Diwali

ಬೆಲೆ ಏರಿಕೆ ಉತ್ತುಂಗದಲ್ಲಿದ್ದು, ಕೇಂದ್ರ ಸರ್ಕಾರಕ್ಕೆ ಜನರ ಬಗ್ಗೆ ಸೂಕ್ಷ್ಮತೆ ಇಲ್ಲ: ರಾಹುಲ್ ಗಾಂಧಿ
ಬೆಳಕಿನ ಹಬ್ಬ ದೀಪಾವಳಿ ಆಚರಣೆ ನಡುವೆಯೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿರುವ ಕುರಿತು ಕೇಂದ್ರ ಸರ್ಕಾರವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ತರಾಟೆಗೆ ತೆಗೆದುಕೊಂಡಿದ್ದಾರೆ.

ಕೋವಿಡ್ ನಿಯಮದಲ್ಲಿ ಬದಲಾವಣೆಗಳಿಲ್ಲ, ಮಾಸ್ಕ್ ಧರಿಸಿ ಹಬ್ಬ ಆಚರಿಸಿ: ಗೌರವ್ ಗುಪ್ತಾ
ಬೆಳಕಿನ ಹಬ್ಬ ದೀಪಾವಳಿ ಹಾಗೂ ಮಾರುಕಟ್ಟೆಗಳಲ್ಲಿ ಹಬ್ಬದ ಖರೀದಿ ವೇಳೆ ಜನದಟ್ಟಣೆ ಸೇರದೆ ರಾಜ್ಯ ಸರ್ಕಾರ ಪ್ರಕಟಿಸಿರುವ ಕೊರೋನಾ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆತ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಕರಾವಳಿ ಭಾಗದಲ್ಲಿ ದೀಪಾವಳಿ ಆಚರಣೆಯತ್ತ ಒಂದು ನೋಟ..
ಕರಾವಳಿಯಲ್ಲಿ ದೀಪಾವಳಿಯ ಆಚರಣೆ. ಬದುಕನ್ನು ಪ್ರತಿಯೊಂದು ವಿಷಯದಲ್ಲೂ ಪ್ರಕೃತಿಯನ್ನೇ ಕಾಣುವುದು ನಮ್ಮ ಕರಾವಳಿಗರ ಜೀವನ ಧರ್ಮವೂ ಹೌದು, ಮರ್ಮವೂ ಹೌದು.

ಹೊಸ ಜಿಯೊ ಫೋನ್ ನೆಕ್ಸ್ಟ್ ಮೊಬೈಲ್ ದೀಪಾವಳಿಗೆ ಲಭ್ಯ: ಬೆಲೆ 6,499 ರೂ.
ಗ್ರಾಹಕರಿಗೆ ವಿಶೇಷ ಕೊಡುಗೆಯನ್ನು ಸಂಸ್ಥೆ ನೀಡಿದೆ. ಒಂದೇ ಸಲಕ್ಕೆ ಆರೂವರೆ ಸಾವಿರ ರೂ. ತೆರಲು ಶಕ್ತರಲ್ಲದವರು ಕಂತಿನಲ್ಲಿ ಈ ಮೊಬೈಲ್ ಖರೀದಿಸಬಹುದು.

ದೀಪಾವಳಿಯ ಬಲಿಪಾಡ್ಯಮಿ ದಿನ ಕಡ್ಡಾಯವಾಗಿ ದೇವಾಲಯಗಳಲ್ಲಿ ಗೋಪೂಜೆ: ರಾಜ್ಯ ಸರ್ಕಾರದ ಆದೇಶ
ಈ ಬಾರಿ ದೀಪಾವಳಿ ಹಬ್ಬದ ಸಮಯದಲ್ಲಿ ದೇವಸ್ಥಾನಗಳಲ್ಲಿ ಕಡ್ಡಾಯವಾಗಿ ಗೋಪೂಜೆ ನಡೆಸಬೇಕು ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ದೀಪಾವಳಿಯಲ್ಲಿ ಪಟಾಕಿ ನಿಷೇಧ ಹಿಂದೆ ಬೂಟಾಟಿಕೆ: ವೀರೇಂದ್ರ ಸೆಹ್ವಾಗ್
ಐಸಿಸಿ ಪುರುಷರ ಟಿ-20 ವಿಶ್ವಕಪ್‌ನಲ್ಲಿ ಪಾಕಿಸ್ತಾನ 10 ವಿಕೆಟ್‌ಗಳ ಜಯ ಸಾಧಿಸಿದ ನಂತರ ಭಾರತದ ಕೆಲವು ಭಾಗಗಳಲ್ಲಿ ಪಟಾಕಿ ಸಿಡಿಸಿದ್ದಕ್ಕೆ ಭಾರತದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿದ್ದಾರೆ.

