COVAXIN

ದೇಶೀ ನಿರ್ಮಿತ ಕೋವ್ಯಾಕ್ಸಿನ್ ಲಸಿಕೆ 'ಡಬಲ್ ರೂಪಾಂತರಿ ಕೊರೋನಾ ವೈರಸ್' ಅನ್ನೂ ಕೂಡ ತಟಸ್ಥಗೊಳಿಸಬಲ್ಲದು: ಐಸಿಎಂಆರ್
ದೇಶೀ ನಿರ್ಮಿತ ಕೋವ್ಯಾಕ್ಸಿನ್ ಲಸಿಕೆ ದೇಶದಲ್ಲಿ ಉಲ್ಬಣವಾಗಿರುವ 'ಡಬಲ್ ರೂಪಾಂತರಿ ಕೊರೋನಾ ವೈರಸ್' ಅನ್ನೂ ಕೂಡ ತಟಸ್ಥಗೊಳಿಸಬಲ್ಲದು ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಹೇಳಿದೆ.

2021ರ ಸೆಪ್ಟೆಂಬರ್ ವೇಳೆಗೆ ಕೊವಾಕ್ಸಿನ್ ಉತ್ಪಾದನೆ 10 ಪಟ್ಟು ಹೆಚ್ಚಾಗುತ್ತದೆ: ಕೇಂದ್ರ ಸಚಿವ ಹರ್ಷವರ್ಧನ್
ಸೆಪ್ಟೆಂಬರ್ ವೇಳೆಗೆ ಕೋವಾಕ್ಸಿನ್ ಲಸಿಕೆ ಉತ್ಪಾದನೆಯಲ್ಲಿ 10 ಪಟ್ಟು ಹೆಚ್ಚಾಗಲಿದೆ. ಕೋವಿಡ್ 19 ವಿರುದ್ಧದ ಔಷಧ ರೆಮ್‌ಡೆಸಿವಿರ್ ತಯಾರಿಕೆಯನ್ನು ಮೇ ವೇಳೆಗೆ ಪ್ರತಿ ತಿಂಗಳಿಗೆ 74.1 ಲಕ್ಷಕ್ಕೆ ದ್ವಿಗುಣಗೊಳಿಸಲಾಗುತ್ತದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷ್ ವರ್ಧನ್ ಭಾನುವಾರ ಹೇಳಿದ್ದಾರೆ.

ಜೈಪುರ ಆಸ್ಪತ್ರೆಯಿಂದ 320 ಡೋಸ್ ಕೋವಾಕ್ಸಿನ್ ಲಸಿಕೆ ನಾಪತ್ತೆ: ಪೊಲೀಸ್ ಕೇಸ್ ದಾಖಲು
ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿರುವ 350 ಡೋಸ್ ಕೋವಾಕ್ಸಿನ್ ಲಸಿಕೆ ರಾಜಸ್ಥಾನದ ಜೈಪುರದಲ್ಲಿನ ಸರ್ಕಾರಿ ಆಸ್ಪತ್ರೆಯೊಂದರ ಕೋಲ್ಡ್ ಸ್ಟೋರೇಜ್ ನಿಂದ ನಾಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ.

ಕೋವಾಕ್ಸಿನ್: 13 ಸಾವಿರ ಸ್ವಯಂ ಸೇವಕರ ಮೇಲೆ ಲಸಿಕೆ ಪ್ರಯೋಗ, ಅರ್ಧ ದಾರಿ ದಾಟಿದ ಮೂರನೇ ಹಂತದ ಪ್ರಯೋಗ!
ಭಾರತ್ ಬಯೋಟೆಕ್ ಔಷಧೀಯ ಕಂಪನಿ ತಯಾರಿಸಿರುವ ಸ್ವದೇಶಿ ಕೋವಿಡ್-19 ಲಸಿಕೆ ಕೋವಾಕ್ಸಿನ್ ಕ್ಲಿನಿಕಲ್ ಪ್ರಯೋಗಕ್ಕಾಗಿ 26 ಸಾವಿರ ಸ್ವಯಂ ಸೇವಕರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಈ ಪೈಕಿ ಅರ್ಧದಷ್ಟು ಅಂದರೆ ಸುಮಾರು 13 ಸಾವಿರ ಸ್ವಯಂ ಸೇವಕರ ಮೇಲೆ ಈಗಾಗಲೇ ಯಶಸ್ವಿಯಾಗಿ ಲಸಿಕೆ ಪ್ರಯೋಗಿಸಲಾಗಿದೆ.

