ವಿದೇಶ

ಜಪಾನ್: ಹಡಗಿನಲ್ಲಿದ್ದ ಇಬ್ಬರು ಭಾರತೀಯರಿಗೆ ಕರೋನ ವೈರಸ್ ಸೋಂಕು 

ಜಪಾನ್ ನಲ್ಲಿ ಕ್ರೂಸ್ ಹಡಗಿನಲ್ಲಿರುವ ಇಬ್ಬರು ಭಾರತೀಯರಿಗೆ ಕರೋನ ವೈರಸ್ ಸೋಂಕು ತಗುಲಿದೆ.

ಜಪಾನ್: ಹಡಗಿನಲ್ಲಿದ್ದ ಇಬ್ಬರು ಭಾರತೀಯರಿಗೆ ಕರೋನ ವೈರಸ್ ಸೋಂಕು 
ಜಪಾನ್: ಹಡಗಿನಲ್ಲಿದ್ದ ಇಬ್ಬರು ಭಾರತೀಯರಿಗೆ ಕರೋನ ವೈರಸ್ ಸೋಂಕು
Published On :

ನವದೆಹಲಿ: ಜಪಾನ್ ನಲ್ಲಿ ಕ್ರೂಸ್ ಹಡಗಿನಲ್ಲಿರುವ ಇಬ್ಬರು ಭಾರತೀಯರಿಗೆ ಕರೋನ ವೈರಸ್ ಸೋಂಕು ತಗುಲಿದೆ. 

ಜಪಾನ್ ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಅಧಿಕಾರಿಗಳು ಈ ಮಾಹಿತಿಯನ್ನು ಖಚಿತಪಡಿಸಿದ್ದಾರೆ. ಹಡಗಿನಲ್ಲಿರುವ 3,711 ಜನರ ಪೈಕಿ 174 ಜನರಿಗೆ ಕರೋನ ವೈರಸ್ ಸೋಂಕು ಪತ್ತೆಯಾಗಿದೆ. 

ಕ್ರೂಸ್ ಶಿಪ್ ಡೈಮಂಡ್ ಕಳೆದ ವಾರ ಜಪಾನ್ ಗೆ ಬಂದಿಳಿದಿತ್ತು ಆಡರೆ ಓರ್ವ ವ್ಯಕ್ತಿಗೆ ಕರೋನಾ ವೈರಾಣು ಸೋಂಕು ತಗುಲಿದ್ದು ಪತ್ತೆಯಾಗಿದ್ದರಿಂದ ಹಡಗಿಗೆ ನಿರ್ಬಂಧ ವಿಧಿಸಲಾಗಿತ್ತು. 

ಈ ಹಡಗಿನಲ್ಲಿ ಸಿಬ್ಬಂದಿಗಳು ಹಾಗೂ ಪ್ರಯಾಣಿಕರೂ ಸೇರಿ 138 ಭಾರತೀಯರು ಇದ್ದರು. ಈ ಹಿನ್ನೆಲೆಯಲ್ಲಿ ಫೆ.19 ರ ವರೆಗೂ ಹಡಗಿಗೆ ನಿರ್ಬಂಧ ವಿಧಿಸಲಾಗಿದೆ. ವೈರಾಣು ಸೋಂಕು ಪೀಡಿತರನ್ನು ಹೆಚ್ಚಿಕ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.