ಕೊವಾಕ್ಸಿನ್

ತುರ್ತು ಬಳಕೆ ಅನುಮೋದನೆ ತಿರಸ್ಕರಿಸಿದ ಬೆನ್ನಲ್ಲೇ ‘ಕೋವ್ಯಾಕ್ಸಿನ್’ ಆಮದು ರದ್ದುಪಡಿಸಿದ ಬ್ರೆಜಿಲ್
ಭಾರತ್ ಬಯೊಟೆಕ್‌ನ ಕೋವಿಡ್-19 ಲಸಿಕೆ ‘ಕೋವ್ಯಾಕ್ಸಿನ್’ಗೆ ತುರ್ತು ಬಳಕೆ ಅನುಮೋದನೆ ತಿರಸ್ಕರಿಸಿದ ಬೆನ್ನಲ್ಲೇ ಬ್ರೆಜಿಲ್ ಸರ್ಕಾರ ಲಸಿಕೆ ಆಮದನ್ನು ಕೂಡ ರದ್ದುಗೊಳಿಸಿದೆ,

ಮಕ್ಕಳ ಮೇಲೆ ಭಾರತ್ ಬಯೋಟೆಕ್ ನ ಕೊವಾಕ್ಸಿನ್ ಪ್ರಯೋಗ ಪ್ರಗತಿಯಲ್ಲಿ, ಸೆಪ್ಟೆಂಬರ್ ನಲ್ಲಿ ಫಲಿತಾಂಶ: ಏಮ್ಸ್ ನಿರ್ದೇಶಕ
ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಸಂಸ್ಥೆ ಕೊವಾಕ್ಸಿನ್ ಲಸಿಕೆಯ ಮಕ್ಕಳ ಮೇಲೆ ಪ್ರಾಯೋಗಿಕ ಪರೀಕ್ಷೆಯನ್ನು ನಡೆಸುತ್ತಿದ್ದು ಸೆಪ್ಟೆಂಬರ್ ವೇಳೆಗೆ ಫಲಿತಾಂಶ ಹೊರಬೀಳಲಿದೆ.

ಕೋವಿಡ್-19 ವಿರುದ್ಧ ಕೊವಾಕ್ಸಿನ್ ಲಸಿಕೆ ಶೇ 77.8ರಷ್ಟು ಪರಿಣಾಮಕಾರಿ: ಮೂರನೇ ಹಂತದ ಪ್ರಾಯೋಗಿಕ ಪರೀಕ್ಷೆ ಪೂರ್ಣ
ಕೋವಿಡ್-19 ಸಾಂಕ್ರಾಮಿಕ ವಿರುದ್ಧ ಹೋರಾಡಲು ನೀಡಲಾಗುತ್ತಿರುವ ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಕಂಪೆನಿಯ ಕೊವಾಕ್ಸಿನ್ ಲಸಿಕೆಯ ಮೂರನೇ ಹಂತದ ಪ್ರಾಯೋಗಿಕ ಪರೀಕ್ಷೆಯಲ್ಲಿ ಶೇಕಡಾ 77.8ರಷ್ಟು ಪರಿಣಾಮಕಾರಿ ಎಂದು ಕಂಡುಬಂದಿದೆ.

ಕೊವ್ಯಾಕ್ಸಿನ್ ಪಡೆದ ವಿದ್ಯಾರ್ಥಿಗಳನ್ನು ಲಸಿಕೆ ಪಡೆಯದವರು ಎಂದು ವಿದೇಶಿ ವಿವಿಗಳು ಪರಿಗಣಿಸುತ್ತಿವೆ: ಕೇಂದ್ರಕ್ಕೆ ಎಬಿವಿಪಿ ಮಾಹಿತಿ
ಭಾರತದಲ್ಲಿ ಕೊವಾಕ್ಸಿನ್ ಲಸಿಕೆ ಹಾಕಿಸಿಕೊಂಡು ಹೋದ ವಿದ್ಯಾರ್ಥಿಗಳನ್ನು ವಿದೇಶಿ ವಿಶ್ವವಿದ್ಯಾಲಯಗಳು ಲಸಿಕೆ ಹಾಕಿಸಿಕೊಳ್ಳದವರು ಎಂದು ಪರಿಗಣಿಸುತ್ತಿವೆ ಎಂದು ಆರ್ ಎಸ್ ಎಸ್ ಅಂಗಸಂಸ್ಥೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಕೇಂದ್ರ ಆರೋಗ್ಯ ಸಚಿವ ಹರ್ಷ ವರ್ಧನ ಅವರಿಗೆ ಮನವಿ ಸಲ್ಲಿಸುವ ಮೂಲಕ ಗಮನ ಸೆಳೆದಿದೆ.

ಮಕ್ಕಳ ಮೇಲೆ ಕೊವಾಕ್ಸಿನ್ ಲಸಿಕೆ ಪ್ರಯೋಗ: ಪರೀಕ್ಷೆ ಆರಂಭಿಸಿದ ದೆಹಲಿಯ ಏಮ್ಸ್ ಸಂಸ್ಥೆ
ಭಾರತದ ಮೊದಲ ಸ್ವದೇಶಿ ಕೋವಿಡ್-19 ಲಸಿಕೆ ಕೊವಾಕ್ಸಿನ್ ನ್ನು 2 ರಿಂದ 18 ವರ್ಷದೊಳಗಿನ ಮಕ್ಕಳ ಮೇಲೆ ಪ್ರಾಯೋಗಿಕವಾಗಿ ಪರೀಕ್ಷೆ ಮಾಡಲಾಗುವುದು ಎಂದು ದೆಹಲಿಯ ಏಮ್ಸ್ ಸಂಸ್ಥೆ ತಿಳಿಸಿದೆ.

