COVAXIN

2022 ಫೆಬ್ರವರಿಯಿಂದ 22.8 ಕೋಟಿ ಕೋವಾಕ್ಸಿನ್ ಡೋಸ್ ಗಳ ಉತ್ಪಾದನೆ ಆರಂಭ: ಹಾಫ್ಕಿನ್ ಬಯೋಫಾರ್ಮ
ಮುಂದಿನ ವರ್ಷ ಫೆಬ್ರವರಿಯಿಂದ ಮುಂಬೈ ಮೂಲದ ಹಾಫ್ಕಿನ್ ಬಯೋಫಾರ್ಮ ಕೋವಾಕ್ಸಿನ್ ಉತ್ಪಾದನೆ ಆರಂಭಿಸಲಿದೆ. ಕೇಂದ್ರ ಸರ್ಕಾರದ ಆಶಯದಂತೆ ಈ ವರ್ಷ ಆಗಸ್ಟ್ ನಿಂದ ಡಿಸೆಂಬರ್ ತಿಂಗಳ ಮಧ್ಯೆ ಸಂಸ್ಥೆಗೆ ಸುಮಾರು 55 ಕೋಟಿ ಕೋವಾಕ್ಸಿನ್ ಡೋಸ್ ನ್ನು ವಿತರಣೆ ಮಾಡಲು ಸಾಧ್ಯವಾಗಲಿಕ್ಕಿಲ್ಲ ಎಂದು ಹೇಳಲಾಗುತ್ತಿದೆ.

ಪಾಟ್ನಾ ಏಮ್ಸ್ ನಲ್ಲಿ ಮಕ್ಕಳ ಮೇಲೆ ಕೋವ್ಯಾಕ್ಸಿನ್ ಲಸಿಕೆ ಪ್ರಯೋಗ ಆರಂಭ
ಭಾರತ್ ಬಯೋಟೆಕ್ ಸಿದ್ಧಪಡಿಸಿರುವ ಕೋವ್ಯಾಕ್ಸಿನ್ ಲಸಿಕೆಯನ್ನು ಇದೇ ಮೊದಲ ಬಾರಿಗೆ ಪಾಟ್ನಾದ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಏಮ್ಸ್) ಮಕ್ಕಳ ಮೇಲೆ ಪ್ರಯೋಗವನ್ನು ಆರಂಭಿಸಿದೆ ಎಂದು ತಿಳಿದುಬಂದಿದೆ.

2 ನೇ ಡೋಸ್ ಕೋವ್ಯಾಕ್ಸಿನ್ ಲಭ್ಯವಿಲ್ಲದ ಮೇಲೆ ಲಸಿಕೆ ಕೇಂದ್ರಗಳಿಗೆ ಅಬ್ಬರದಿಂದ ಚಾಲನೆ ನೀಡಿದ್ದೇಕೆ?: ದೆಹಲಿ ಹೈಕೋರ್ಟ್
ಕೋವ್ಯಾಕ್ಸಿನ್ ಅಲಭ್ಯತೆ ಬಗ್ಗೆ ದೆಹಲಿ ಸರ್ಕಾರವನ್ನು ಪ್ರಶ್ನಿಸಿದ್ದು, ನಿಗದಿತ ಸಮಯದಲ್ಲಿ ಜನತೆಗೆ ಎರಡೂ ಡೋಸ್ ಗಳ ಕೋವ್ಯಾಕ್ಸಿನ್ ಲಸಿಕೆಯನ್ನು ಖಾತ್ರಿಪಡಿಸಿಕೊಳ್ಳಲಾಗದ ಮೇಲೆ ಕೇಂದ್ರಗಳನ್ನು ಆತುರಾತುರವಾಗಿ, ತೆರೆದಿದ್ದೇಕೆ? ಎಂದು ಕೇಳಿದೆ.

ಕೋವ್ಯಾಕ್ಸಿನ್ ಪಡೆವವರಿಗೆ ಆದ್ಯತೆ ಮೇರೆಗೆ 2ನೇ ಡೋಸ್: ಬಿಬಿಎಂಪಿ
ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೋವ್ಯಾಕ್ಸಿನ್ ಮೊದಲ ಡೋಸ್ ಪಡೆದು ಎರಡನೇ ಡೋಸ್ ಗಾಗಿ ಕಾದು ಕುಳಿತಿರುವವರಿಗೆ ಆದ್ಯತೆ ಮೇರೆಗೆ ಕೋವ್ಯಾಕ್ಸಿನ್ ಲಸಿಕೆ ನೀಡಲಾಗುತ್ತದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರು ಶುಕ್ರವಾರ ಹೇಳಿದ್ದಾರೆ.

