Dubai

ಜೂನ್ 23 ರಿಂದ ಭಾರತದಿಂದ ದುಬೈಗೆ ಎಮಿರೇಟ್ಸ್ ಏರ್ ಲೈನ್ ವಿಮಾನ ಸಂಚಾರ ಆರಂಭ
ಭಾರತದಿಂದ ಪ್ರಯಾಣ ಮಾಡುವವರಿಗೆ ನಿರ್ಬಂಧವನ್ನು ದುಬೈ ಸಡಿಲಿಸುತ್ತಿದ್ದಂತೆ ಭಾರತ, ದಕ್ಷಿಣ ಆಫ್ರಿಕಾ ಮತ್ತು ನೈಜೀರಿಯಾಕ್ಕೆ ಸಂಪರ್ಕ ಕಲ್ಪಿಸುವ ವಿಮಾನ ಸಂಚಾರವನ್ನು ನಾಡಿದ್ದು ಜೂನ್ 23 ರಿಂದ ಆರಂಭಿಸಲಾಗುವುದು ಎಂದು ಎಮಿರೇಟ್ಸ್ ಏರ್ ಲೈನ್ಸ್ ಹೇಳಿದೆ.

ಐಸಿಸಿ ಟೆಸ್ಟ್ ರ್ಯಾಂಕಿಂಗ್: ಸ್ಟೀವ್ ಸ್ಮಿತ್ ಮತ್ತೆ ಅಗ್ರ ಸ್ಥಾನಕ್ಕೆ; 4ನೇ ಸ್ಥಾನಕ್ಕೆ ಜಿಗಿದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ
ಬಹು ನಿರೀಕ್ಷಿತ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿರುವಂತೆಯೇ ಐಸಿಸಿ ತನ್ನ ಆಟಗಾರರ ರ್ಯಾಂಕಿಂಗ್ ಪಟ್ಟಿಯನ್ನು ಮತ್ತೆ ಪರಿಷ್ಕರಣೆ ಮಾಡಿದ್ದು, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 4ನೇ ಸ್ಥಾನಕ್ಕೆ ಜಿಗಿದಿದ್ದು, ಆಸಿಸ್ ದೈತ್ಯ ಸ್ಟೀವ್ ಸ್ಮಿತ್ ಮತ್ತೆ ಅಗ್ರಸ್ಥಾನಕ್ಕೇರಿದ್ದಾರೆ.

ವಿಶ್ವ ಟೆಸ್ಟ್ ಕ್ರಿಕೆಟ್ ಚಾಂಪಿಯನ್ ಶಿಪ್ ವಿಜೇತರಿಗೆ ಟ್ರೋಫಿಯೊಂದಿಗೆ 1.6 ಮಿಲಿಯನ್ ಅಮೆರಿಕನ್ ಡಾಲರ್ ಬಹುಮಾನ: ಐಸಿಸಿ
ನ್ಯೂಜಿಲೆಂಡ್ ಮತ್ತು ಭಾರತ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯದಲ್ಲಿ ವಿಜೇತರಾದವರಿಗೆ ಚಾಂಪಿಯನ್ ಶಿಫ್ ಟ್ರೋಫಿಯೊಂದಿಗೆ 1.6 ಮಿಲಿಯನ್ ಅಮೆರಿಕನ್ ಡಾಲರ್ ಹಣವನ್ನು ಬಹುಮಾನವಾಗಿ ನೀಡಲಾಗುವುದು ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಸೋಮವಾರ ತಿಳಿಸಿದೆ.

ಈ ಬಾರಿ 60 ಸಾವಿರ ಹಜ್ ಯಾತ್ರಿಕರಿಗೆ ಮಾತ್ರ ಅವಕಾಶ: ಸೌದಿ ಅರೇಬಿಯಾ
ಕೋವಿಡ್ ಸಾಂಕ್ರಾಮಿಕದ ಕಾರಣದಿಂದಾಗಿ ಈ ಬಾರಿ ಹಜ್ ಯಾತ್ರಿಕರ ಸಂಖ್ಯೆಯನ್ನು 60 ಸಾವಿರಕ್ಕೆ ಮಾತ್ರ ಸೀಮಿತಗೊಳಿಸಲಾಗಿದೆ.