ಸಚಿವ ಅನಿಲ್ ವಿಜ್ ಲಸಿಕೆಯ ಎರಡನೇ ಡೋಸ್ ತೆಗೆದುಕೊಂಡಿರಲಿಲ್ಲ: ಭಾರತ ಬಯೋಟೆಕ್ ಸ್ಪಷ್ಟನೆ!
ಕೊರೋನಾ ಸೋಂಕಿಗೆ ತುತ್ತಾಗಿರುವ ಹರ್ಯಾಣ ಸಚಿವ ಅನಿಲ್ ವಿಜ್ ಕೊರೋನಾ ವೈರಸ್ ಲಸಿಕೆಯ 2ನೇ ಡೋಸ್ ಅನ್ನು ಪಡೆದಿರಲಿಲ್ಲ ಎಂದು ಕೋವ್ಯಾಕ್ಸಿನ್ ಲಸಿಕೆಯ ತಯಾರಿಕಾ ಸಂಸ್ಥೆ ಭಾರತ್ ಬಯೋಟೆಕ್ ಸ್ಪಷ್ಟನೆ ನೀಡಿದೆ.

ರೋಗ ನಿರೋಧಶಕ್ತಿ ವರ್ಧನೆಗೆ ಕೊವಾಕ್ಸಿನ್ ಜೊತೆಗೆ ವಿರೊವಾಕ್ಸ್ ಬಳಕೆ: ಭರತ್ ಬಯೋಟೆಕ್
ದೇಹದಲ್ಲಿ ಶಕ್ತಿವರ್ಧಕವನ್ನು ಹೆಚ್ಚಿಸಲು ಮತ್ತು ದೀರ್ಘಕಾಲದವರೆಗೆ ಆರೋಗ್ಯದಿಂದ ಕಾಪಾಡುವ ಶಕ್ತಿಯನ್ನು ಉಳಿಸಿಕೊಳ್ಳಲು ನೆರವಾಗುವ ಆಲ್ಹೈಡ್ರಾಕ್ಸಿಕ್ವಿಮ್- IIನ್ನು ಮಾನವ ಪ್ರಯೋಗಕ್ಕೆ ಬಳಸಿಕೊಳ್ಳಲಾಗುವುದು ಎಂದು ಕೊವಾಕ್ಸಿನ್ ಎಂಬ ಕೋವಿಡ್-19 ಲಸಿಕೆ ಅಭಿವೃದ್ಧಿಪಡಿಸುತ್ತಿರುವ ಹೈದರಾಬಾದ್ ಮೂಲದ ಭರತ್ ಬಯೋಟೆಕ್ ಫಾರ್ಮಕ್ಯುಟಿಕಲ್ ಸಂಸ್ಥೆ ತಿಳಿಸಿದೆ.

ಕೋವಾಕ್ಸಿ'ನ್ , ಪ್ರಾಣಿಗಳ ಮೇಲಿನ ಪ್ರಯೋಗದಲ್ಲಿ ರೋಗ ನಿರೋಧಕ ಶಕ್ತಿ ಪ್ರಬಲ- ಭಾರತ್ ಬಯೋಟೆಕ್
ಪ್ರಾಣಿಗಳ ಮೇಲಿನ ಕೋವಾಕ್ಸಿನ್ ಪ್ರಯೋಗ ಅಧ್ಯಯನದಲ್ಲಿ ಸಕಾರಾತ್ಮಕ ದಕ್ಷತೆ ಕಂಡುಬಂದಿದ್ದು, ರೋಗ ನಿರೋಧಕ ಶಕ್ತಿ ಪ್ರಬಲವಾಗಿರುವುದು ಕಂಡುಬಂದಿದೆ ಎಂದು ಭಾರತ್ ಬಯೋಟೆಕ್ ಔಷಧೀಯ ಕಂಪನಿ ಹೇಳಿದೆ.

ಕೋವಾಕ್ಸಿನ್ ಲಸಿಕೆ: ಎರಡನೇ ಹಂತದ ಮಾನವ ಪ್ರಯೋಗಕ್ಕೆ ಸಿದ್ಧತೆ
ಸ್ವದೇಶಿ ನಿರ್ಮಿತ ಕೋವಿಡ್-19 ಲಸಿಕೆ 'ಕೋವಾಕ್ಸಿನ್ ' ಮೇಲಿನ ಎರಡನೇ ಹಂತದ ಮಾನವ ಪ್ರಯೋಗಕ್ಕೆ ಇಲ್ಲಿನ ಆಸ್ಪತ್ರೆಯೊಂದರಲ್ಲಿ ಸಿದ್ಧತೆಗಳು ನಡೆಯುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆಗಸ್ಚ್ 15ರೊಳಗೆ ಭಾರತದ ಮೊಟ್ಟ ಮೊದಲ ಕೊರೋನಾ ವೈರಸ್ ಲಸಿಕೆ 'ಕೊವ್ಯಾಕ್ಸಿನ್' ಮಾನವ ಪ್ರಯೋಗ ಫಲಿತಾಂಶ ಪ್ರಕಟ
ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿರುವ 'ಕೋವಾಕ್ಸಿನ್' ಕ್ಲಿನಿಕಲ್ ಪ್ರಯೋಗಗಳಿಗೆ ತುರ್ತು ಅನುಮೋದನೆ ನೀಡುವಂತೆ ಐಸಿಎಂಆರ್ ದೇಶದ 12 ಪ್ರಮುಖ ಆಸ್ಪತ್ರೆಗಳಿಗೆ ಶುಕ್ರವಾರ ಸೂಚನೆ ನೀಡಿದೆ.

