coronavirus

ಕೊರೋನಾ ವೈರಸ್: ನಿಷೇಧ ತೆರವುಗೊಳಿಸಿ ಚೀನಾಗೆ ವೈದ್ಯಕೀಯ ನೆರವು ನೀಡಲು ಮುಂದಾದ ಭಾರತ
ಚೀನಾದಲ್ಲಿ ಮರಣ ಮೃದಂಗ ಬಾರಿಸುತ್ತಿರುವ ಕೊರೋನಾ ವೈರಸ್ ನಿಂದ ಇದುವರೆಗೆ 910 ಮಂದಿ ಮೃತಪಟ್ಟಿದ್ದು, ಸೋಂಕಿಗೆ ಒಳಗಾದವರ ಸಂಖ್ಯೆ 40,171 ಕ್ಕೆ ತಲುಪಿದೆ.

ಕೊರೋನಾ ಶಂಕೆ: ಉಡುಪಿಯಲ್ಲಿ ಪರೀಕ್ಷೆಗೊಳಪಟ್ಟ ಮೂವರಲ್ಲೂ ಪತ್ತೆಯಾಗಿಲ್ಲ ವೈರಸ್
ಕೆಲ ದಿನಗಳ ಹಿಂದಷ್ಟೇ ಚೀನಾದಿಂದ ಉಡುಪಿಗೆ ವಾಪಸ್ಸಾಗಿದ್ದ ಮೂವರು ವ್ಯಕ್ತಿಗಳಲ್ಲಿ ಶಂಕಿಸಲಾಗಿದ್ದ ಕೊರೋನಾ ವೈರಸ್, ಪರೀಕ್ಷೆ ಬಳಿಕ ಇದೀಗ ಮೂವಲರಲ್ಲೂ ವೈರಸ್ ಪತ್ತೆಯಾಗಿಲ್ಲ ಎಂದು ವರದಿಗಳು ತಿಳಿಸಿವೆ.

ಕೊರೋನಾ ವೈರಸ್: ವರದಿ ಮಾಡುತ್ತಿದ್ದ ಚೀನಿ ಪತ್ರಕರ್ತ ನಾಪತ್ತೆ, ರೊಚ್ಚಿಗೆದ್ದ ಜನತೆ
ಕೊರೋನಾ ವೈರಸ್ ಪೀಡಿತ ಚೀನಾದ ಹುಬೈ ಪ್ರಾಂತ್ಯದಲ್ಲಿ ವರದಿ ಮಾಡುತ್ತಿದ್ದ ಚೀನೀ ಪತ್ರಕರ್ತ ಚೆನ್ ಕ್ಯುಶಿ ನಿಗೂಢ ರೀತಿಯಲ್ಲಿ ಕಣ್ಮರೆಯಾಗಿದ್ದಾರೆ ಎಂದು ತಿಳಿದುಬಂದಿದೆ.

ಕೊರೋನಾವೈರಸ್ ಸೋಂಕು: ಚೀನಾದಲ್ಲಿ ಸಾವಿನ ಸಂಖ್ಯೆ 910ಕ್ಕೇರಿಕೆ: 40,000 ಪ್ರಕರಣ ಪತ್ತೆ
ಮಾರಕ ಕೊರೋನಾ ವೈರಸ್ ನಿಂದಾಗಿ ಚೀನಾದಲ್ಲಿ ಸಾವನ್ನಪ್ಪಿದವರ ಸಂಖ್ಯೆ 910ಕ್ಕೆ ಏರಿಕೆಯಾಗಿದ್ದು, ಸೋಂಕು ಪೀಡಿತರ ಸಂಖ್ಯೆ ಕೂಡ 40 ಸಾವಿರ ಗಡಿದಾಟಿದೆ.

ಭಾರತೀಯರಿರುವ ಹಡಗಿಗೆ ಶೀಘ್ರಲ್ಲೇ ತನ್ನ ಸೇನೆ ರವಾನಿಸಲಿರುವ ಜಪಾನ್?
ಜಪಾನ್ ರಾಷ್ಟ್ರದ ಯೋಕೋಹಾಮಾ ಬಂದರಿನಲ್ಲಿ ಕೊರೋನಾ ತಪಾಸಣೆಗಾಗಿ ನಿಂತಿರುವ ಡೈಮಂಡ್ ಪ್ರಿನ್ಸೆಸ್ ಪ್ರವಾಸಿ ಹಡಗಿಗೆ ಜಪಾನ್ ಸರ್ಕಾರವು ತನ್ನ ಸೇನೆ ರವಾನಿಸುವ ಸಾಧ್ಯತೆಗಳಿವೆ. ಹಡಗಿನಲ್ಲಿ 3700 ಮಂದಿ ಇದ್ದು, ಇವರಲ್ಲಿ 138 ಭಾರತೀಯರಿದ್ದಾರೆ.