ಐಸಿಸಿ ಟೆಸ್ಟ್ ರ್ಯಾಂಕಿಂಗ್: 5ನೇ ಸ್ಥಾನದಲ್ಲಿ ಕೊಹ್ಲಿ ಮುಂದುವರಿಕೆ, ಜಂಟಿ 6ನೇ ಸ್ಥಾನದಲ್ಲಿ ರೋಹಿತ್-ರಿಷಬ್ ಪಂತ್
ಬಹು ನಿರೀಕ್ಷಿತ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿರುವಂತೆಯೇ ಐಸಿಸಿ ತನ್ನ ಆಟಗಾರರ ರ್ಯಾಂಕಿಂಗ್ ಪಟ್ಟಿಯನ್ನು ಪರಿಷ್ಕರಣೆ ಮಾಡಿದ್ದು, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 5ನೇ ಸ್ಥಾನದಲ್ಲಿ ಕೊಹ್ಲಿ ಮುಂದುವರೆದಿದ್ದಾರೆ.

ಬ್ರಿಟನ್ ನ 'ಕೆಂಪು ಪಟ್ಟಿ'ಯಲ್ಲಿ ಭಾರತ; ಯೋಜನೆಯಂತೆ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯ: ಐಸಿಸಿ
ಭಾರತ- ನ್ಯೂಜಿಲೆಂಡ್ ನಡುವಣ ವಿಶ್ವ ಟೆಸ್ಟ್ ಚಾಂಪಿಯನ್ ಶಿಫ್ ಫೈನಲ್ ಪಂದ್ಯ ಯೋಜನೆಯಂತೆ ಜೂನ್ 18ಕ್ಕೆ ಸೌಥಾಂಪ್ಟನ್ ನಲ್ಲಿ ನಡೆಯಲಿದೆ ಎಂದು ಐಸಿಸಿ ಭರವಸೆ ನೀಡಿದೆ.

ದುಬೈನಲ್ಲಿರುವ ವಲಸೆ ಕಾರ್ಮಿಕರಿಗೆ ರಾಯಭಾರ ಕಚೇರಿಯಿಂದ ಪ್ರತೀ ತಿಂಗಳು ಉಪಾಹಾರ ಔತಣಕೂಟ: ವರದಿ
ದುಬೈನಲ್ಲಿರುವ ವಲಸೆ ಕಾರ್ಮಿಕರಿಗೆ ರಾಯಭಾರ ಕಚೇರಿಯಿಂದ ಪ್ರತೀ ತಿಂಗಳು ಉಪಾಹಾರ ಔತಣಕೂಟ ನೀಡಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.

ಐಸಿಸಿ ಟೆಸ್ಟ್ ಬ್ಯಾಟಿಂಗ್ ರ್ಯಾಂಕಿಂಗ್: 2ನೇ ಸ್ಥಾನಕ್ಕೆ ಜಿಗಿದ ಕೊಹ್ಲಿ; ಟಾಪ್ 10ರಲ್ಲಿ ಪೂಜಾರಾ, ರಹಾನೆಗೆ ಸ್ಥಾನ
ಐಸಿಸಿ ಟೆಸ್ಟ್ ಬ್ಯಾಟಿಂಗ್ ರ್ಯಾಂಕಿಂಗ್ ಪಟ್ಟಿ ಪ್ರಕಟವಾಗಿದ್ದು, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಎರಡನೇ ಸ್ಥಾನಕ್ಕೆ ಜಿಗಿದಿದ್ದಾರೆ. ಅತ್ಯುತ್ತಮ 10 ಮಂದಿ ಆಟಗಾರರಲ್ಲಿ ಚೇತೇಶ್ವರ ಪೂಜಾರ ಮತ್ತು ಅಜಿಂಕ್ಯಾ ರಹಾನೆ ಕ್ರಮವಾಗಿ ಏಳು ಮತ್ತು 10ನೇ ಸ್ಥಾನದಲ್ಲಿದ್ದಾರೆ.

ಶೌರ್ಯ ಪ್ರಶಸ್ತಿ ವಿಜೇತ ಬಲ್ವಿಂದರ್ ಸಿಂಗ್ ಹತ್ಯೆ ಆರೋಪಿ ಖಲಿಸ್ತಾನಿ ನಾಯಕ ದುಬೈನಲ್ಲಿ ಅರೆಸ್ಟ್
ದೆಹಲಿ ಪೊಲೀಸರ ವಿಶೇಷ ಕೋಶ ದುಬೈನಲ್ಲಿ ಮೋಸ್ಟ್ ವಾಂಟೆಡ್ ಉಗ್ರ ಮತ್ತು ಐಎಸ್ಐ ನಂಟು ಹೊಂದಿದ್ದ ಖಲಿಸ್ತಾನ ಲೀಡರ್ ಸುಖ್ಮೀತ್ ಪಾಲ್ ಸಿಂಗ್ ಅಲಿಯಾಸ್ ಸುಖ್ ಬಿಖರಿವಾಲ್ ಎಂಬಾತನನ್ನ ಬಂಧಿಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