ಕೋವ್ಯಾಕ್ಸಿನ್ ಉತ್ಪಾದನೆ, ಪೂರೈಕೆ ಪ್ರಕ್ರಿಯೆಗೆ 4 ತಿಂಗಳು ಬೇಕು: ಭಾರತ್ ಬಯೋಟೆಕ್
ಕೋವ್ಯಾಕ್ಸಿನ್ ಲಸಿಕೆ ಉತ್ಪಾದಿಸಿ, ಪೂರೈಕೆ ಮಾಡಲು ನಾಲ್ಕು ತಿಂಗಳ ಕಾಲಾವಕಾಶ ಬೇಕಾಗುತ್ತದೆ ಎಂದು ಭಾರತ್ ಬಯೋಟೆಕ್ ಹೇಳಿದೆ.

ಕೋವ್ಯಾಕ್ಸಿನ್ ಲಸಿಕೆ ಕೊರತೆ: 45 ವರ್ಷ ಮೇಲ್ಪಟ್ಟವರಿಗೆ 2ನೇ ಡೋಸ್ ಲಸಿಕೆ ನೀಡಿಕೆಗೆ ಮಾತ್ರ ಅವಕಾಶ
ರಾಜ್ಯದಲ್ಲಿ ಕೋವ್ಯಾಕ್ಸಿನ್ ಲಸಿಕೆಗೆ ತೀವ್ರ ಕೊರತೆಯುಂಟಾಗಿದ್ದು, ಪ್ರಸ್ತುತ ಲಭ್ಯವಿರುವ ಕೋವ್ಯಾಕ್ಸಿನ್ ಲಸಿಕೆಗಳನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಕೇಂದ್ರದಿಂದ ರಾಜ್ಯಕ್ಕೆ 1.25 ಲಕ್ಷ ಡೋಸ್ ಕೋವ್ಯಾಕ್ಸಿನ್ ಲಸಿಕೆ ಬಂದಿದೆ: ಸಚಿವ ಸುಧಾಕರ್
ಕೇಂದ್ರ ಸರ್ಕಾರದ ಕೋಟಾದಡಿಯಲ್ಲಿ 1.25 ಲಕ್ಷ ಡೋಸ್ ಕೋವ್ಯಾಕ್ಸಿನ್ ಲಸಿಕೆ ಕರ್ನಾಟಕಕ್ಕೆ ಬಂದಿದೆ ಎಂದು ಆರೋಗ್ಯ ಸಚಿವ ಸುಧಾಕರ್ ಅವರು ಮಂಗಳವಾರ ಹೇಳಿದ್ದಾರೆ.

ಕೋವ್ಯಾಕ್ಸಿನ್ ತುರ್ತು ಬಳಕೆಗೆ ಅನುಮತಿ ಕುರಿತು ಭಾರತ್ ಬಯೋಟೆಕ್ ನಿಂದ ಇನ್ನಷ್ಟು ಮಾಹಿತಿ ಬೇಕು: ವಿಶ್ವ ಆರೋಗ್ಯ ಸಂಸ್ಥೆ
ಕೋವ್ಯಾಕ್ಸಿನ್ ತುರ್ತು ಬಳಕೆಗೆ ಅನುಮತಿ ನೀಡುವ ಕುರಿತು ಮತ್ತಷ್ಟು ದಾಖಲೆ ಮತ್ತು ಮಾಹಿತಿ ಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಜೂನ್ ನಿಂದ ಮಕ್ಕಳ ಮೇಲೆ ಕೋವಾಕ್ಸಿನ್ ಪ್ರಯೋಗ ಸಾಧ್ಯತೆ: ಅನುಮತಿ ಖಾತ್ರಿಪಡಿಸಿದ ಭಾರತ್ ಬಯೋಟೆಕ್ ಅಧಿಕಾರಿ!
ಭಾರತ್ ಬಯೋಟೆಕ್ ಔಷಧ ಕಂಪನಿ ಜೂನ್ ನಿಂದ ಮಕ್ಕಳ ಮೇಲೆ 'ಕೋವಾಕ್ಸಿನ್' ಕೋವಿಡ್-19 ಲಸಿಕೆಯ ಕ್ಲಿನಿಕಲ್ ಪ್ರಯೋಗವನ್ನು ಆರಂಭಿಸುವ ಸಾಧ್ಯತೆಯಿದೆ ಎಂದು ಔಷಧ ತಯಾರಿಕೆ ಕಂಪನಿಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

