಿ ಮಳೆಯ ಅಬ್ಬರಕ್ಕೆ ನದಿಗಳು ಉಕ್ಕಿ ಹರಿಯುತ್ತಿದ್ದು, ಪ್ರವಾಹದಲ್ಲಿ ಕೊಚ್ಚಿ ಹೋದ ಹಲವು ಮಂದಿ ಸಾವನ್ನಪ್ಪಿದ್ದಾರೆ.

ಹಿಮಾಚಲ ಪ್ರದೇಶದಲ್ಲಿ ಮೇಘಸ್ಫೋಟ; ಧರ್ಮಶಾಲಾದಲ್ಲಿ ಭೀಕರ ಪ್ರವಾಹ, ಕೊಚ್ಚಿ ಹೋದ ಕಾರುಗಳು, ಕುಸಿದ ಕಟ್ಟಡಗಳು
ಹಿಮಾಚಲ ಪ್ರದೇಶದಲ್ಲಿ ಮೇಘಸ್ಫೋಟ ಸಂಭವಿಸಿದ್ದು, ಪರಿಣಾಮ ಉಂಟಾದ ಭಾರಿ ಮಳೆಯಿಂದಾಗಿ ಧರ್ಮಶಾಲಾದಲ್ಲಿ ಭೀಕರ ಪ್ರವಾಹ ಏರ್ಪಟ್ಟಿದೆ.

ಪ್ರವಾಹ ಪರಿಸ್ಥಿತಿ ನಿಭಾಯಿಸಲು ಸಲಹೆ ನೀಡಿ, ಐಫೋನ್ ಗೆಲ್ಲಿ: ಯೂತ್ ಕಾಂಗ್ರೆಸ್ ಹೊಸ ಅಭಿಯಾನ
ರಾಜ್ಯದಲ್ಲಿ ಪದೇ ಪದೇ ಪ್ರವಾಹ ಪರಿಸ್ಥಿತಿ ಎದುರಾಗುತ್ತಿರುವ ಹಿನ್ನೆಲೆಯಲ್ಲಿ ಭಾನುವಾರ ಯುವಕರ ತಂಡವೊಂದು ಲೆಟ್ಸ್ ಟೇಕ್ ಚಾರ್ಜ್ ಎಂಬ 7 ದಿನಗಳ ಶಿಬಿರ ಹಮ್ಮಿಕೊಂಡಿದೆ.

ಹೊಸಕೆರೆಹಳ್ಲಿಯಲ್ಲಿ ಪ್ರವಾಹದಿಂದ ಪುಸ್ತಕಗಳನ್ನು ಕಳೆದುಕೊಂಡಿದ್ದ ಮೂವರು ವಿದ್ಯಾರ್ಥಿಗಳಿಗೆ ಸಿಎಂ ಯಡಿಯೂರಪ್ಪ ನೆರವು
ಸಿಲಿಕಾನ್ ಸಿಟಿಯಲ್ಲಿ ಕೆಲ ದಿನಗಳ ಹಿಂದೆ ಸುರಿದ ಭಾರೀ ಮಳೆಯಿಂದಾಗಿ ಉಂಟಾಗಿದ್ದ ಪ್ರವಾಹಸದಲ್ಲಿ ಪುಸ್ಕಕಗಳನ್ನು ಕಳೆದುಕೊಂಡಿದ್ದ ವಿದ್ಯಾರ್ಥಿಗಳಿಗೆ ಸಿಎಂ ಯಡಿಯೂರಪ್ಪ ಅವರು ನೆರವು ನೀಡಿದ್ದಾರೆ.

ಮಹಾ ಮಳೆ: 532 ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ವಿತರಣೆ, ಹಾನಿಗೊಳಗಾದ ಮನೆಗಳಿಗೆ ರೂ.25 ಸಾವಿರ ಚೆಕ್ ನೀಡಿದ ಪಾಲಿಕೆ
ಕಳೆದ ಶುಕ್ರವಾರ ಸುರಿದ ಧಾರಾಕಾರ ಮಳೆಯಿಂದ ನಗರದಲ್ಲಿ ಹಾನಿಗೊಳಗಾದ 344 ಕುಟುಂಬಗಳಿಕೆ ರಾಜ್ಯ ಸರ್ಕಾರ ತಲಾ ರೂ.25 ಸಾವಿರ ಪರಿಹಾರ ನೀಡಿದೆ.

