coronavirus

ಕೊರೋನಾವೈರಸ್ ಭೀತಿ: ಸಾವಿನ ಸಂಖ್ಯೆ 1,355ಕ್ಕೆ ಏರಿಕೆ
ಚೀನಾ ರಾಷ್ಚ್ರದಲ್ಲಿ ಮರಣ ಮೃದಂಗವನ್ನು ಮತ್ತಷ್ಟು ಹೆಚ್ಚಿಸಿರುವ ಮಹಾಮಾರಿ ಕೊರೋನಾ ವೈರಸ್, 1,355 ಮಂದಿಯನ್ನು ಬಲಿಪಡೆದುಕೊಂಡಿದೆ.

ಕೊರೋನಾವೈರಸ್ ಭೀತಿ: ಜಪಾನ್ ಹಡಗಿನಲ್ಲಿದ್ದ ಇಬ್ಬರು ಭಾರತೀಯರಲ್ಲಿ ಸೋಂಕು ಪತ್ತೆ
ಓರ್ವ ಕನ್ನಡಿಗ ಸೇರಿ 138 ಭಾರತೀಯರು ಹಾಗೂ 3700 ಪ್ರವಾಸಿಗರು ಇರುವ ಜಪಾನ್'ನ ಡೈಮಂಡ್ ಪ್ರಿನ್ಸೆಸ್ ಹಡಗಿನಲ್ಲಿ ಮತ್ತೆ 39 ಜನರಿಗೆ ಕೊರೋನಾ ಸೋಂಕು ತಗುಲಿದೆ. ಈ ಪೈಕಿ ಇಬ್ಬರು ಭಾರತೀಯರಿಗೂ ಸೋಂಕು ತಗುಲಿದೆ ಎಂದು ವರದಿಗಳು ತಿಳಿಸಿವೆ. ಇದರೊಂದಿಗೆ ಹಡಗಿನಲ್ಲಿ ಸೋಂಕು ಪೀಡಿತರ ಸಂಖ್ಯೆ 174ಕ್ಕೆ ಏರಿಕೆಯಾಗಿದೆ.

ಜಪಾನ್: ಹಡಗಿನಲ್ಲಿದ್ದ ಇಬ್ಬರು ಭಾರತೀಯರಿಗೆ ಕರೋನ ವೈರಸ್ ಸೋಂಕು
ಜಪಾನ್ ನಲ್ಲಿ ಕ್ರೂಸ್ ಹಡಗಿನಲ್ಲಿರುವ ಇಬ್ಬರು ಭಾರತೀಯರಿಗೆ ಕರೋನ ವೈರಸ್ ಸೋಂಕು ತಗುಲಿದೆ.

ಆಂಧ್ರ ಪ್ರದೇಶ: ಕೊರೋನಾ ವೈರಸ್ ಇದೆಯೆಂದು ತಿಳಿದು ಊರನ್ನು ರಕ್ಷಿಸಲು ವ್ಯಕ್ತಿ ಆತ್ಮಹತ್ಯೆ
ತನಗೆ ಕೊರೊನಾ ವೈರಸ್ ಬಂದಿದೆ ಎಂದು ತಿಳಿದು ವ್ಯಕ್ತಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಆಂಧ್ರಪ್ರದೇಶದ ಚಿತ್ತೂರಿನಲ್ಲಿ ನಡೆದಿದೆ.

ಕೊರೋನಾವೈರಸ್ ಗುಣಪಡಿಸಲು ಯಾವುದೇ ಹೋಮಿಯೋಪತಿ ಔಷಧಿ ಬಂದಿಲ್ಲ: ಆರೋಗ್ಯ ಇಲಾಖೆ ಸ್ಪಷ್ಟನೆ
ರಾಜ್ಯದಲ್ಲಿ ಕೊರೋನಾ ವೈರಸ್ ಸೋಂಕು ಹರಡದಂತೆ ಎಲ್ಲ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಮಹಾಮಾರಿ ಕೊರೋನಾವೈರಸ್ ಹೊಸ ಹೆಸರು ಕೋವಿಡ್-19
ಚೀನಾದಲ್ಲಿ ಮರಣ ಮೃದಂಗ ಮುಂದುವರೆಸಿರುವ ಮಹಾಮಾರಿ ಕೊರೋನಾ ವೈರಸ್'ಗೆ ಕೋವಿಡ್-19 ಎಂದು ವಿಶ್ವ ಆರೋಗ್ಯ ಸಂಸ್ಥೆ ನಾಮಕರಣ ಮಾಡಿದೆ.

