Crime News

ಹಾವೇರಿ: ತನ್ನ ಜೊತೆ ಮಲಗುವಂತೆ ಮಹಿಳೆಗೆ ಒತ್ತಡ; ಖಾಸಗಿ ಫೋಟೋ, ವಿಡಿಯೋ ಲೀಕ್ ಬೆದರಿಕೆ; ಆರೋಪಿ ಬಂಧನ
ಮಹಿಳೆಯೊಬ್ಬರ ಮೇಲೆ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಲ್ಲದೇ ಆಕೆಯ ಖಾಸಗಿ ಫೋಟೋಗಳು ಮತ್ತು ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ ಆರೋಪದ ಮೇಲೆ ದಂಪತಿಗಳ ವಿರುದ್ಧ ಹಾವೇರಿ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನನ್ನ ಸಾವಿಗೆ ಮೋದಿಯೇ ಕಾರಣ: ಪ್ರಧಾನಿ ಹೆಸರು ಬರೆದಿಟ್ಟು 25 ವರ್ಷದ ಪೇಂಟರ್ ಆತ್ಮಹತ್ಯೆ!
ತೆಲಂಗಾಣದ ರಾಜಣ್ಣ ಸಿರ್ಸಿಲ್ಲಾ ಜಿಲ್ಲೆಯಲ್ಲಿ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಗೊಲ್ಲಪಲ್ಲಿ ಗ್ರಾಮದ 25 ವರ್ಷದ ಪೇಂಟರ್ ತನ್ನ ಮನೆಯೊಳಗೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಭಯಾನಕ ಹೆಜ್ಜೆ ಇಡುವ ಮೊದಲು ಪೇಂಟರ್ ಜನಗಣತಿ ಅರ್ಜಿಯಲ್ಲಿ ಆತ್ಮಹತ್ಯೆ ಕುರಿತು ಬರೆದಿದ್ದಾನೆ.

ಚಿತ್ರದುರ್ಗ: ಆಸ್ತಿ ವಿಚಾರಕ್ಕೆ ಗಲಾಟೆ; ಕೋಲಿನಿಂದ ಹೊಡೆದು ತಂದೆಯನ್ನೇ ಕೊಲೆಗೈದ ಪುತ್ರ
ಆಸ್ತಿ ವಿಚಾರಕ್ಕೆ ನಡೆದ ಗಲಾಟೆ ವೇಳೆ ಮಗನೇ ತಂದೆಯನ್ನು ಹತ್ಯೆಗೈದಿರುವ ದಾರುಣ ಘಟನೆ ಕಲ್ಕುಂಟೆ ಗ್ರಾಮದ ಬಳಿ ನಡೆದಿದೆ. ಕೊಲೆಯಾದವರನ್ನು 65 ವರ್ಷದ ಚಂದ್ರಣ್ಣ ಎಂದು ಗುರುತಿಸಲಾಗಿದ್ದು ಪುತ್ರ ಪ್ರಸನ್ನ ಕೊಲೆಗೈದ ಆರೋಪಿಯಾಗಿದ್ದಾನೆ.

ಮಲಗಿದ್ದ ಪತಿಯ ಬೆಡ್ ಶೀಟ್ ನೊಳಗೆ ವಿಷಕಾರಿ ಹಾವು ಬಿಟ್ಟು ಕೊಲೆ: 3ನೇ ಪ್ರಯತ್ನದಲ್ಲಿ ಪತ್ನಿ-ಪ್ರಿಯಕರ ಯಶಸ್ವಿ
ಮಲಗಿದ್ದ ಪತಿಯ ಬೆಡ್ ಶೀಟ್ ನೊಳಗೆ ಪತ್ನಿಯೇ ದೇಶದ ಅತ್ಯಂತ ವಿಷಕಾರಿ ಹಾವನ್ನು ಬಿಟ್ಟು ಆತನನ್ನು ಹತ್ಯೆ ಮಾಡಿರುವ ಘೋರ ಘಟನೆ ಉತ್ತರಪ್ರದೇಶದ ಮೀರತ್ ನಲ್ಲಿ ನಡೆದಿದೆ. ದಾಮಿನಿ ತನ್ನ ಪ್ರಿಯಕರ ತುಷಾರ್ ನಿಂದ ತನ್ನ ಪತಿ ಅತುಲ್ ನನ್ನು ಕೊಲ್ಲಲು ದೇಶದ ಅತ್ಯಂತ ವಿಷಕಾರಿ ಹಾವನ್ನು ಪಡೆದುಕೊಂಡಿದ್ದಳು.

