ದೇಶೀ ನಿರ್ಮಿತ ಕೋವ್ಯಾಕ್ಸಿನ್ ಲಸಿಕೆ 'ಡಬಲ್ ರೂಪಾಂತರಿ ಕೊರೋನಾ ವೈರಸ್' ಅನ್ನೂ ಕೂಡ ತಟಸ್ಥಗೊಳಿಸಬಲ್ಲದು: ಐಸಿಎಂಆರ್
ದೇಶೀ ನಿರ್ಮಿತ ಕೋವ್ಯಾಕ್ಸಿನ್ ಲಸಿಕೆ ದೇಶದಲ್ಲಿ ಉಲ್ಬಣವಾಗಿರುವ 'ಡಬಲ್ ರೂಪಾಂತರಿ ಕೊರೋನಾ ವೈರಸ್' ಅನ್ನೂ ಕೂಡ ತಟಸ್ಥಗೊಳಿಸಬಲ್ಲದು ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಹೇಳಿದೆ.

ನವದೆಹಲಿ: ದೇಶೀ ನಿರ್ಮಿತ ಕೋವ್ಯಾಕ್ಸಿನ್ ಲಸಿಕೆ ದೇಶದಲ್ಲಿ ಉಲ್ಬಣವಾಗಿರುವ 'ಡಬಲ್ ರೂಪಾಂತರಿ ಕೊರೋನಾ ವೈರಸ್' ಅನ್ನೂ ಕೂಡ ತಟಸ್ಥಗೊಳಿಸಬಲ್ಲದು ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಹೇಳಿದೆ.
ಈ ಕುರಿತಂತೆ ಮಾಹಿತಿ ನೀಡಿರುವ ಐಸಿಎಂಆರ್, ಸ್ಥಳೀಯವಾಗಿ ಅಭಿವೃದ್ಧಿಪಡಿಸಿರುವ ಕೋವಿಡ್-19 ಲಸಿಕೆ, ಕೊವಾಕ್ಸಿನ್, SARS-CoV-2 ನ ಅನೇಕ ರೂಪಾಂತರಗಳನ್ನು ತಟಸ್ಥಗೊಳಿಸುತ್ತದೆ ಮತ್ತು 'ಡಬಲ್ ರೂಪಾಂತರಿ ವೈರಸ್' ನ ಒತ್ತಡದ ವಿರುದ್ಧ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಹೇಳಿದೆ.
ಭಾರತ್ ಬಯೋಟೆಕ್ ಸಂಸ್ಥೆ ಉತ್ಪಾದಿಸಿರುವ ಕೋವಾಕ್ಸಿನ್ ಭಾರತದಲ್ಲಿ ಮತ್ತು ವಿಶ್ವದಾದ್ಯಂತ ಹಲವಾರು ದೇಶಗಳಲ್ಲಿ ಕೋವಿಡ್-19 ಚಿಕಿತ್ಸೆಗಾಗಿ ತುರ್ತು ಬಳಕೆ ಅನುಮತಿ ಪಡೆಯಲಾಗಿದೆ.
ಈ ಕುರಿತಂತೆ ಟ್ವೀಟ್ ಮಾಡಿರುವ ಐಸಿಎಂಆರ್, 'ಐಸಿಎಂಆರ್ ಅಧ್ಯಯನವು ಎಸ್‌ಎಆರ್ಎಸ್-ಕೋವಿ -2 ವೈರಸ್ ನ ಅನೇಕ ರೂಪಾಂತರಗಳ ವಿರುದ್ಧ ಕೋವಾಕ್ಸಿನ್ ಲಸಿಕೆ ತಟಸ್ಥಗೊಳಿಸುತ್ತದೆ ಮತ್ತು ಡಬಲ್ ರೂಪಾಂತರಿತ ವೈರಸ್ ನ ಒತ್ತಡವನ್ನು ತಟಸ್ಥಗೊಳಿಸುತ್ತದೆ.
ಐಸಿಎಂಆರ್-ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ SARS-CoV-2 ವೈರಸ್‌ನ ಅನೇಕ ರೂಪಾಂತರಗಳನ್ನು ಯಶಸ್ವಿಯಾಗಿ ಪ್ರತ್ಯೇಕಿಸಿದೆ. ಈ ಪೈಕಿ B.1.1.7 (ಬ್ರಿಟನ್ ರೂಪಾಂತರಿ ವೈರಸ್), B.1.1.28 (ಬ್ರೆಜಿಲ್ ರೂಪಾಂತರಿ ವೈರಸ್) ಮತ್ತು B.1.351 (ದಕ್ಷಿಣ ಆಫ್ರಿಕಾ ರೂಪಾಂತರಿ ವೈರಸ್) ವೈರಸ್ ಗಳನ್ನು ಹೆಸರಿಸಲಾಗಿದೆ.
ಐಸಿಎಂಆರ್-ಎನ್ಐವಿ ಯುಕೆ ರೂಪಾಂತರ ಮತ್ತು ಬ್ರೆಜಿಲ್ ರೂಪಾಂತರಿ ವೈರಸ್ ನ ವಿರುದ್ಧ ಕೊವಾಕ್ಸಿನ್ ಲಸಿಕೆ ತಟಸ್ಥಗೊಳಿಸುವ ಸಾಮರ್ಥ್ಯವನ್ನು ಪ್ರದರ್ಶಿಸಿದೆ. ಐಸಿಎಂಆರ್-ಎನ್ಐವಿ ಇತ್ತೀಚೆಗೆ ಭಾರತದ ಕೆಲವು ಪ್ರದೇಶಗಳಲ್ಲಿ ಮತ್ತು ಇತರ ಹಲವಾರು ದೇಶಗಳಲ್ಲಿ ಗುರುತಿಸಲಾದ 'ಡಬಲ್ ರೂಪಾಂತರಿ ಕೊರೋನಾ ವೈರಸ್' ಬಿ.1.617 ಎಸ್ಎಆರ್ಎಸ್-ಕೋವಿ -2 ವೈರಸ್ ಅನ್ನು ಪ್ರತ್ಯೇಕಿಸುವಲ್ಲಿ ಯಶಸ್ವಿಯಾಗಿದೆ ಎಂದು ದೇಶದ ಉನ್ನತ ಆರೋಗ್ಯ ಸಂಶೋಧನಾ ಸಂಸ್ಥೆ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


