Dies

ಬಾಲಿವುಡ್ ಹಿರಿಯ ನಟ -ಕಾಮಿಡಿಯನ್ ಜಗದೀಪ್ ನಿಧನ
ಬಾಲಿವುಡ್

ಬಾಲಿವುಡ್ ಹಿರಿಯ ನಟ -ಕಾಮಿಡಿಯನ್ ಜಗದೀಪ್ ನಿಧನ

ಭಾರತೀಯ ಚಿತ್ರರಂಗದ ಮತ್ತೊಬ್ಬ ಹಿರಿಯ ನಟ- ಕಾಮಿಡಿಯನ್ ಜಗದೀಪ್  ನಿಧನರಾಗಿದ್ದಾರೆ.ಅವರಿಗೆ 81 ವರ್ಷ ವಯಸ್ಸಾಗಿತ್ತು.ಅಮಿತಾಭ್‌ ಬಚ್ಚನ್‌ ಅವರ 'ಶೋಲೆ' ಸಿನಿಮಾದಲ್ಲಿನ ಸೂರ್ಮಾ ಭೋಪಾಲಿ ಎಂಬ ಪಾತ್ರದ ಮೂಲಕ ನಟ ಜಗದೀಪ್‌ ಹೆಚ್ಚು ಜನಪ್ರಿಯ ಆಗಿದ್ದರು. 

ಕೋವಿಡ್-19 ಸೋಂಕಿನಿಂದ 1984 ಸಿಖ್ ವಿರೋಧಿ ಹಿಂಸಾಚಾರದ ಆರೋಪಿ ಸಾವು
ದೇಶ

ಕೋವಿಡ್-19 ಸೋಂಕಿನಿಂದ 1984 ಸಿಖ್ ವಿರೋಧಿ ಹಿಂಸಾಚಾರದ ಆರೋಪಿ ಸಾವು

1984ರ ಸಿಖ್ ವಿರೋಧಿ ಹಿಂಸಾಚಾರ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿದ್ದ ಮಾಜಿ ಶಾಸಕರೊಬ್ಬರು ಕೋವಿಡ್-19 ಸೋಂಕಿನಿಂದ ರಾಷ್ಟ್ರ ರಾಜಧಾನಿಯ ಆಸ್ಪತ್ರೆಯೊಂದರಲ್ಲಿ ಇಂದು ಸಾವನ್ನಪ್ಪಿದ್ದಾರೆ.

ವಿಜಯಪುರ: ತಂಗಿಯನ್ನು ಪರೀಕ್ಷೆಗೆ ಕರೆದೊಯ್ದಿದ್ದ ಸಹೋದರ ಸಾವು, ಪೊಲೀಸರ ಲಾಠಿ ಏಟಿನಿಂದ ಸಾವು?
ರಾಜ್ಯ

ವಿಜಯಪುರ: ತಂಗಿಯನ್ನು ಪರೀಕ್ಷೆಗೆ ಕರೆದೊಯ್ದಿದ್ದ ಸಹೋದರ ಸಾವು, ಪೊಲೀಸರ ಲಾಠಿ ಏಟಿನಿಂದ ಸಾವು?

ಬಸವನ ಬಾಗೇವಾಡಿ ತಾಲೂಕಿನ ಹೂವಿನ ಹಿಪ್ಪರಗಿ ಗ್ರಾಮದ ವಿಶ್ವಚೇತನ ಪರೀಕ್ಷಾ ಕೇಂದ್ರಕ್ಕೆ ಎಸ್ಎಸ್ಎಲ್ಸಿ ಪರೀಕ್ಷೆಗೆಂದು ತಂಗಿಯನ್ನು ಕರೆತಂದಿದ್ದ ಸಹೋದರ ಸಾವನ್ನಪ್ಪಿದ್ದಾನೆ.

