Cubbon Park

ಕಬ್ಬನ್ ಪಾರ್ಕ್ ನಲ್ಲಿ ಪ್ರೇಮಿಗಳ ಅಸಭ್ಯ ವರ್ತನೆಗೆ ಬ್ರೇಕ್! ತಿಂಡಿ ತಿನಿಸು ಒಯ್ಯುವಂತಿಲ್ಲ: ಇದಕ್ಕೆ ಅಧಿಕಾರಿಗಳು ಏನಂತಾರೆ?ಏನಂತಾರೆ?
ಕಬ್ಬನ್ ಪಾರ್ಕ್ ಒಳಗೆ ತಿಂಡಿ-ತೀರ್ಥ ತೆಗೆದುಕೊಂಡು ಹೋಗುವ ಹಾಗಿಲ್ಲ, ಫೋಟೋಗ್ರಾಫರ್ ಗಳು ಫೋಟೋ ತೆಗೆಯುವ ಹಾಗಿಲ್ಲ, ಲವರ್ಸ್ ಬೇಕಾಬಿಟ್ಟಿ ವರ್ತಿಸುವ ಹಾಕಿಲ್ಲ ಎಂಬಿತ್ಯಾದಿ ಕಠಿಣ ನಿಯಮಗಳನ್ನು ಸಾರ್ವಜನಿಕರಿಗೆ ತೋಟಗಾರಿಕೆ ಇಲಾಖೆ ತಂದಿದೆ ಎಂಬ ಸುದ್ದಿಯನ್ನು ಇತ್ತೀಚೆಗೆ ಕೇಳಿದ್ದೆವು.

ಕಬ್ಬನ್ ಪಾರ್ಕ್ ನಲ್ಲಿ ಸಂಗೀತ-ನೃತ್ಯ ಪ್ರದರ್ಶನ: ಅಪಾರ ಸಂಖ್ಯೆಯ ಜನರ ಆಕರ್ಷಿಸುತ್ತಿರುವ ಬೆಂಗಳೂರು ಹಬ್ಬ
ಕಬ್ಬನ್ ಪಾರ್ಕ್‌ನಲ್ಲಿ ಶನಿವಾರ ಆರಂಭವಾದ ಎರಡು ದಿನಗಳ ಬೆಂಗಳೂರು ಹಬ್ಬ ಅಪಾರ ಸಂಖ್ಯೆಯ ಜನರನ್ನು ಆಕರ್ಷಿಸುತ್ತಿದೆ.

ಬೆಂಗಳೂರು: ಕಬ್ಬನ್ ಪಾರ್ಕ್ ನಲ್ಲಿ ಇದೇ 11 ರಿಂದ ಎರಡು ದಿನ ಮಹಿಳಾ ಕ್ರೀಡಾಹಬ್ಬ
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮಾರ್ಚ್ 11 ಮತ್ತು 12 ಮಹಿಳಾ ಕ್ರೀಡಾ ಹಬ್ಬ ಆಯೋಜಿಸುವುದಾಗಿ ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ.ನಾರಾಯಣಗೌಡ ತಿಳಿಸಿದ್ದಾರೆ.

ಬೆಂಗಳೂರು: ಕೃಷಿಕ್ ಸಮಾಜ ಕಟ್ಟಡ ಬಳಕೆಗೆ ಹೈಕೋರ್ಟ್ ಅನುಮತಿ
ಬೆಂಗಳೂರಿನ ಹಡ್ಸನ್ ವೃತ್ತದ ಬಳಿ ಕರ್ನಾಟಕ ಪ್ರದೇಶ ಕೃಷಿಕ್ ಸಮಾಜ ಸಂಸ್ಥೆ ನಿರ್ಮಿಸಿರುವ ಹಾಪ್ ಕಾಮ್ಸ್ ಕಟ್ಟಡ ಎಂದೇ ಪ್ರಸಿದ್ಧಿಯಾಗಿರುವ ಕಟ್ಟಡವು ಕಬ್ಬನ್ ಪಾರ್ಕ್‌ನಿಂದ ಹೊರಗಿದ್ದು, ಅದನ್ನು ಬಳಕೆ ಮಾಡಲು ಕೃಷಿಕ್ ಸಮಾಜಕ್ಕೆ ಕರ್ನಾಟಕ ಹೈಕೋರ್ಟ್ ಸೋಮವಾರ ಅನುಮತಿ ನೀಡಿದೆ.