ಚೀನಾದಲ್ಲಿ ಕೊರೋನಾ ವೈರಸ್: ಸಾರ್ಸ್ ಸಾಂಕ್ರಾಮಿಕ ರೋಗವನ್ನು ಮೀರಿದ ಸಾವಿನ ಸಂಖ್ಯೆ,ಹೊಸ ಪ್ರಕರಣಗಳಲ್ಲಿ ಇಳಿಕೆ
ಚೀನಾದಲ್ಲಿ ಕೊರೋನಾ ವೈರಸ್ ನಿಂದ ಮೃತಪಟ್ಟವರ ಸಂಖ್ಯೆ ಭಾನುವಾರ 89 ರಿಂದ 811 ಕ್ಕೆ ಏರಿಕೆಯಾಗಿದೆ. ಇದು 2002-2003ರ ಸಾರ್ಸ್ ಸಾಂಕ್ರಾಮಿಕ ರೋಗದಲ್ಲಿ ಮರಣಪಟ್ಟವರ ಸಂಖ್ಯೆಯನ್ನು ಮೀರಿಸಿದೆ.

ಚೀನಾ ಅಧ್ಯಕ್ಷರಿಗೆ ಪ್ರಧಾನಿ ಮೋದಿ ಪತ್ರ: ಕರೋನಾ ವೈರಸ್ ಎದುರಿಸಲು ನೆರವಿನ ಹಸ್ತ
ಪ್ರಧಾನಿ ನರೇಂದ್ರ ಮೋದಿ ಚೀನಾ ಅಧ್ಯಕ್ಷ ಕ್ಸೀ ಜಿನ್ ಪಿಂಗ್ ಗೆ ಪತ್ರ ಬರೆದಿದ್ದು, ಕರೋನಾ ವೈರಸ್ ವಿರುದ್ಧದ ಹೋರಾಟಕ್ಕೆ ನೆರವಿನ ಹಸ್ತ ನೀಡುವುದಾಗಿ ಹೇಳಿದ್ದಾರೆ.

ಕೊರೋನಾವೈರಸ್ ಭೀತಿ: ಡ್ರಂಕ್ ಆ್ಯಂಡ್ ಡ್ರೈವ್ ತಪಾಸಣೆ ಸ್ಥಗಿತ
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಡ್ರಂಕ್ ಆ್ಯಂಡ್ ಡ್ರೈವ್ ತಪಾಸಣೆ ಮಾಡುವುದನ್ನು ತಾತ್ಕಾಲಿಕ ಸ್ಥಗಿತಗೊಳಿಸಲಾಗಿದೆ.

ಕೊರೋನಾ ಭೀತಿ: ಹಡಗಿನಲ್ಲಿ ಸಿಲುಕಿರುವ ಕಾರವಾರ ಯುವಕ, ಮನೆಗೆ ಮರಳಲು ಬೇಕಿದೆ ಸಹಾಯ ಹಸ್ತ
ಜಪಾನ್‌ನ ಕರಾವಳಿಯಲ್ಲಿ ಸಿಲುಕಿರುವ ಕ್ರೂಸ್ ಲೈನರ್ ಡೈಮಂಡ್ ಪ್ರಿನ್ಸೆಸ್‌ನಲ್ಲಿ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿರುವ ಕಾರವಾರದ ಯುವಕನೊಬ್ಬ ಭಾರತಕ್ಕೆ ಮರಳಲು ಕಾತುರನಾಗಿದ್ದು ಇದಕ್ಕಾಗಿ ಭಾರತ ಸರ್ಕಾರದ ಸಹಾಯಹಸ್ತದ ನಿರೀಕ್ಷೆಯಲ್ಲಿದ್ದಾನೆ. ಈ ಕ್ರೂಸರ್ ಸಿಂಗಾಪುರಕ್ಕೆ ತೆರಳಬೇಕಿದ್ದದ್ದು ಚಿನಾಗೆ ಹಿಂತಿರುಗಲು ತಯಾರಾಗಿದೆ.

