Covid19

ಕೋವಿಡ್-19 ಕುರಿತು ಅತಿ ಹೆಚ್ಚು ತಪ್ಪು ಮಾಹಿತಿ ಹರಡಿದ ರಾಷ್ಟ್ರ ಭಾರತ: ಅಧ್ಯಯನದಿಂದ ಬಹಿರಂಗ
ನಮ್ಮಲ್ಲಿ ಅತಿ ಹೆಚ್ಚು ಮಂದಿ ಇಂಟರ್ನೆಟ್ ಬಳಕೆದಾರರಿದ್ದು, ಅವರಲ್ಲಿ ಇಂಟರ್ನೆಟ್ ಕುರಿತ ಸಾಕ್ಷರತೆ ಕಡಿಮೆ ಪ್ರಮಾಣದಲ್ಲಿರುವುದು ಕೂಡಾ ಕೊರೊನಾ ಸಂಬಂಧಿ ತಪ್ಪು ಮಾಹಿತಿಗಳು ಹರಿದಾಡಲು ಪ್ರಮುಖ ಕಾರಣ

ಚೀನಾದ ಮತ್ತೊಂದು ನಗರದಲ್ಲಿ ಕೋವಿಡ್-19 ಡೆಲ್ಟಾ ಹಾವಳಿ: 59 ಹೊಸ ಪ್ರಕರಣಗಳು ಪತ್ತೆ
ಮಂಗಳವಾರ ಒಂದೇ ದಿನ 59 ಡೆಲ್ಟಾ ಪ್ರಕರಣಗಳು ಪತ್ತೆಯಾಗಿದ್ದು, ಶಿಯಾಮೆನ್ ನಗರದಲ್ಲಿ ಡೆಲ್ಟಾ ವೈರಾಣು ವ್ಯಾಪಕವಾಗಿ ಹರಡಿರುವ ಆತಂಕ ಎದುರಾಗಿದೆ.

ಬಗಲಲ್ಲೇ ಇರುವ ದುಷ್ಮನ್ ನಿಪಾ ವೈರಾಣು ಬಗ್ಗೆ ನಾವು ತಿಳಿದುಕೊಳ್ಳಬೇಕಾಗಿರುವುದೇನು?
ಕರ್ನಾಟಕದಲ್ಲಿ ಇದುವರೆಗೂ ಒಂದೂ ನಿಪಾ ಪ್ರಕರಣ ದಾಖಲಾಗಿಲ್ಲ ನಿಜ ಆದರೆ ಪಕ್ಕದ ರಾಜ್ಯದಲ್ಲೇ ನಿಪಾ ಆತಂಕದ ವಾತಾವರಣ ಸೃಷ್ಟಿಸಿರುವುದರಿಂದ, ಒಂದಷ್ಟು ಮಾಹಿತಿಯನ್ನು ತಿಳಿದುಕೊಂಡಿರುವುದು ಉತ್ತಮ.

ಕೊರೊನಾ ಸಾಂಕ್ರಾಮಿಕ: ಬಡ ವಿದ್ಯಾರ್ಥಿಗಳಿಗೆ ಶೇ.20ರಷ್ಟು ಶುಲ್ಕ ರಿಯಾಯಿತಿ ಘೋಷಿಸಿದ ದೆಹಲಿ ಕಾಲೇಜು
ಕೊರೊನಾ ಸೋಂಕಿಗೆ ಪಾಲಕರನ್ನು ಕಳೆದುಕೊಂಡ ಮಕ್ಕಳಿಗೆ ಶೇ.100 ಶುಲ್ಕ ರಿಯಾಯಿತಿ ಘೋಷಿಸಿದೆ ಎನ್ನುವುದು ವಿಶೇಷ. ಕಾಲೇಜಿನ ಈ ಕ್ರಮಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಕಳೆದ 6 ತಿಂಗಳಲ್ಲಿ ಮೊದಲ ಕೊರೊನಾ ಮೃತ್ಯು ದಾಖಲಿಸಿದ ನ್ಯೂಜಿಲೆಂಡ್
ಕಳೆದ ತಿಂಗಳು ದಿನಕ್ಕೆ 80 ಹೊಸ ಪ್ರಕರಣಗಳು ದಾಖಲಾಗುತ್ತಿದ್ದವು. ಕಠಿಣ ಲಾಕ್ ಡೌನ್ ನಿಯಮಾವಳಿಯಿಂದಾಗಿ ಹೊಸ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ.

