ಪ್ರವಾಹ ಪರಿಸ್ಥಿತಿ ನಿಭಾಯಿಸಲು ಸಲಹೆ ನೀಡಿ, ಐಫೋನ್ ಗೆಲ್ಲಿ: ಯೂತ್ ಕಾಂಗ್ರೆಸ್ ಹೊಸ ಅಭಿಯಾನ
ರಾಜ್ಯದಲ್ಲಿ ಪದೇ ಪದೇ ಪ್ರವಾಹ ಪರಿಸ್ಥಿತಿ ಎದುರಾಗುತ್ತಿರುವ ಹಿನ್ನೆಲೆಯಲ್ಲಿ ಭಾನುವಾರ ಯುವಕರ ತಂಡವೊಂದು ಲೆಟ್ಸ್ ಟೇಕ್ ಚಾರ್ಜ್ ಎಂಬ 7 ದಿನಗಳ ಶಿಬಿರ ಹಮ್ಮಿಕೊಂಡಿದೆ.

ಬೆಂಗಳೂರು: ರಾಜ್ಯದಲ್ಲಿ ಪದೇ ಪದೇ ಪ್ರವಾಹ ಪರಿಸ್ಥಿತಿ ಎದುರಾಗುತ್ತಿರುವ ಹಿನ್ನೆಲೆಯಲ್ಲಿ ಭಾನುವಾರ ಯುವಕರ ತಂಡವೊಂದು ಲೆಟ್ಸ್ ಟೇಕ್ ಚಾರ್ಜ್ ಎಂಬ 7 ದಿನಗಳ ಶಿಬಿರ ಹಮ್ಮಿಕೊಂಡಿದೆ.
ಬೆಂಗಳೂರು ಯೂತ್ ಕಾಂಗ್ರೆಸ್ ಅಧ್ಯಕ್ಷ ಮೊಹಮದ್ ನಲಪಾಡ್ ಅಧ್ಯಕ್ಷತೆಯಲ್ಲಿ ಶಿಬಿರ ಆರಂಭವಾಗಿದ್ದು ಪ್ರವಾಹ ಪೀಡಿತರಿಗೆ ನೆರವು ನೀಡಲು ಸಲಹೆ ಮತ್ತು ಐಡಿಯಾ ಕೇಳಲಾಯಿತು.
ಮೊದಲ ದಿನದಲ್ಲೇ 10 ಸಾವಿರ ಪ್ರವೇಶಕ್ಕೆ ಅರ್ಜಿ ಬಂದಿದೆ. ಈ ಸರಣಿಯ ಮೊದಲ ಭಾಗವು ಕರ್ನಾಟಕದ, ವಿಶೇಷವಾಗಿ ಬೆಂಗಳೂರಿನ ಮೂಲಸೌಕರ್ಯ ಸಮಸ್ಯೆಗಳನ್ನು ನಿಭಾಯಿಸಲಿದೆ. ಉತ್ತಮ ಸಲಹೆ ನೀಡಿದ ವ್ಯಕ್ತಿಗೆ ಬಹುಮಾನ ಕೂಡ ನೀಡಲಾಗುವುದು.
ಈ ಸ್ಪರ್ಧೆಯು ಅದರ ಗಂಭೀರತೆಯನ್ನು ಕಳೆದುಕೊಳ್ಳುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು, ನಾಲ್ಕು ಮೊದಲ ಉತ್ತಮ ಸಲಹೆ ನೀಡಿದವರಿಗೆ ಐಪೋನ್ 12,ಸ್ಯಾಮಸಂಗ್ ಗ್ಯಾಲಕ್ಸಿ ಎ51, ಮತ್ತು ಸ್ಯಾಮ್ ಸಂಗ್ ಗ್ಸಾಲಕ್ಸಿ ಎ 21 ಮತ್ತು ಸ್ಯಾಮ್ ಸಂಗ್ ಗ್ಯಾಲಕ್ಸಿ ಟ್ಯಾಬ್ ಎ ನೀಡಲಾಗುವುದು ಎಂದು ನಲಪಾಡ್ ತಿಳಿಸಿದ್ದಾರೆ.
ಜನರು ನೀಡುವ ಎಲ್ಲಾ ಸಲಹೆಗಳನ್ನು ತಜ್ಞರ ಸಮಿತಿಯು ಪರಿಶೀಲಿಸುತ್ತದೆ, ಅವರು ಸುಗಮ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ಅವರ ಪ್ರಾಯೋಗಿಕವಾಗಿ ಕೆಲಸ ಮಾಡುತ್ತಾರೆ ಎಂದು ತಿಳಿಸಿದ್ದಾರೆ.
ಮೊದಲ ದಿನದ ಕೆಲವು ಸಲಹೆಗಳಲ್ಲಿ ಮೂಲಸೌಕರ್ಯ ಬದಲಾವಣೆಗಳು ಮತ್ತು ಜನರ ಸಮಸ್ಯೆಗಳನ್ನು ಪರಿಹರಿಸಬಹುದಾದ ನಿಯಮ ಬದಲಾವಣೆಗಳು ಸೇರಿವೆ.
ಅಭಿಯಾನದ ಕುರಿತು ಮಾತನಾಡಿದ ಅವರು, ಕರ್ನಾಟಕದಲ್ಲಿ 18-35 ವರ್ಷದೊಳಗಿನ ಯಾವುದೇ ವ್ಯಕ್ತಿ ಈ ಅಭಿಯಾನದಲ್ಲಿ ಭಾಗವಹಿಸಬಹುದಾಗಿದೆ, ಅಭಿಯಾನದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ವಾಟ್ಸಾಪ್ ಸಂಖ್ಯೆ 9999835988 ಅನ್ನು ಪ್ರಾರಂಭಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


