ಹೊಸ ಜಿಯೊ ಫೋನ್ ನೆಕ್ಸ್ಟ್ ಮೊಬೈಲ್ ದೀಪಾವಳಿಗೆ ಲಭ್ಯ: ಬೆಲೆ 6,499 ರೂ.
ಗ್ರಾಹಕರಿಗೆ ವಿಶೇಷ ಕೊಡುಗೆಯನ್ನು ಸಂಸ್ಥೆ ನೀಡಿದೆ. ಒಂದೇ ಸಲಕ್ಕೆ ಆರೂವರೆ ಸಾವಿರ ರೂ. ತೆರಲು ಶಕ್ತರಲ್ಲದವರು ಕಂತಿನಲ್ಲಿ ಈ ಮೊಬೈಲ್ ಖರೀದಿಸಬಹುದು.

ಬೆಂಗಳೂರು: ಬಹುನಿರೀಕ್ಷಿತ ಜಿಯೊಫೋನ್ ನೆಕ್ಸ್ಟ್ ಈ ಬಾರಿ ದೀಪಾವಳಿಗೆ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ ಎಂದು ರಿಲಯನ್ಸ್ ಮತ್ತು ಗೂಗಲ್ ಸಂಸ್ಥೆ ಜಂಟಿ ಪ್ರಕಟಣೆ ಹೊರಡಿಸಿದೆ.
ಈ ನೂತನ ಫೋನ್ ಬೆಲೆ 6,499 ರೂ. ನಿಗದಿಪಡಿಸಲಾಗಿದೆ. ಗ್ರಾಹಕರಿಗೆ ವಿಶೇಷ ಕೊಡುಗೆಯನ್ನು ಸಂಸ್ಥೆ ನೀಡಿದೆ. ಒಂದೇ ಸಲಕ್ಕೆ ಆರೂವರೆ ಸಾವಿರ ರೂ. ತೆರಲು ಶಕ್ತರಲ್ಲದವರು ಕಂತಿನಲ್ಲಿ ಈ ಮೊಬೈಲ್ ಖರೀದಿಸಬಹುದು.
1,999 ರೂ. ಡೌನ್ ಪೇಮಂಟ್ ಕೊಟ್ಟು 18- 24 ತಿಂಗಳುಗಳ ಕಾಲ ಉಳಿದ ಹಣವನ್ನು ಕಂತು ಕಟ್ಟಬಹುದು. ಏಂಟ್ರಿ ಲೆವೆಲ್ ಮೊಬೈಲ್ ಕೆಟಗರಿಯಲ್ಲಿ ಕಂತು ಸೌಲಭ್ಯ ಸ್ಮಾರ್ಟ್ ಫೋನ್ ಲಭ್ಯವಾಗುತ್ತಿರುವುದು ಇದೇ ಮೊದಲು ಎಂದು ಮಾರುಕಟ್ಟೆ ಪರಿಣತರು ಅಭಿಪ್ರಾಯ ಪಟ್ಟಿದ್ದಾರೆ.
ಈ ಮೊಬೈಲ್ ಕ್ವಾಲ್ ಕಾಂ ಚಿಪ್ ಸೆಟ್ ಹೊಂದಿದ್ದು, ಟಾಕ್ ಟೈಮ್ ಮತ್ತು ಡೇಟಾ ಪ್ಯಾಕೇಜ್ ಸಹಿತ ಒಳಗೊಳ್ಳಲಿದೆ. ಮೊಬೈಲ್ ಆಪರೇಟಿಂಗ್ ಸಿಸ್ಟಂ ಪ್ರಗತಿ ಯನ್ನು ಜಿಯೊ ಮತ್ತು ಗೂಗಲ್ ಸಂಸ್ಥೆ ಜಂಟಿಯಾಗಿ ಅಭಿವೃದ್ಧಿ ಪಡಿಸಿದೆ.
Related Article
ವಿಶ್ವದಲ್ಲೇ ಅಗ್ಗದ ಜಿಯೊ ಸ್ಮಾರ್ಟ್ ಫೋನ್ ಬಿಡುಗಡೆ ವಿಳಂಬ: ಮಾರುಕಟ್ಟೆಯಲ್ಲಿ ಚಿಪ್ ಕೊರತೆ
ದಿನವೊಂದಕ್ಕೆ 27 ಕೋಟಿ ದಾನ ಮಾಡಿ, ದೇಶದ ಅತ್ಯುನ್ನತ ಉದಾರಿ ಉದ್ಯಮಿಯಾದ ಅಜಿಂ ಪ್ರೇಂ ಜಿ!
ಮುಂದಿನ ಮೂರು ವರ್ಷಗಳಿಗೆ ಆರ್ ಬಿ ಐ ಗವರ್ನರ್ ಆಗಿ ಶಕ್ತಿ ಕಾಂತ್ ದಾಸ್ ಮರು ನೇಮಕ
ಮತ್ತೆ ಪೆಟ್ರೋಲಿಯಂ ಉತ್ಪನ್ನಗಳ ದರ ಏರಿಕೆ: ಇಂದಿನ ದರ ಪಟ್ಟಿ ಇಂತಿದೆ
ಫೋನ್ ಪೇ: ಮೊಬೈಲ್ ರೀಚಾರ್ಜ್ ಮಾಡಿದ್ರೆ ಬಳಕೆದಾರರು ಕೊಡಬೇಕು ಎಕ್ಸ್ ಟ್ರಾ ಚಾರ್ಚ್!
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