ರಾಜ್ಯದ ಮೊದಲ ಸುರಂಗ ಅಕ್ವೇರಿಯಂ ಕಬ್ಬನ್ ಪಾರ್ಕ್ ನಲ್ಲಿ ಸ್ಥಾಪನೆ!
ಬೆಂಗಳೂರಿನ ಆಕರ್ಷಣೆಗಳಲ್ಲಿ ಒಂದಾಗಿರುವ ಐತಿಹಾಸಿಕ ಕಬ್ಬನ್ ಪಾರ್ಕ್ ಶೀಘ್ರದಲ್ಲೇ ಮತ್ತಷ್ಟು ಪ್ರವಾಸಿಗರನ್ನು ಆಕರ್ಷಿಸಲಿದ್ದು, ಈ ಪ್ರತಿಷ್ಠಿತ ಉದ್ಯಾನದಲ್ಲಿ ಶೀಘ್ರದಲ್ಲೇ ಸುರಂಗ ಅಕ್ವೇರಿಯಂ ತಲೆ ಎತ್ತಲಿದೆ.

ಕಬ್ಬನ್ ಪಾರ್ಕ್ ನಲ್ಲಿ ವಿಕಲಚೇತನ ಮಕ್ಕಳ ಸ್ನೇಹಿ ಉದ್ಯಾನವನ ಉದ್ಘಾಟನೆ
ನಗರದ ಕಬ್ಬನ್ ಪಾರ್ಕ್ ನ ಬಾಲಭವನದ ಆವರಣದಲ್ಲಿ ನಿರ್ಮಿಸಲಾಗಿರುವ ವಿಕಲಚೇತನ ಮಕ್ಕಳಿಗಾಗಿ ಕರ್ನಾಟಕ ರಾಜ್ಯದ ಮೊದಲ ವಿಶೇಷ ಚೇತನರ ಸ್ನೇಹಿ ಉದ್ಯಾನವನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಶನಿವಾರ ಉದ್ಘಾಟಿಸಿದರು.

ಜೂ.25ರಿಂದ ಕಬ್ಬನ್ ಪಾರ್ಕ್ ನಲ್ಲಿನ ಜವಾಹರ್ ಬಾಲಭವನ ಓಪನ್!
ಒಂದೂವರೆ ವರ್ಷಗಳ ನಂತರ ಕಬ್ಬನ್ ಪಾರ್ಕ್‌ನಲ್ಲಿರುವ ನಗರದ ಬಹು ನಿರೀಕ್ಷಿತ ಜವಾಹರ್ ಬಾಲ ಭವನ (ಜೆಬಿಬಿ) ಜೂನ್ 25 ಶನಿವಾರದಿಂದ ಜನರಿಗೆ ತೆರೆದುಕೊಳ್ಳಲಿದೆ.

ಆಕ್ರಮಣಕಾರಿ ನಾಯಿಗಳಿಗೆ ಕಬ್ಬನ್ ಪಾರ್ಕ್ ಪ್ರವೇಶ ನಿಷೇಧ; ತೋಟಗಾರಿಕಾ ಇಲಾಖೆಯಿಂದ ಮಾರ್ಗಸೂಚಿ ಬಿಡುಗಡೆ
ಕಬ್ಬನ್‍ಪಾರ್ಕ್‍ನಲ್ಲಿ ಉಗ್ರ ಸ್ವರೂಪದ ನಾಯಿಗಳ ಪ್ರವೇಶವನ್ನು ನಿರ್ಬಂಧಿಸಲಾಗಿದ್ದು, ಈ ಸಂಬಂಧ ತೋಟಗಾರಿಕಾ ಇಲಾಖೆಯಿಂದ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ.

ಕಬ್ಬನ್ ಪಾರ್ಕ್‌ನಲ್ಲಿ ಸಂಪೂರ್ಣ ವಾಹನ ಸಂಚಾರ ನಿಷೇಧ ಅಸಾಧ್ಯ: ನ್ಯಾಯಾಲಯಕ್ಕೆ ಸರ್ಕಾರ ಸ್ಪಷ್ಟನೆ
ಕಬ್ಬನ್ ಪಾರ್ಕ್ ಒಳಗೆ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್'ಗೆ ರಾಜ್ಯ ಸರ್ಕಾರ ಗುರುವಾರ ಸ್ಪಷ್ಟಪಡಿಸಿದೆ.