ಟೈಗರ್ ಮೆಮನ್ ಸಹೋದರ, ಮುಂಬೈ ಸರಣಿ ಸ್ಫೋಟದ ಅಪರಾಧಿ ಯುಸುಫ್ ಮೆಮನ್ ಜೈಲಿನಲ್ಲೇ ಸಾವು
ದೇಶ

ಟೈಗರ್ ಮೆಮನ್ ಸಹೋದರ, ಮುಂಬೈ ಸರಣಿ ಸ್ಫೋಟದ ಅಪರಾಧಿ ಯುಸುಫ್ ಮೆಮನ್ ಜೈಲಿನಲ್ಲೇ ಸಾವು

1993ರ ಮುಂಬೈ ಸರಣಿ ಸ್ಫೋಟ ಪ್ರಕರಣದ ಅಪರಾಧಿಗಳಲ್ಲಿ ಒಬ್ಬನಾಗಿದ್ದ ಯುಸುಫ್ ಮೆಮನ್ ನಾಸಿಕ್ಜೈಲಿನಲ್ಲಿಂದು ಸಾವಿಗೀಡಾಗಿದ್ದಾನೆ ಎಂದು ಕಾರಾಗೃಹದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ .

ಎಲ್ ಎಸಿಯಲ್ಲಿ ಸಹೋದ್ಯೋಗಿಗಳ ಪ್ರಾಣ ಉಳಿಸಲು ಹೋಗಿ ಮಹಾರಾಷ್ಟ್ರದ ಯೋಧ ಸಾವು
ದೇಶ

ಎಲ್ ಎಸಿಯಲ್ಲಿ ಸಹೋದ್ಯೋಗಿಗಳ ಪ್ರಾಣ ಉಳಿಸಲು ಹೋಗಿ ಮಹಾರಾಷ್ಟ್ರದ ಯೋಧ ಸಾವು

ಭಾರತ- ಚೀನಾ ಗಡಿ ಪ್ರದೇಶ ಗಲ್ವಾನ್ ಕಣಿವೆಯಲ್ಲಿ ನದಿಯಲ್ಲಿ ಬೀಳುತ್ತಿದ್ದ ಸಹೋದ್ಯೋಗಿಯ ಪ್ರಾಣ ಉಳಿಸಲು ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಭಾರತೀಯ ಸೇನೆಯ ಯೋಧರೊಬ್ಬರು ಇಂದು ಮೃತಪಟ್ಟಿದ್ದಾರೆ ಎಂದು ಗೃಹ ಖಾತೆ ರಾಜ್ಯ ಸಚಿವ ಸತೇಜ್ ಪಾಟೀಲ್ ಇಂದು ತಿಳಿಸಿದ್ದಾರೆ.

ಬೆಂಗಳೂರಿನ ಕುಖ್ಯಾತ ಪಾತಕಿ ಕೊರಂಗು ಕೃಷ್ಣ ಚಿತ್ತೂರಿನಲ್ಲಿ ನಿಧನ
ರಾಜ್ಯ

ಬೆಂಗಳೂರಿನ ಕುಖ್ಯಾತ ಪಾತಕಿ ಕೊರಂಗು ಕೃಷ್ಣ ಚಿತ್ತೂರಿನಲ್ಲಿ ನಿಧನ

ಮುತ್ತಪ್ಪ ರೈ ನಂತರ ಬೆಂಗಳೂರಿನ ಮತ್ತೋರ್ವ ಕುಖ್ಯಾತ ಪಾತಕಿ ಕೃಷ್ಣಮೂರ್ತಿ ಅಲಿಯಾಸ್ ಕೊರಂಗು ಕೃಷ್ಣಾ ಸಾವನ್ನಪ್ಪಿದ್ದಾನೆ. ಲೀವರ್ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದ ಈತ ಚಿತ್ತೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಮೃತಪಟ್ಟಿದ್ದಾನೆ ಎಂಬ ವರದಿಯಾಗಿದೆ.

