Crime News

ಮಂಗಳೂರು: 4ನೇ ಮಹಡಿಯಿಂದ ಜಿಗಿದು MBBS ವಿದ್ಯಾರ್ಥಿನಿ ಆತ್ಮಹತ್ಯೆ!
ಮಂಗಳೂರು ನಗರದ ಹೊರವಲಯದ ಸುರತ್ಕಲ್ ಬಳಿಯ ಅಪಾರ್ಟ್‌ಮೆಂಟ್‌ವೊಂದರ ನಾಲ್ಕನೇ ಮಹಡಿಯಿಂದ ಜಿಗಿದು MBBS ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹುಬ್ಬಳ್ಳಿ ಮೂಲದ ಎಂಬಿಬಿಎಸ್ ವಿದ್ಯಾರ್ಥಿನಿ ಮಹಾಲಕ್ಷ್ಮಿ ಮೃತ ದುರ್ದೈವಿ.

50 ಲಕ್ಷ ರೂ ವರದಕ್ಷಿಣೆಗಾಗಿ ಕಿರುಕುಳ: ಪತ್ನಿಯನ್ನು ಕೊಲ್ಲಲು ಮಚ್ಚು ಹಿಡಿದು ಅಟ್ಟಾಡಿಸಿದ PSI ಭೈರಪ್ಪ ಕೊನೆಗೂ ಬಂಧನ!
ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದ ಪೊಲೀಸ್ ಅಧಿಕಾರಿಯೊಬ್ಬ ಪತ್ನಿಯ ಕೊಲೆಗೆ ಯತ್ನಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು ಪೊಲೀಸಪ್ಪನನ್ನು ಈಗ ಬಂಧಿಸಲಾಗಿದೆ.

ತುಮಕೂರು: ಇಷ್ಟವಿಲ್ಲದಿದ್ದರೂ ಸೋದರಮಾವನ ಜೊತೆ ಮದುವೆ; ವಿವಾಹಿತೆ ಆತ್ಮಹತ್ಯೆ ಬೆನ್ನಲ್ಲೇ ಪತಿಯೂ ನೇಣಿಗೆ ಶರಣು!
ಇಷ್ಟವಿಲ್ಲದಿದ್ದರೂ ಕುಟುಂಬದ ಒತ್ತಾಯಕ್ಕೆ ಮಣಿದು ಸೋದರಮಾವನೊಂದಿಗೆ ವಿವಾಹವಾಗಿದ್ದ ನವವಿವಾಹಿತೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತುಮಕೂರಿ ಶಿರಾ ತಾಲ್ಲೂಕಿನ ಹನುಮನಹಳ್ಳಿಯಲ್ಲಿ ನಡೆದಿದೆ.

ಬೆಂಗಳೂರು: ಅಪ್ಪ ಕ್ಷಮಿಸು, ಈ ಅವಮಾನ ಸಹಿಸಿಕೊಂಡು ಬದುಕಲಾರೇ..; ಶಿಕ್ಷಕಿ ಬೈದರೆಂದು ಶಾಲಾ ವಿದ್ಯಾರ್ಥಿನಿ ನೇಣಿಗೆ ಶರಣು!
ಬೆಂಗಳೂರು ನಗರ ಆನೇಕಲ್ ತಾಲೂಕಿನಲ್ಲಿ 8ನೇ ತರಗತಿ ವಿದ್ಯಾರ್ಥಿನಿಯೋರ್ವಳು ಶಿಕ್ಷಕಿ ಬೈದಿದ್ದಕ್ಕೆ ಮನನೊಂದ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ನಡೆದಿದೆ.

ಮದುವೆ ಪ್ರಸ್ತಾಪ ತಿರಸ್ಕರಿಸಿದ ಪೋಷಕರು: ಅಪ್ರಾಪ್ತೆಯ ಮೇಲೆ ಚೂರಿಯಿಂದ ಹಲ್ಲೆ ನಡೆಸಿದ ಆರೋಪಿ ಮೊಹಮ್ಮದ್!
ದಕ್ಷಿಣ ಕನ್ನಡದ ಬಂಟ್ವಾಳ ತಾಲೂಕಿನ ಮಂಚಿ ಬಳಿಯ ಮೊಂತಿಮರೂಪಡ್ಪುವಿನಲ್ಲಿ ಇಂದು ಬೆಳಿಗ್ಗೆ 17 ವರ್ಷದ ಬಾಲಕಿಯ ಮೇಲೆ ಆಕೆಯ ಸಂಬಂಧಿಯೊಬ್ಬ ಚೂರಿಯಿಂದ ಕ್ರೂರವಾಗಿ ಹಲ್ಲೆ ನಡೆಸಿದ್ದಾನೆ.

