ಭಾರತದಲ್ಲಿ 30 ಲಕ್ಷ ಗಡಿ ದಾಟಿದ ಕೊರೋನಾ ಸೋಂಕಿತರ ಸಂಖ್ಯೆ, ಕಳೆದ 24 ಗಂಟೆಗಳಲ್ಲಿ 912 ಮಂದಿ ಸಾವು
ಭಾರತದಲ್ಲಿ ಕೋವಿಡ್-19 ಸೋಂಕಿತ ಪ್ರಕರಣಗಳು ನಿನ್ನೆ ಶನಿವಾರದ ಹೊತ್ತಿಗೆ 30 ಲಕ್ಷ ಗಡಿ ದಾಟಿದೆ. ಗುಣಮುಖರಾಗುತ್ತಿರುವವರ ಸಂಖ್ಯೆ ಸಹ ಹೆಚ್ಚಾಗುತ್ತಿದ್ದು ಇದುವರೆಗೆ 22 ಲಕ್ಷದ 71 ಸಾವಿರ ಮಂದಿ ಗುಣಮುಖರಾಗಿದ್ದಾರೆ.

ನವದೆಹಲಿ: ಭಾರತದಲ್ಲಿ ಕೋವಿಡ್-19 ಸೋಂಕಿತ ಪ್ರಕರಣಗಳು ನಿನ್ನೆ ಶನಿವಾರದ ಹೊತ್ತಿಗೆ 30 ಲಕ್ಷ ಗಡಿ ದಾಟಿದೆ. ಗುಣಮುಖರಾಗುತ್ತಿರುವವರ ಸಂಖ್ಯೆ ಸಹ ಹೆಚ್ಚಾಗುತ್ತಿದ್ದು ಇದುವರೆಗೆ 22 ಲಕ್ಷದ 71 ಸಾವಿರ ಮಂದಿ ಗುಣಮುಖರಾಗಿದ್ದಾರೆ.
ನಿನ್ನೆ ಬೆಳಗ್ಗೆ 8 ಗಂಟೆ ಹೊತ್ತಿಗೆ ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿರುವ ಅಂಕಿಅಂಶ ಪ್ರಕಾರ, ಒಂದೇ ದಿನ ದೇಶದಲ್ಲಿ 69 ಸಾವಿರದ 874 ಸೋಂಕಿತರು ಕಂಡುಬಂದಿದ್ದು ನಿನ್ನೆಯ ಹೊತ್ತಿಗೆ ಒಟ್ಟು ಸೋಂಕಿತರ ಸಂಖ್ಯೆ 29 ಲಕ್ಷದ 75 ಸಾವಿರದ 701 ಆಗಿತ್ತು. ಸಾವಿನ ಸಂಖ್ಯೆ 55 ಸಾವಿರದ 794 ಆಗಿತ್ತು. ಕಳೆದ 24 ಗಂಟೆಗಳಲ್ಲಿ 945 ಮಂದಿ ಮೃತಪಟ್ಟಿದ್ದಾರೆ.
ನಿನ್ನೆ ರಾತ್ರಿಯ ಹೊತ್ತಿಗೆ ಕೋವಿಡ್-10 ಸೋಂಕಿತರ ಸಂಖ್ಯೆ 30 ಲಕ್ಷದ 37 ಸಾವಿರದ 657 ಆಗಿದ್ದು ಸಾವಿನ ಸಂಖ್ಯೆ 56 ಸಾವಿರದ 762 ಆಗಿದೆ. ಮತ್ತು ಗುಣಮುಖ ಹೊಂದಿದವರ ಸಂಖ್ಯೆ ಇದುವರೆಗೆ 22 ಲಕ್ಷದ 71 ಸಾವಿರದ 054 ಆಗಿದೆ.ಇಂದು ಬೆಳಗಿನ ಹೊತ್ತಿಗೆ ಸೋಂಕಿತರ ಸಂಖ್ಯೆ 30 ಲಕ್ಷದ 44 ಸಾವಿರದ 941 ಆಗಿದ್ದು 7 ಲಕ್ಷದ 07 ಸಾವಿರದ 668 ಸಕ್ರಿಯ ಕೇಸುಗಳು, 22 ಲಕ್ಷದ 80 ಸಾವಿರದ 567 ಗುಣಮುಖ ಹೊಂದಿದ ಮತ್ತು 56 ಸಾವಿರದ 706 ಮಂದಿ ಮೃತಪಟ್ಟ ವರದಿಗಳಾಗಿವೆ.
ಅಮೆರಿಕ, ಬ್ರೆಜಿಲ್ ನಂತರ ಕೋವಿಡ್-19 ಸೋಂಕಿತರ ಸಂಖ್ಯೆಯಲ್ಲಿ ಭಾರತ ವಿಶ್ವದಲ್ಲಿ ಮೂರನೇ ಸ್ಥಾನದಲ್ಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