ಕೊಪ್ಪಳ: ರಸ್ತೆ ದಾಟುತ್ತಿದ್ದಾಗ ಅಪರಿಚಿತ ವಾಹನ ಡಿಕ್ಕಿ, ಹೆಣ್ಣು ಚಿರತೆ ಸ್ಥಳದಲ್ಲೇ ಸಾವು
ರಾಜ್ಯ

ಕೊಪ್ಪಳ: ರಸ್ತೆ ದಾಟುತ್ತಿದ್ದಾಗ ಅಪರಿಚಿತ ವಾಹನ ಡಿಕ್ಕಿ, ಹೆಣ್ಣು ಚಿರತೆ ಸ್ಥಳದಲ್ಲೇ ಸಾವು

ರಸ್ತೆ ದಾಟುತ್ತಿದ್ದ ಚಿರತೆಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ತಾಲೂಕಿನ ಹೇಮಗುಡ್ಡ ಗ್ರಾಮದ ಬಳಿ ಇಂದು ನಡೆದಿದೆ. 

ಶ್ರಮಿಕ್ ರೈಲಿನಲ್ಲಿ ವಲಸೆ ಕಾರ್ಮಿಕ ಸಾವು: ಶವದೊಂದಿಗೆ ಬಂಗಾಳಕ್ಕೆ ಪ್ರಯಾಣಿಸಿದ ಸಹ ಪ್ರಯಾಣಿಕರು!
ದೇಶ

ಶ್ರಮಿಕ್ ರೈಲಿನಲ್ಲಿ ವಲಸೆ ಕಾರ್ಮಿಕ ಸಾವು: ಶವದೊಂದಿಗೆ ಬಂಗಾಳಕ್ಕೆ ಪ್ರಯಾಣಿಸಿದ ಸಹ ಪ್ರಯಾಣಿಕರು!

ರಾಜಸ್ಥಾನದಿಂದ ಪಶ್ಚಿಮ ಬಂಗಾಳಕ್ಕೆ ತೆರಳುತ್ತಿದ್ದ ಶ್ರಮಿಕ್ ವಿಶೇಷ ರೈಲೊಂದರಲ್ಲಿ ಪ್ರಯಾಣಿಸುತ್ತಿದ್ದ  50 ವರ್ಷದ ವಲಸೆ ಕಾರ್ಮಿಕರೊಬ್ಬರು ಮೃತಪಟ್ಟಿದ್ದಾರೆ. ಆತನ ಶವದೊಂದಿಗೆ ಸುಮಾರು 8 ಗಂಟೆಗಳ ಕಾಲ ಪ್ರಯಾಣಿಸಿದ ಸಹ ಪ್ರಯಾಣಿಕರು ಇದೀಗ ಭೀತಿಗೊಂಡಿರುವುದಾಗಿ  ಪೊಲೀಸರು ಹೇಳಿದ್ದಾರೆ.

ಚಿಕ್ಕೋಡಿ: ಹೊಲದಲ್ಲಿ ಕೆಲಸ‌ ಮಾಡುವಾಗ  ಸಿಡಿಲು ಬಡಿದು ವ್ಯಕ್ತಿ ದುರ್ಮರಣ 
ರಾಜ್ಯ

ಚಿಕ್ಕೋಡಿ: ಹೊಲದಲ್ಲಿ ಕೆಲಸ‌ ಮಾಡುವಾಗ  ಸಿಡಿಲು ಬಡಿದು ವ್ಯಕ್ತಿ ದುರ್ಮರಣ 

ಹೊಲದಲ್ಲಿ ಕೆಲಸ‌ ಮಾಡುವಾಗ  ಸಿಡಿಲು ಬಡಿದು ವ್ಯಕ್ತಿಯೋರ್ವ ಸಾವನಪ್ಪಿದ ಘಟನೆ ಚಿಕ್ಕೋಡಿ ತಾಲೂಕಿನ ಕರೋಶಿ ಗ್ರಾಮದಲ್ಲಿ ಶನಿವಾರ  ಸಂಜೆ ನಡೆದಿದೆ.