ಕೊರೋನಾ ನಿಯಂತ್ರಿಸಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ: ಸಂದರ್ಶನದಲ್ಲಿ ಸಚಿವ ಸುಧಾಕರ್
ಕೊರೋನಾ ಸಾಂಕ್ರಾಮಿಕ ರೋಗ ನಡುವಲ್ಲೇ ವೈದ್ಯಕೀಯ ಶಿಕ್ಷಣ ಸಚಿವ ಖಾತೆ ಜೊತೆ ಜೊತೆಗೆ ಆರೋಗ್ಯ ಸಚಿವಾಲಯದ ಖಾತೆಯನ್ನು ವಹಿಸಿಕೊಂಡಿದ್ದ ಸಚಿವ ಸುಧಾಕರ್ ಅವರಿಗೆ ಇದೀಗ ರಾಜ್ಯದಲ್ಲಿ ಎದುರಾಗಿರುವ ಪ್ರವಾಹ ಪರಿಸ್ಥಿತಿ ಕೂಡ ದೊಡ್ಡ ಸವಾಲಾಗಿ ಪರಿಣಿಸಿದೆ.

ಕನ್ನಡ ರಾಜ್ಯೋತ್ಸವ: ಈ ವರ್ಷ ಸಾಧಕರಿಗೆ ಪ್ರಶಸ್ತಿ ಪ್ರದಾನ ಅನಿಶ್ಚಿತ?
ಕನ್ನಡ ರಾಜ್ಯೋತ್ಸವ ಹಬ್ಬಕ್ಕೆ ಇನ್ನು ಕೆಲವೇ ದಿನಗಳು ಬಾಕಿಯಿದ್ದು, ಈ ಬಾರಿಯ ಸಂಭ್ರಮಕ್ಕೆ ಕೊರೋನಾ ನೆರಳು ಬಿದ್ದಿದೆ. ಇದರಂತೆ ಪ್ರಸಕ್ತ ಸಾಲಿನಲ್ಲಿ ಸಾಧಕರಿಕೆ ಪ್ರಶಸ್ತಿ ನೀಡುವುದು ಅನುಮಾನವೆಂದೇ ಹೇಳಲಾಗುತ್ತಿದೆ.

ಪ್ರವಾಹ ಪೀಡಿತ ಪ್ರದೇಶಗಳಿಗೆ ಶೀಘ್ರದಲ್ಲೇ ಕಾಂಗ್ರೆಸ್ ನಾಯಕರ ಭೇಟಿ
ಪ್ರವಾಹದಿಂದಾಗಿ ತತ್ತರಿಸಿರುವ ಜಿಲ್ಲೆಗಳಲ್ಲಿ ಈಗಾಗಲೇ ಮುಖ್ಯಮಂತ್ರಿ ಯಡಿಯೂರಪ್ಪ ಅವರು ವೈಮಾನಿಕ ಸಮೀಕ್ಷೆ ನಡೆಸಿದ್ದು, ಇದೀಗ ಕಾಂಗ್ರೆಸ್ ನಾಯಕರೂ ಕೂಡ ಪ್ರವಾಹ ಪೀಡಿತ ಪ್ರದೇಶಗಳಿಗೆ ಶೀಘ್ರದಲ್ಲೇ ಭೇಟಿ ನೀಡಲಿದ್ದಾರೆ.

ಅತಿವೃಷ್ಟಿಯಿಂದ ಬಾಗಲಕೋಟೆ ಜಿಲ್ಲೆಯಲ್ಲಿ 1500 ಕೋಟಿ ರೂ. ಗಳಿಗೂ ಹೆಚ್ಚು ಹಾನಿ: ಕಾರಜೋಳ
ಜಿಲ್ಲೆಯಲ್ಲಿ ಜು. 25 ರಿಂದ ಅ.15 ವರೆಗೆ ಸುರಿದ ಮಳೆ ಹಾಗೂ ಪ್ರವಾಹದಿಂದ ಕೃಷಿ, ತೋಟಗಾರಿಕೆ, ರೇಷ್ಮೆ, ಲೋಕೋಪಯೋಗಿ, ಪಂಚಾಯತ್ ರಾಜ್ ಸೇರಿ ಇತರೆ ಇಲಾಖೆಗಳಿಗೆ ಸಂಬಂಧಿಸಿ ಒಟ್ಟು 1500 ಕೋಟಿ ರೂ.ಗಳಿಗೂ ಹೆಚ್ಚು ಹಾನಿಯಾಗಿದೆ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ತಿಳಿಸಿದ್ದಾರೆ.

