ರಾಜ್ಯ

ಬೆಂಗಳೂರಿನ ಕುಖ್ಯಾತ ಪಾತಕಿ ಕೊರಂಗು ಕೃಷ್ಣ ಚಿತ್ತೂರಿನಲ್ಲಿ ನಿಧನ

ಮುತ್ತಪ್ಪ ರೈ ನಂತರ ಬೆಂಗಳೂರಿನ ಮತ್ತೋರ್ವ ಕುಖ್ಯಾತ ಪಾತಕಿ ಕೃಷ್ಣಮೂರ್ತಿ ಅಲಿಯಾಸ್ ಕೊರಂಗು ಕೃಷ್ಣಾ ಸಾವನ್ನಪ್ಪಿದ್ದಾನೆ. ಲೀವರ್ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದ ಈತ ಚಿತ್ತೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಮೃತಪಟ್ಟಿದ್ದಾನೆ ಎಂಬ ವರದಿಯಾಗಿದೆ.

ಬೆಂಗಳೂರಿನ ಕುಖ್ಯಾತ ಪಾತಕಿ ಕೊರಂಗು ಕೃಷ್ಣ ಚಿತ್ತೂರಿನಲ್ಲಿ ನಿಧನ
ಕೊರಂಗು ಕೃಷ್ಣಾ
Published On :

ಬೆಂಗಳೂರು: ಮುತ್ತಪ್ಪ ರೈ ನಂತರ ಬೆಂಗಳೂರಿನ ಮತ್ತೋರ್ವ ಕುಖ್ಯಾತ ಪಾತಕಿ ಕೃಷ್ಣಮೂರ್ತಿ ಅಲಿಯಾಸ್ ಕೊರಂಗು ಕೃಷ್ಣಾ ಸಾವನ್ನಪ್ಪಿದ್ದಾನೆ. ಲೀವರ್ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದ ಈತ ಆಂಧ್ರಪ್ರದೇಶದ ಚಿತ್ತೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಮೃತಪಟ್ಟಿದ್ದಾನೆ ಎಂಬ ವರದಿಯಾಗಿದೆ.

ದಶಕದ ಹಿಂದೆ ಹಿರಿಯೂರು ಡಾಬದಲ್ಲಿ ಹೆಬ್ಬೆಟ್ಟು ಮಂಜ ಗ್ಯಾಂಗ್ ನಿಂದ ಕೊರಂಗೂ ಮೇಲೆ ದಾಳಿ ಆಗಿತ್ತು. ಆ ಸಂದರ್ಭದಲ್ಲಿ ಕೊರಂಗು ಕೈ ಕಟ್ ಆಗಿ ಬದುಕುಳಿದ್ದಿದ್ದ. ಇದಾದ ನಂತರ ಕೊರಂಗು ಕೃಷ್ಣಾ ಗಡಿಪಾರಾಗಿದ್ದ. 90ರ ದಶಕದಲ್ಲಿ ಭೂಗತ ಲೋಕದಲ್ಲಿ ಸಕ್ರಿಯನಾಗಿದ್ದ ಕೊರಂಗು, ಉಪೇಂದ್ರ ನಿರ್ದೇಶನದ ಶಿವರಾಜ್ ಕುಮಾರ್ ಅಭಿನಯದ ಓಂ ಚಿತ್ರದಲ್ಲಿ ನಟಿಸಿದ್ದ ರಿಯಲ್ ರೌಡಿಗಳಲ್ಲಿ ಒಬ್ಬರಾಗಿದ್ದರು. 

ಚಿತ್ತೂರಿನಲ್ಲೇ ವ್ಯವಹಾರ ಮಾಡಿಕೊಂಡಿದ್ದ ಕೊರಂಗು ಕೃಷ್ಣಾ ಅನಾರೋಗ್ಯಕ್ಕೆ ತುತ್ತಾಗಿದ್ದ. ಅಲ್ಲಿಯೇ ಅಂತ್ಯಸಂಸ್ಕಾರ ನಡೆಸಲು ಕುಟುಂಬಸ್ಥರು ತೀರ್ಮಾನ ಮಾಡಿದ್ದಾರೆ.

ಕೊರಂಗೂ  ಬೆಂಗಳೂರಿನ ಡಾನ್ ಎಂದು ಕರೆಸಿಕೊಂಡಿದ್ದ ಜಯರಾಜ್ ಆಪ್ತನಾಗಿ ಗುರುತಿಸಿಕೊಂಡಿದ್ದ. ತಿಮ್ಮೇನಹಳ್ಳಿ ತಮಯ್ಯನ ಸಿಂಡಿಕೇಟ್ ನಲ್ಲಿ ಗುರ್ತಿಸಿಕೊಂಡಿದ್ದ ಕೊರಂಗು ಹಿರಿಯೂರು ದಾಳಿಯ ನಂತರ ಚಿತ್ತೂರಿಗೆ ತೆರಳಿ ಅಲ್ಲಿಯೇ ನೆಲೆಸಿದ್ದ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.