ನೆಲಮಂಗಲ ನೈತಿಕ ಪೊಲೀಸ್‌ಗಿರಿ: Hindu ಯುವಕನ ಮೇಲೆ ತೀವ್ರ ಹಲ್ಲೆ; ನೊಂದು ಆತ್ಮಹತ್ಯೆಗೆ ಯತ್ನಿಸಿದ ಮುಸ್ಲಿಂ ಯುವತಿ, Video!
ಮುಸ್ಲಿಂ ಯುವತಿಯೊಬ್ಬಳ ಜೊತೆಯಲ್ಲಿ ಓಡಾಡುತ್ತಿದ್ದನೆಂಬ ಕಾರಣಕ್ಕೆ ಹಿಂದೂ ಯುವಕನ ಮೇಲೆ ಮುಸ್ಲಿಂ ಯುವಕರ ಗುಂಪೊಂದು ಹಲ್ಲೆ ಮಾಡಿರುವಂತಹ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಡಾಬಸ್‌ಪೇಟೆಯಲ್ಲಿ ನಡೆದಿದೆ.

Watch | ಧಾರವಾಡ: ಡಾಕ್ಟರ್ ಹತ್ಯೆ, ಮಗನ ಮೇಲೂ ಹಲ್ಲೆ, ವೈದ್ಯ ಪತ್ನಿ ಪೊಲೀಸ್ ವಶಕ್ಕೆ!

ಧಾರವಾಡ: ಡಾಕ್ಟರ್ ಕಿರಣ್ ಬರ್ಬರ ಹತ್ಯೆ, ಮಗನ ಮೇಲೂ ಹಲ್ಲೆ: ವೈದ್ಯ ಪತ್ನಿ ಪೊಲೀಸ್ ವಶಕ್ಕೆ! Video
ಧಾರವಾಡದಲ್ಲಿ ಚಿರಾಯು ಆಸ್ಪತ್ರೆಯ ವೈದ್ಯ ಡಾ. ಕಿರಣ್ ಹೊನ್ನಣ್ಣನವರ್ ಅವರನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಲಾಗಿದೆ.

ಮಂಗಳೂರು: 4ನೇ ಮಹಡಿಯಿಂದ ಜಿಗಿದು MBBS ವಿದ್ಯಾರ್ಥಿನಿ ಆತ್ಮಹತ್ಯೆ!
ಮಂಗಳೂರು ನಗರದ ಹೊರವಲಯದ ಸುರತ್ಕಲ್ ಬಳಿಯ ಅಪಾರ್ಟ್‌ಮೆಂಟ್‌ವೊಂದರ ನಾಲ್ಕನೇ ಮಹಡಿಯಿಂದ ಜಿಗಿದು MBBS ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹುಬ್ಬಳ್ಳಿ ಮೂಲದ ಎಂಬಿಬಿಎಸ್ ವಿದ್ಯಾರ್ಥಿನಿ ಮಹಾಲಕ್ಷ್ಮಿ ಮೃತ ದುರ್ದೈವಿ.

50 ಲಕ್ಷ ರೂ ವರದಕ್ಷಿಣೆಗಾಗಿ ಕಿರುಕುಳ: ಪತ್ನಿಯನ್ನು ಕೊಲ್ಲಲು ಮಚ್ಚು ಹಿಡಿದು ಅಟ್ಟಾಡಿಸಿದ PSI ಭೈರಪ್ಪ ಕೊನೆಗೂ ಬಂಧನ!
ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದ ಪೊಲೀಸ್ ಅಧಿಕಾರಿಯೊಬ್ಬ ಪತ್ನಿಯ ಕೊಲೆಗೆ ಯತ್ನಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು ಪೊಲೀಸಪ್ಪನನ್ನು ಈಗ ಬಂಧಿಸಲಾಗಿದೆ.

