COVAXIN

ಕೋವ್ಯಾಕ್ಸಿನ್ ನ ಮೂರನೇ ಹಂತದ ಡಾಟಾ ಪರಾಮರ್ಶಿಸಲಿರುವ ಡಿಸಿಜಿಐ ತಜ್ಞರ ಸಮಿತಿ
ಔಷಧ ನಿಯಂತ್ರಕದ ಅಡಿಯಲ್ಲಿ ಬರುವ ವಿಷಯ ತಜ್ಞರ ಸಮಿತಿ ಭಾರತ್ ಬಯೋಟೆಕ್ ನ ಕೋವ್ಯಾಕ್ಸಿನ್ ನ ಮೂರನೇ ಹಂತದ ಡಾಟಾ ಪರಾಮರ್ಶಿಸಲಿದೆ.

ವಿಶ್ವ ಆರೋಗ್ಯ ಸಂಸ್ಥೆಗೆ 3ನೇ ಹಂತದ ಲಸಿಕಾ ಪ್ರಯೋಗದ ದತ್ತಾಂಶ ಸಲ್ಲಿಸಿದ ಭಾರತ್ ಬಯೋಟೆಕ್; ಇಒಐಗೆ ಒಪ್ಪಿಗೆ
ವಿಶ್ವ ಆರೋಗ್ಯ ಸಂಸ್ಥೆಯಿಂದ ಕೋವ್ಯಾಕ್ಸಿನ್ ಲಸಿಕೆಯ ತುರ್ತುಬಳಕೆಯ ಅನುಮತಿಗೆ ಕಾಯುತ್ತಿರುವ ಭಾರತ್ ಬಯೋಟೆಕ್ ಸಂಸ್ಥೆ ಕೋವ್ಯಾಕ್ಸಿನ್ ಲಸಿಕೆಯ 3ನೇ ಹಂತದ ಪ್ರಯೋಗದ ದತ್ತಾಂಶ ಮತ್ತು ವರದಿಯನ್ನು ವಿಶ್ವ ಆರೋಗ್ಯ ಸಂಸ್ಥೆಗೆ ಸಲ್ಲಿಕೆ ಮಾಡಿದೆ.

ಕೊವ್ಯಾಕ್ಸಿನ್ ಪಡೆದ ವಿದ್ಯಾರ್ಥಿಗಳನ್ನು ಲಸಿಕೆ ಪಡೆಯದವರು ಎಂದು ವಿದೇಶಿ ವಿವಿಗಳು ಪರಿಗಣಿಸುತ್ತಿವೆ: ಕೇಂದ್ರಕ್ಕೆ ಎಬಿವಿಪಿ ಮಾಹಿತಿ
ಭಾರತದಲ್ಲಿ ಕೊವಾಕ್ಸಿನ್ ಲಸಿಕೆ ಹಾಕಿಸಿಕೊಂಡು ಹೋದ ವಿದ್ಯಾರ್ಥಿಗಳನ್ನು ವಿದೇಶಿ ವಿಶ್ವವಿದ್ಯಾಲಯಗಳು ಲಸಿಕೆ ಹಾಕಿಸಿಕೊಳ್ಳದವರು ಎಂದು ಪರಿಗಣಿಸುತ್ತಿವೆ ಎಂದು ಆರ್ ಎಸ್ ಎಸ್ ಅಂಗಸಂಸ್ಥೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಕೇಂದ್ರ ಆರೋಗ್ಯ ಸಚಿವ ಹರ್ಷ ವರ್ಧನ ಅವರಿಗೆ ಮನವಿ ಸಲ್ಲಿಸುವ ಮೂಲಕ ಗಮನ ಸೆಳೆದಿದೆ.

ಕೋವ್ಯಾಕ್ಸಿನ್ ಲಸಿಕೆಯಲ್ಲಿ ಕರುವಿನ ಸೆರಂ ಅಂಶಗಳಿಲ್ಲ: ಕೇಂದ್ರ ಸರ್ಕಾರ
ಭಾರತ್ ಬಯೋಟೆಕ್ ಸಂಸ್ಥೆಯ ಉತ್ಪಾದಿಸುತ್ತಿರುವ ಕೋವ್ಯಾಕ್ಸಿನ್ ಲಸಿಕೆಯಲ್ಲಿ ಕರುವಿನ ಸೆರಂ ಅಂಶಗಳಿಲ್ಲ.. ಈ ಕುರಿತ ಸುದ್ದಿಗಳು ಸತ್ಯಕ್ಕೆ ದೂರವಾದದ್ದು ಎಂದು ಕೇಂದ್ರ ಸರ್ಕಾರ ಹೇಳಿದೆ.

