ಶೌರ್ಯ ಪ್ರಶಸ್ತಿ ವಿಜೇತ ಬಲ್ವಿಂದರ್ ಸಿಂಗ್ ಹತ್ಯೆ ಆರೋಪಿ ಖಲಿಸ್ತಾನಿ ನಾಯಕ ದುಬೈನಲ್ಲಿ ಅರೆಸ್ಟ್
ದೆಹಲಿ ಪೊಲೀಸರ ವಿಶೇಷ ಕೋಶ ದುಬೈನಲ್ಲಿ ಮೋಸ್ಟ್ ವಾಂಟೆಡ್ ಉಗ್ರ ಮತ್ತು ಐಎಸ್ಐ ನಂಟು ಹೊಂದಿದ್ದ ಖಲಿಸ್ತಾನ ಲೀಡರ್ ಸುಖ್ಮೀತ್ ಪಾಲ್ ಸಿಂಗ್ ಅಲಿಯಾಸ್ ಸುಖ್ ಬಿಖರಿವಾಲ್ ಎಂಬಾತನನ್ನ ಬಂಧಿಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ನವದೆಹಲಿ: ದೆಹಲಿ ಪೊಲೀಸರ ವಿಶೇಷ ಕೋಶ ದುಬೈನಲ್ಲಿ ಮೋಸ್ಟ್ ವಾಂಟೆಡ್ ಉಗ್ರ ಮತ್ತು ಐಎಸ್ಐ ನಂಟು ಹೊಂದಿದ್ದ ಖಲಿಸ್ತಾನ ಲೀಡರ್ ಸುಖ್ಮೀತ್ ಪಾಲ್ ಸಿಂಗ್ ಅಲಿಯಾಸ್ ಸುಖ್ ಬಿಖರಿವಾಲ್ ಎಂಬಾತನನ್ನ ಬಂಧಿಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಇಬ್ಬರು ಪಂಜಾಬ್ ಮೂಲದ ಶಂಕಿತ ಉಗ್ರರನ್ನು ಬಂಧಿಸಲಾಗಿದ್ದು ಇವರು ಶೌರ್ಯ ಪ್ರಶಸ್ತಿ ವಿಜೇತ ಬಲ್ವಿಂದರ್ ಸಿಂಗ್ ಸಂಧು ಹತ್ಯೆಯಲ್ಲಿ ಭಾಗಿಯಾಗಿದ್ದರೆಂದು ಮಾಹಿತಿ ಇದೆ. ಇದಲ್ಲದೆ ಕಾಶ್ಮೀರ ಮೂಲದ ಮೂವರು ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಗೆ ಸೇರಿದವರನ್ನೂ ಪೋಲೀಸರು ಬಂಧಿಸಿದ್ದಾರೆ. ಇವರು ದೆಹಲಿಯಲ್ಲಿ ಬಲಪಂಥೀಯ ನಾಯಕನ ಹತ್ಯೆಗಾಗಿ ಅಂತಿಮ ಹಂತದ ಯೋಜನೆಯಲ್ಲಿ ತೊಡಗಿದ್ದರೆನ್ನಲಾಗಿದೆ.
ಉಭಯ ರಾಷ್ಟ್ರಗಳ ನಡುವೆ ಹೆಚ್ಚುತ್ತಿರುವ ಸಹಕಾರವನ್ನು ತೋರಿಸುವ ಈ ಕಾರ್ಯಾಚರಣೆಯು ಪಂಜಾಬ್ ಮತ್ತು ದೇಶದ ಇತರ ಭಾಗಗಳಲ್ಲಿ ಉಗ್ರವಾದವನ್ನು ಪುನರುಜ್ಜೀವನಗೊಳಿಸಲು ಖಲಿಸ್ತಾನ್ ಮತ್ತು ಕಾಶ್ಮೀರ ಜಾಲಗಳನ್ನು ಬಳಸಲು ಪ್ರಯತ್ನಿಸುವ ಪಾಕ್ ಪತ್ತೇದಾರಿ ಏಜೆನ್ಸಿಯ ಹೊಸ ಯೋಜನೆಯನ್ನು ಬಹಿರಂಗಪಡಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


