ದೇಶ

ಚೀನಾ ಅಧ್ಯಕ್ಷರಿಗೆ ಪ್ರಧಾನಿ ಮೋದಿ ಪತ್ರ: ಕರೋನಾ ವೈರಸ್ ಎದುರಿಸಲು ನೆರವಿನ ಹಸ್ತ 

ಪ್ರಧಾನಿ ನರೇಂದ್ರ ಮೋದಿ ಚೀನಾ ಅಧ್ಯಕ್ಷ ಕ್ಸೀ ಜಿನ್ ಪಿಂಗ್ ಗೆ ಪತ್ರ ಬರೆದಿದ್ದು, ಕರೋನಾ ವೈರಸ್ ವಿರುದ್ಧದ ಹೋರಾಟಕ್ಕೆ ನೆರವಿನ ಹಸ್ತ ನೀಡುವುದಾಗಿ ಹೇಳಿದ್ದಾರೆ.

ಚೀನಾ ಅಧ್ಯಕ್ಷರಿಗೆ ಪ್ರಧಾನಿ ಮೋದಿ ಪತ್ರ: ಕರೋನಾ ವೈರಸ್ ಎದುರಿಸಲು ನೆರವಿನ ಹಸ್ತ 
ಚೀನಾ ಅಧ್ಯಕ್ಷರಿಗೆ ಪ್ರಧಾನಿ ಮೋದಿ ಪತ್ರ: ಕರೋನಾ ವೈರಸ್ ಎದುರಿಸಲು ನೆರವಿನ ಹಸ್ತ
Published On :

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಚೀನಾ ಅಧ್ಯಕ್ಷ ಕ್ಸೀ ಜಿನ್ ಪಿಂಗ್ ಗೆ ಪತ್ರ ಬರೆದಿದ್ದು, ಕರೋನಾ ವೈರಸ್ ವಿರುದ್ಧದ ಹೋರಾಟಕ್ಕೆ ನೆರವಿನ ಹಸ್ತ ನೀಡುವುದಾಗಿ ಹೇಳಿದ್ದಾರೆ. 

ಕರೋನಾ ವೈರಸ್ ನಿಂದ ಉಂಟಾಗಿರುವ ಜೀವಹಾನಿಗೆ ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದು, ಸಂಕಷ್ಟದ ಸಮಯದಲ್ಲಿ ಚೀನಾ ಜನತೆ ಹಾಗೂ ಅಧ್ಯಕ್ಷರೊಂದಿಗೆ ಇರುವುದಾಗಿ ಮೋದಿ ತಿಳಿಸಿದ್ದಾರೆ. 

ಚೀನಾದಲ್ಲಿ 2003 ರಲ್ಲಿ ಉಂಟಾಗಿದ್ದ ಸಾರ್ಸ್ ಮಹಾಮಾರಿಯನ್ನೂ ಮೀರಿಸಿರುವ ಕರೋನಾ ವೈರಸ್ 810 ಜನರನ್ನು ಬಲಿ ಪಡೆದಿದೆ.

ಹುಬೈ ಪ್ರಾಂತ್ಯದಲ್ಲಿದ್ದ ಭಾರತೀಯ ನಾಗರಿಕರನ್ನು ವಾಪಸ್ ಕಳಿಸಿಕೊಡುವುದಕ್ಕೆ ಚೀನಾ ಸರ್ಕಾರ ಸ್ಪಂದಿಸಿ, ಸೌಲಭ್ಯ ಒದಗಿಸಿದ್ದಕ್ಕೆ ಪ್ರಧಾನಿ ಮೋದಿ ಪತ್ರದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.