ಒಂದು ಡೋಸ್ ಗೆ ರೂ.150: ಈ ಬೆಲೆ ಸಮರ್ಥನೀಯವಲ್ಲ; ಕೋವ್ಯಾಕ್ಸಿನ್ ಸರಬರಾಜು ದರ ಕುರಿತು ಭಾರತ್ ಬಯೋಟೆಕ್!
ಖಾಸಗಿ ಆಸ್ಪತ್ರೆಗಳಲ್ಲಿ ಕೋವ್ಯಾಕ್ಸಿನ್ ಕೋವಿಡ್ ಲಸಿಕೆ ನೀಡಿಕೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಸೂಚಿಸಿರುವ ಸರಬರಾಜು ಬೆಲೆ ಕುರಿತಂತೆ ಅಸಮಾಧಾನ ವ್ಯಕ್ತಪಡಿಸಿರುವ ಭಾರತ್ ಬಯೋಟೆಕ್ ಸಂಸ್ಥೆ, 'ಸ್ಪರ್ಧಾತ್ಮಕವಲ್ಲದ, ದೀರ್ಘಾವಧಿಯಲ್ಲಿ ಸಮರ್ಥನೀಯವಲ್ಲದ್ದು' ಎಂದು ಹೇಳಿದೆ.

ಕೋವಿಡ್-19: 'ಕೋವ್ಯಾಕ್ಸಿನ್' ತುರ್ತು ಬಳಕೆಗೆ ಅಮೆರಿಕಾ ಎಫ್ ಡಿಎ ಅನುಮತಿ ನಿರಾಕರಣೆ!
ಅಮೆರಿಕದಲ್ಲಿ ತುರ್ತು ಬಳಕೆಗೆ ಅನುಮೋದನೆ ಪಡೆಯಲು ಪ್ರಯತ್ನಿಸುತ್ತಿರುವ ಭಾರತ್ ಬಯೋಟೆಕ್‌ನ ಕೋವ್ಯಾಕ್ಸಿನ್ ಲಸಿಕೆಗೆ ಹಿನ್ನಡೆಯುಂಟಾಗಿದೆ. ಅಮೆರಿಕಾದ ಎಫ್ಡಿಎ (ಆಹಾರ ಮತ್ತು ಔಷಧ ಆಡಳಿತ) ಕೋವ್ಯಾಕ್ಸಿನ್ ಲಸಿಕೆಯನ್ನು ತಿರಸ್ಕರಿಸಿದೆ.

44 ಕೋಟಿ ಕೋವಿಶೀಲ್ಡ್, ಕೋವ್ಯಾಕ್ಸಿನ್ ಲಸಿಕೆ ಡೋಸ್ ಕಾಯ್ದಿರಿಸಿದ ಕೇಂದ್ರ
ಪ್ರಧಾನಿ ನರೇಂದ್ರ ಮೋದಿ ಜೂ.21 ರಿಂದ ಹೊಸ ಲಸಿಕೆ ನೀತಿ ಜಾರಿಯನ್ನು ಪ್ರಕಟಿಸಿ, ಉಚಿತ ಲಸಿಕೆಯನ್ನು ಘೋಷಿಸಿದ ಬೆನ್ನಲ್ಲೇ ಕೇಂದ್ರ ಸರ್ಕಾರ ಜೂ.08 ರಂದು 44 ಕೋಟಿ ಲಸಿಕೆ ಡೋಸ್ ಗಳನ್ನು ಕಾಯ್ದಿರಿಸಿದೆ.

ಕೋವಿಶೀಲ್ಡ್ ಅಥವಾ ಕೋವ್ಯಾಕ್ಸಿನ್ ಯಾವುದು ಅತ್ಯುತ್ತಮವಾಗಿ ಪ್ರತಿಕಾಯ ಸೃಷ್ಟಿಸುತ್ತದೆ: ಇಲ್ಲಿದೆ ಅಧ್ಯಯನ ವರದಿ!
ಕೊರೋನಾ ವಿರುದ್ಧ ಕೋವಿಶೀಲ್ ಅಥವಾ ಕೋವ್ಯಾಕ್ಸಿನ್ ಯಾವುದು ಅತ್ಯುತ್ತಮ ಲಸಿಕೆ ಎಂಬ ಚರ್ಚೆಗಳು ನಡೆಯುತ್ತಾ ಬಂದಿದ್ದು ಇದೀಗ ಅಧ್ಯಯನವೊಂದು ಯಾವುದು ಅತೀ ಉತ್ತಮ ಎಂದು ಬಹಿರಂಗಪಡಿಸಿದೆ.

ಮಕ್ಕಳ ಮೇಲೆ ಕೊವಾಕ್ಸಿನ್ ಲಸಿಕೆ ಪ್ರಯೋಗ: ಪರೀಕ್ಷೆ ಆರಂಭಿಸಿದ ದೆಹಲಿಯ ಏಮ್ಸ್ ಸಂಸ್ಥೆ
ಭಾರತದ ಮೊದಲ ಸ್ವದೇಶಿ ಕೋವಿಡ್-19 ಲಸಿಕೆ ಕೊವಾಕ್ಸಿನ್ ನ್ನು 2 ರಿಂದ 18 ವರ್ಷದೊಳಗಿನ ಮಕ್ಕಳ ಮೇಲೆ ಪ್ರಾಯೋಗಿಕವಾಗಿ ಪರೀಕ್ಷೆ ಮಾಡಲಾಗುವುದು ಎಂದು ದೆಹಲಿಯ ಏಮ್ಸ್ ಸಂಸ್ಥೆ ತಿಳಿಸಿದೆ.

