Covid19

ಭಾರತದಲ್ಲಿ 30 ಲಕ್ಷ ಗಡಿ ದಾಟಿದ ಕೊರೋನಾ ಸೋಂಕಿತರ ಸಂಖ್ಯೆ, ಕಳೆದ 24 ಗಂಟೆಗಳಲ್ಲಿ 912 ಮಂದಿ ಸಾವು
ಭಾರತದಲ್ಲಿ ಕೋವಿಡ್-19 ಸೋಂಕಿತ ಪ್ರಕರಣಗಳು ನಿನ್ನೆ ಶನಿವಾರದ ಹೊತ್ತಿಗೆ 30 ಲಕ್ಷ ಗಡಿ ದಾಟಿದೆ. ಗುಣಮುಖರಾಗುತ್ತಿರುವವರ ಸಂಖ್ಯೆ ಸಹ ಹೆಚ್ಚಾಗುತ್ತಿದ್ದು ಇದುವರೆಗೆ 22 ಲಕ್ಷದ 71 ಸಾವಿರ ಮಂದಿ ಗುಣಮುಖರಾಗಿದ್ದಾರೆ.

ರಾಜ್ಯದ ಇನ್ನೊಬ್ಬ ಸಂಸದರಿಗೂ ಕೊರೋನಾ ಪಾಸಿಟಿವ್
ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಂತರ ಇದೀಗ ರಾಜ್ಯದ ಇನ್ನೊಬ್ಬಸಂಸದರಿಗೂ ಕೋವಿಡ್ ಸೋಂಕು ದೃಢವಾಗಿದೆ.

ಕೊರೋನಾ ವೈರಸ್: ಭಾರತದಲ್ಲಿ ಮರಣ ಪ್ರಮಾಣ ಶೇ.2 ಕ್ಕಿಂತ ಕಡಿಮೆ: ಆರೋಗ್ಯ ಸಚಿವಾಲಯ
ಭಾರತದಲ್ಲಿ ಕೊರೋನಾ ಸೋಂಕಿತರ ಪ್ರಮಾಣ ಗಣನೀಯವಾಗಿ ಏರಿಕೆಯಾಗುತ್ತಿರುವ ಹೊತ್ತಿನಲ್ಲೇ ಜಗತ್ತಿನ ಇತರೆ ದೇಶಗಳಿಗೆ ಹೋಲಿಕೆ ಮಾಡಿದರೆ ದೇಶದಲ್ಲಿ ಕೊರೋನಾ ಮರಣ ಪ್ರಮಾಣ ತೀರಾ ಕಡಿಮೆ ಇದೆ ಎಂದು ಹೇಳಲಾಗಿದೆ.

ಮಂಗಳೂರು : ಹಳೆ ರೌಡಿ ಎಕ್ಕೂರು ಬಾಬಾ ಕೊರೊನಾಗೆ ಬಲಿ
ಒಂದು ಕಾಲದಲ್ಲಿ ಜನರಲ್ಲಿ ಭೀತಿ ಹುಟ್ಟಿಸಿದ್ದ ಜಿಲ್ಲೆಯ ಕುಖ್ಯಾತ ಮಾಜಿ ರೌಡಿ ಎಕ್ಕೂರು ನಿವಾಸಿ ಎಕ್ಕೂರು ಬಾಬಾ ಅಲಿಯಾಸ್ ಶುಭಕರ ಶೆಟ್ಟಿಯನ್ನು ಕೊರೋನಾ ಬಲಿ ತೆಗೆದುಕೊಂಡಿದೆ.

ಈ ವರ್ಷ ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಠಾಪನೆಯಿಲ್ಲ; ಸರ್ಕಾರದ ಕಟ್ಟುನಿಟ್ಟಿನ ಆದೇಶ
ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಈ ಬಾರಿ ಬೆಂಗಳೂರು ನಗರದಲ್ಲಿ ಗಣೇಶ ಚತುರ್ದಶಿಯ ಸಾರ್ವಜನಿಕ ಆಚರಣೆ ನಡೆಯುವುದಿಲ್ಲ.

ಖ್ಯಾತ ಬಾಲಿವುಡ್ ಗೀತರಚನೆಕಾರ ಮತ್ತು ಉರ್ದು ಕವಿ ರಾಹತ್ ಇಂದೋರಿ ಕೋವಿಡ್ -19ನಿಂದ ನಿಧನ
ಕೋವಿಡ್ -19 ಪಾಸಿಟಿವ್ ವರದಿ ಬಂದು ಕೆಲವೇ ಗಂಟೆಗಳ ನಂತರ, 70 ವರ್ಷದ ಬಾಲಿವುಡ್ ಗೀತರಚನೆಕಾರ ಮತ್ತು ಪ್ರಸಿದ್ದ ಉರ್ದು ಕವಿ ಡಾ.ರಾಹತ್ ಇಂದೋರಿ ಮಂಗಳವಾರ ಇಂದೋರ್‌ನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಸೋಂಕಿತರ ಜೊತೆ ಬೇಕಂತಲೇ ಕೆಲವರಿಗೆ ಬಲವಂತದ ಕ್ವಾರೆಂಟೈನ್: ಡಿಕೆಶಿ ಗಂಭೀರ ಆರೋಪ
ಕೋವಿಡ್ ಆಸ್ಪತ್ರೆಯಲ್ಲಿ ನಡೆಯುವ ಹಗರಣಗಳು ಹಾಗೂ ಅಲ್ಲಿನ ಎಷ್ಟೋ ಜನರ ನೋವಿನ ಕುರಿತು ಸಿನಿಮಾ ನಿರ್ಮಿಸಬಹು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಶ್ರೀರಾಮನ ಆಶೀರ್ವಾದದಿಂದ ಕೊರೋನಾ ಕಣ್ಮರೆಯಾಗಲಿದೆ: ಶಿವಸೇನೆ
ಭಗವಾನ್ ಶ್ರೀರಾಮನ ಆಶೀರ್ವಾದದಿಂದ ದೇಶದಲ್ಲಿ ಕೋವಿಡ್ -19 ಬಿಕ್ಕಟ್ಟು ಕಣ್ಮರೆಯಾಗಲಿದೆ ಎಂದು ಶಿವಸೇನೆ ಮಂಗಳವಾರ ತಿಳಿಸಿದೆ.

ಕೇರಳಕ್ಕೆ ಕೊರೋನಾಘಾತ; ಒಂದೇ ದಿನ 1,129 ಸೋಂಕು ಪ್ರಕರಣ ದಾಖಲು
ಕೊರೋನಾ ವೈರಸ್ ನಿಯಂತ್ರಣದಲ್ಲಿ ಮಹತ್ತರ ಮುನ್ನಡೆ ಸಾಧಿಸಿದ್ದ ಕೇರಳದಲ್ಲಿ ಮತ್ತೆ ಕೊರೋನಾ ವೈರಸ್ ತನ್ನ ಆರ್ಭಟ ಶುರು ಮಾಡಿದ್ದು ನಿನ್ನೆ ಒಂದೇ ದಿನ ಕೇರಳದಲ್ಲಿ 1,129 ಹೊಸ ಸೋಂಕು ಪ್ರಕರಣ ದಾಖಲಾಗಿವೆ.