ಕೊಲಂಬಿಯಾದಲ್ಲಿ ಪತ್ತೆಯಾದ ಹೊಸ ಕೊರೊನಾ ರೂಪಂತರಿ ತಳಿ 'ಮ್ಯು' ಮೇಲೆ ವಿಶ್ವ ಆರೋಗ್ಯ ಸಂಸ್ಥೆ ನಿಗಾ
ವೈಜ್ಞಾನಿಕವಾಗಿ ಬಿ.1.621 ಎಂದು ಕರೆಯಲ್ಪಡುವ ಮ್ಯು ತಳಿ ಮುಂಬರುವ ದಿನಗಳಲ್ಲಿ ಜಗತ್ತಿಗೆ ಆತಂಕವನ್ನು ತಂದೊಡ್ಡಬಲ್ಲ ಸಾಧ್ಯತೆ ಇದೆ ಎಂದು ತಜ್ನರು ಅಭಿಪ್ರಾಯ ಪಟ್ಟಿದ್ದಾರೆ.

ಕೇರಳ ಚೆಕ್ ಪೋಸ್ಟ್ ನಲ್ಲಿ ನಕಲಿ ಕೊರೊನಾ ಆರ್ ಟಿ ಪಿ ಸಿ ಆರ್ ವರದಿ ಹೊಂದಿದ್ದ 9 ಮಂದಿ ಸೆರೆ
ಬಂಧಿತರೆಲ್ಲರೂ ಕಾಸರಗೋಡು ಮೂಲದವರು ಎಂದು ತಿಳಿದುಬಂಡಿದೆ. ಇವರಲ್ಲಿ ಓರ್ವ ನಕಲಿ ದಾಖಲೆ ಸೃಷ್ಟಿಸಿದವನೂ ಸೇರಿದ್ದಾನೆ.

ಸಾರ್ವಜನಿಕ ಗಣೇಶೋತ್ಸವ ಮೇಲಿನ ನಿರ್ಬಂಧ ಸಡಿಲಿಸದಂತೆ ತಜ್ಞರ ಎಚ್ಚರಿಕೆ: ಬಲಪಂಥೀಯರ ವಿರೋಧ
ಯಾವುದೇ ಸಾರ್ವಜನಿಕ ಸಮಾರಂಭಗಳು, ಮೆರವಣಿಗೆಗಳಿಂದ ಕೊರೊನಾ ಸೋಂಕು ವ್ಯಾಪಕವಾಗಿ ಹರಡಲು ಕಾರಣವಾಗುವುದರಿಂದ ಸರ್ಕಾರ ಗಣೇಶೋತ್ಸವ ಸಂಬಂಧ ಸಾರ್ವಜನಿಕ ಆಚರಣೆಗೆ ನಿರ್ಬಂಧ ವಿಧಿಸಿತ್ತು.

ಕಳೆದ ವಾರ ದೇಶದ ಶೇ.53ರಷ್ಟು ಕೊರೋನಾ ಪ್ರಕರಣ ಮಹಾರಾಷ್ಟ್ರ, ಕೇರಳದಲ್ಲಿ ಪತ್ತೆ: ಕೇಂದ್ರ ಸರ್ಕಾರ
ಕಳೆದ ವಾರ ಭಾರತದಲ್ಲಿ ದಾಖಲಾದ ಒಟ್ಟೂ ಕೊರೋನಾ ಪ್ರಕರಣಗಳಲ್ಲಿ ಅರ್ಧಕ್ಕಿಂತ ಹೆಚ್ಚು ಪ್ರಕರಣಗಳನ್ನು ಮಹಾರಾಷ್ಟ್ರ ಮತ್ತು ಕೇರಳ ರಾಜ್ಯಗಳು ದಾಖಲಿಸಿದೆ, ಸಾಂಕ್ರಾಮಿಕ ದೂರವಾಗಿದೆ ಎಂಬ ಆತ್ಮವಿಶ್ವಾಸಕ್ಕೆ ಈಗಲೂ ಅವಕಾಶವಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