ಕೊರೋನಾ ವೈರಸ್: ಯುಎಇಯಲ್ಲಿ ಭಾರತೀಯರೊಬ್ಬರಲ್ಲಿ ಕಂಡು ಬಂದ ಸೋಂಕು
ಯುಎಇನಲ್ಲಿರುವ ಭಾರತೀಯರೊಬ್ಬರಲ್ಲಿ ಮಾರಕ ಕೊರೋನಾ ವೈರಸ್ ಸೋಂಕು ಇರುವುದು ಪತ್ತೆಯಾಗಿದೆ ಎಂದು ವರದಿಗಳಿಂದ ತಿಳಿದುಬಂದಿದೆ.

ಕೊರೋನಾ ವೈರಸ್ ಭೀತಿ: ಮಾಂಸಾಹಾರ ಸೇವನೆಗೆ ಜನರ ಹಿಂದೇಟು, ಚಿಕನ್ ಮಾರಾಟದಲ್ಲಿ ಭಾರೀ ಇಳಿಕೆ
ಕೊರೋನಾ ವೈರಸ್ ಭೀತಿ ಬೆಂಗಳೂರು ನಗರಕ್ಕೂ ವ್ಯಾಪಿಸಿದ್ದು, ಕೋಳಿಗಳಿಗೆ ಕೊರೋನಾ ವೈರಸ್ ಸೋಂಕು ತಗುಲಿರುವ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಗಳು ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ನಗರ ಜನತೆ ಇದೀಗ ಮಾಂಸಾಹಾರ ಸೇವನೆಗೆ ತಿಂದೇಟು ಹಾಕುತ್ತಿದ್ದಾರೆ. ಪರಿಣಾಮ ಚಿಕನ್ ಮಾರಾಟದಲ್ಲಿ ಭಾರಿ ಇಳಿಕೆ ಕಂಡು ಬಂದಿದೆ ಎಂದು ಹೇಳಲಾಗುತ್ತಿದೆ.

ಚೀನಾದಲ್ಲಿ ಅತ್ಯಂತ ಗಂಭೀರಗೊಂಡ ಕೊರೋನಾ ವೈರಸ್ ಹಾವಳಿ: ನಿತ್ಯ ಸಾವನ್ನಪ್ಪಿತ್ತಿರುವವರ ಸಂಖ್ಯೆ 100ಕ್ಕೆ ಏರಿಕೆ
ವಿಶ್ವದಾದ್ಯಂತ ಭೀತಿ ಹುಟ್ಟಿಸಿರುವ ಕೊರೋನಾ ವೈರಸ್ ಮೇಲ್ನೋಟಕ್ಕೆ ಕಾಣುತ್ತಿರುವುದಕ್ಕೆ ಗಂಭೀರವಾಗಿದೆ. ಈ ವೈರಾಣು ಪ್ರವೇಶದ ಸಂಭಾವ್ಯತೆ ಎದುರಿಸಲು ಎಲ್ಲಾ ದೇಶಗಳೂ ಸಜ್ಜಾರಿಗಬೇಕು. ಏಕೆಂದರೆ ಚೀನಾಕ್ಕೆ ಪ್ರಯಾಣ ಮಾಡಿಲ್ಲದವರಲ್ಲೂ ಈ ವೈರಸ್ ಕಂಡುಬಂದಿರುವ ಕಳವಳಕಾರಿ ನಿದರ್ಶನಗಳು ಪತ್ತೆಯಾಗಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ.