ದೀಪಾವಳಿಯಲ್ಲಿ ಸ್ಥಳೀಯತೆಗೆ ಒತ್ತು ಕೊಡಿ, ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸಿ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ ಕರೆ
ಅಕ್ಟೋಬರ್ ತಿಂಗಳು ದಸರಾ ಹಬ್ಬ, ದುರ್ಗಾ ದೇವಿಯನ್ನು ಪೂಜಿಸಿ ಇನ್ನು ಕೆಲವೇ ದಿನಗಳಲ್ಲಿ ಬೆಳಕಿನ ಹಬ್ಬ ದೀಪಾವಳಿ ಆಚರಿಸಲಿದ್ದೇವೆ. ಈಗಿನಿಂದಲೇ ದೀಪಾವಳಿಗೆ ಹಲವರು ಸಿದ್ಧತೆ ನಡೆಸುತ್ತಿರಬಹುದು. ವಸ್ತುಗಳ ಖರೀದಿಯಲ್ಲಿ ಮುಳುಗಿರಬಹುದು, ದೇಶದ ನಾಗರಿಕರೇ ಈ ಸಂದರ್ಭದಲ್ಲಿ ಒಂದು ವಿಷಯ ನೆನಪಿಟ್ಟುಕೊಳ್ಳಿ, ವಸ್ತುಗಳನ್ನು ಖರೀದಿಸುವಾಗ ಸ್ಥಳೀಯ ವಸ್ತುಗಳಿಗೆ ಆದ್ಯತೆ ನೀಡಿ

ದೀಪಾವಳಿಯನ್ನು ಜಶ್-ಎ ರಿವಾಜ್ ನ್ನಾಗಿಸಿದ ಫ್ಯಾಬ್ ಇಂಡಿಯಾ ವಿರುದ್ಧ ತೇಜಸ್ವಿ ಸೂರ್ಯ ಆಕ್ಷೇಪ
ದೀಪಾವಳಿಯ ಹಬ್ಬವನ್ನು ಜಶ್-ಎ-ರಿವಾಜ್ ನ್ನಾಗಿಸಿ ಫ್ಯಾಬ್ ಇಂಡಿಯಾ ಜಾಹಿರಾತು ಪ್ರಕಟಿಸಿದ್ದರ ವಿರುದ್ಧ ವ್ಯಾಪಕ ಆಕ್ರೋಶ, ಆಕ್ಷೇಪಗಳು ವ್ಯಕ್ತವಾಗಿದೆ.

ದೆಹಲಿಯಲ್ಲಿ ವಾಯು ಮಾಲೀನ್ಯ ಭೀತಿ: ಈ ವರ್ಷವೂ ಪಟಾಕಿ ಬಳಕೆ, ಮಾರಾಟ ನಿಷೇಧಿಸಿದ ಕೇಜ್ರಿವಾಲ್ ಸರ್ಕಾರ!
ರಾಷ್ಟ್ರ ರಾಜಧಾನಿ ದೆಹಲಿ ನಿವಾಸಿಗಳಿಗೆ ಈ ವರ್ಷವೂ ದೀಪಾವಳಿ ಸಂಭ್ರಮ ದೂರವಾಗಿದ್ದು, ವಾಯುಮಾಲೀನ್ಯ ಹಿನ್ನಲೆಯಲ್ಲಿ ದೆಹಲಿಯ ಸಿಎಂ ಅರವಿಂದ್ ಕೇಜ್ರಿವಾಲ್ ಸರ್ಕಾರ ಪಟಾಕಿ ಬಳಕೆ, ಮಾರಾಟಕ್ಕೆ ನಿಷೇಧ ಹೇರಿದೆ.