2022 ಫೆಬ್ರವರಿಯಿಂದ 22.8 ಕೋಟಿ ಕೋವಾಕ್ಸಿನ್ ಡೋಸ್ ಗಳ ಉತ್ಪಾದನೆ ಆರಂಭ: ಹಾಫ್ಕಿನ್ ಬಯೋಫಾರ್ಮ
ಮುಂದಿನ ವರ್ಷ ಫೆಬ್ರವರಿಯಿಂದ ಮುಂಬೈ ಮೂಲದ ಹಾಫ್ಕಿನ್ ಬಯೋಫಾರ್ಮ ಕೋವಾಕ್ಸಿನ್ ಉತ್ಪಾದನೆ ಆರಂಭಿಸಲಿದೆ. ಕೇಂದ್ರ ಸರ್ಕಾರದ ಆಶಯದಂತೆ ಈ ವರ್ಷ ಆಗಸ್ಟ್ ನಿಂದ ಡಿಸೆಂಬರ್ ತಿಂಗಳ ಮಧ್ಯೆ ಸಂಸ್ಥೆಗೆ ಸುಮಾರು 55 ಕೋಟಿ ಕೋವಾಕ್ಸಿನ್ ಡೋಸ್ ನ್ನು ವಿತರಣೆ ಮಾಡಲು ಸಾಧ್ಯವಾಗಲಿಕ್ಕಿಲ್ಲ ಎಂದು ಹೇಳಲಾಗುತ್ತಿದೆ.

ಆಗಸ್ಟ್ ವೇಳೆಗೆ ಸೆರಂ ಇನ್ಸ್ಟಿಟ್ಯೂಟ್ ನಿಂದ 10 ಕೋಟಿ ಡೋಸ್, ಭಾರತ್ ಬಯೋಟೆಕ್ ನಿಂದ 7.8 ಕೋಟಿ ಡೋಸ್ ಕೋವಿಡ್ ಲಸಿಕೆ ಉತ್ಪಾದನೆ!
ಹಲವು ರಾಜ್ಯಗಳಲ್ಲಿ ಕೋವಿಡ್ ಲಸಿಕೆಗಳಿಗೆ ಕೊರತೆಯುಂಟಾಗಿದೆ, ಈ ಹೊತ್ತಿನಲ್ಲಿ ದೇಶದ ಲಸಿಕೆ ತಯಾರಿಕಾ ಸಂಸ್ಥೆಗಳಾದ ಸೆರಂ ಇನ್ಸ್ ಟಿಟ್ಯೂಟ್ ಮತ್ತು ಭಾರತ್ ಬಯೋಟೆಕ್ ಕೇಂದ್ರ ಸರ್ಕಾರಕ್ಕೆ ಮುಂದಿನ ನಾಲ್ಕು ತಿಂಗಳ ಉತ್ಪಾದನೆ ಯೋಜನೆಯನ್ನು ಸಲ್ಲಿಸಿವೆ.

ಮಕ್ಕಳ ಮೇಲೆ ಕೋವ್ಯಾಕ್ಸಿನ್ ಲಸಿಕೆ 2, 3ನೇ ಹಂತದ ಕ್ಲಿನಿಕಲ್ ಟ್ರಯಲ್ಸ್ ಗೆ ತಜ್ಞರ ಸಮಿತಿ ಶಿಫಾರಸು
2 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಭಾರತ್ ಬಯೋಟೆಕ್ ನ ಕೋವ್ಯಾಕ್ಸಿನ್ ಲಸಿಕೆ ಬಳಕೆ ಕುರಿತ 2 ಮತ್ತು 3ನೇ ಹಂತದ ಪ್ರಯೋಗಕ್ಕೆ ತಜ್ಞರ ಸಮಿತಿ ಅನುಮೋದನೆ ನೀಡಿದೆ.

ದೇಶೀ ನಿರ್ಮಿತ ಕೋವ್ಯಾಕ್ಸಿನ್ ಲಸಿಕೆ 'ಡಬಲ್ ರೂಪಾಂತರಿ ಕೊರೋನಾ ವೈರಸ್' ಅನ್ನೂ ಕೂಡ ತಟಸ್ಥಗೊಳಿಸಬಲ್ಲದು: ಐಸಿಎಂಆರ್
ದೇಶೀ ನಿರ್ಮಿತ ಕೋವ್ಯಾಕ್ಸಿನ್ ಲಸಿಕೆ ದೇಶದಲ್ಲಿ ಉಲ್ಬಣವಾಗಿರುವ 'ಡಬಲ್ ರೂಪಾಂತರಿ ಕೊರೋನಾ ವೈರಸ್' ಅನ್ನೂ ಕೂಡ ತಟಸ್ಥಗೊಳಿಸಬಲ್ಲದು ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಹೇಳಿದೆ.