ಬಳ್ಳಾರಿ: ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ; ಕಾಮುಕ ಉಪನ್ಯಾಸಕನ ಬಂಧನ
ಮದುವೆಯಾಗುವುದಾಗಿ ನಂಬಿಸಿ ಅಪ್ರಾಪ್ತ ವಿದ್ಯಾರ್ಥಿನಿಯೊಂದಿಗೆ ಉಪನ್ಯಾಸಕನೇ ಅನೈತಿಕ ಸಂಬಂಧ ಬೆಳೆಸಿ, ಲೈಂಗಿಕ ದೌರ್ಜನ್ಯ ಎಸಗಿರುವ ಆಘಾತಕಾರಿ ಘಟನೆ ಬಳ್ಳಾರಿಯಲ್ಲಿ ಬೆಳಕಿಗೆ ಬಂದಿದೆ.
ಚಿಕ್ಕಬಳ್ಳಾಪುರ: ಚುಡಾಯಿಸಿದ್ದನ್ನು ಪ್ರಶ್ನಿಸಿದ ವಿದ್ಯಾರ್ಥಿನಿ ಮನೆಗೆ ನುಗ್ಗಿ ಕತ್ತು ಕೊಯ್ಯಲು ಯತ್ನ, ಪುಂಡರಿಂದ ಕಲ್ಲು ತೂರಾಟ!
ನಡುರಸ್ತೆಯಲ್ಲಿ ನಿಂತ ಪುಂಡರ ಗುಂಪೊಂದು ಹುಡುಗಿಯರನ್ನು ಚುಡಾಯಿಸುತ್ತಿದ್ದು ಇದನ್ನು ಪ್ರಶ್ನಿಸಿದ ವಿದ್ಯಾರ್ಥಿನಿಯ ಮನೆಯ ಮೇಲೆ ಆ ಗುಂಪು ಕಲ್ಲು ತೂರಾಟ ನಡೆಸಿದ್ದಲ್ಲದೇ ಮನೆಗೆ ನುಗ್ಗಿ ವಿದ್ಯಾರ್ಥಿನಿಯ ಕತ್ತು ಕೊಯ್ಯಲು ಯತ್ನಿಸಿದ ಘಟನೆ ಚಿಂತಾಮಣಿಯಲ್ಲಿ ನಡೆದಿದೆ.

ಮೈಸೂರು: ಪತಿಯ ಕತ್ತು ಹಿಸುಕಿ ಕೊಂದು ಹೃದಯಾಘಾತ ಎಂದು ನಂಬಿಸಲು ಯತ್ನಿಸಿದ್ದ ಪತ್ನಿ ಸಿಕ್ಕಿಬಿದ್ದಿದ್ದೇ ರೋಚಕ!
50 ವರ್ಷದ ವ್ಯಕ್ತಿಯೊಬ್ಬನ ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು ಪತ್ನಿಯೇ ಕತ್ತು ಹಿಸುಕಿ ಕೊಂದಿದ್ದಾಳೆ ಎಂಬ ಆಘಾತಕಾರಿ ಸುದ್ದಿ ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.

ಭೀಮಾತೀರದಲ್ಲಿ 6 ಮಂದಿ ಹತ್ಯೆ ಕೇಸ್: ಪರಾರಿಯಾಗಲು ಯತ್ನಿಸಿದ ಕಿಂಗ್‌ಪಿನ್ ಕಾಲಿಗೆ ಗುಂಡು! Video
ಪೊಲೀಸರ ಮೇಲೆ ಚಾಕುವಿನಿಂದ ದಾಳಿ ಮಾಡಲು ಯತ್ನಿಸಿದ ಆರೋಪಿ ಮಹೇಶ್ ತಳವಾರ್ ಮೇಲೆ ಗುಂಡು ಹಾರಿಸಿ ಬಂಧಿಸಲಾಗಿದೆ.

