coronavirus

ಚೀನಾ ಆಯ್ತು, ಈಗ ಕೊರಿಯಾದಲ್ಲೂ ಮರಣ ಮೃದಂಗ ಆರಂಭಿಸಿದ ಕೊರೋನಾ; 7 ಸಾವು, 760 ಕ್ಕೂ ಹೆಚ್ಚು ಮಂದಿಗೆ ಸೋಂಕು!
ಚೀನಾದಲ್ಲಿ ಎರಡೂವರೆ ಸಾವಿರಕ್ಕೂ ಅಧಿಕ ಮಂದಿಯ ಬಲಿ ಪಡೆದ ಮಾರಣಾಂತಿಕ ಕೊರೋನಾ ವೈರಸ್ ಇದೀಗ ದಕ್ಷಿಣ ಕೊರಿಯಾಗೂ ಕಾಲಿಟ್ಟಿದೆ.

ಮುಂದುವರೆದ ಕೊರೋನಾ ಮರಣ ಮೃದಂಗ: ಒಂದೇ ದಿನ 150 ಸಾವು, ಸಾವಿನ ಸಂಖ್ಯೆ 2, 592ಕ್ಕೆ ಏರಿಕೆ!
ಚೀನಾದಲ್ಲಿ ಕೊರೋನಾ ವೈರಸ್ ಮರಣ ಮೃದಂಗ ಮುಂದುವರೆದಿದ್ದು, ಕೇವಲ 24 ಗಂಟೆಗಳ ಅವಧಿಯಲ್ಲಿ ಬರೊಬ್ಬರಿ 150 ಮಂದಿ ಸೋಂಕು ಪೀಡಿತರು ಸಾವನ್ನಪ್ಪುವ ಮೂಲಕ ಸಾವಿನ ಸಂಖ್ಯೆ 2, 592ಕ್ಕೆ ಏರಿಕೆಯಾಗಿದೆ ಎಂದು ತಿಳಿದುಬಂದಿದೆ.

ಕೋರೋನಾವೈರಸ್: ಜಪಾನ್ ಹಡಗಿನಲ್ಲಿ 4 ಭಾರತೀಯರಲ್ಲಿ ಸೋಂಕು ಪತ್ತೆ, ಸೋಂಕಿತ ಭಾರತೀಯರ ಸಂಖ್ಯೆ 12ಕ್ಕೆ ಏರಿಕೆ
ಕಾರವಾರ ಮೂಲಕ ಅಭಿಷೇಕ್ ಸೇರಿದಂತೆ ಒಟ್ಟು 138 ಭಾರತೀಯರು ಇರುವ ಡೈಮಂಡ್ ಪ್ರಿನ್ಸೆಸ್ ರಡಗಿನಲ್ಲಿ ಮತ್ತೆ ನಾಲ್ವರು ಭಾರತೀಯ ಸಿಬ್ಬಂದಿಗೆ ಕೊರೋನಾ ವೈರಸ್ ಸೋಂಕು ತಗುಲಿರುವುದಾಗಿ ವರದಿಗಳು ತಿಳಿಸಿವೆ. ಈ ಮೂಲಕ ಹಡಗಿನಲ್ಲಿ ಒಟ್ಟು 12 ಮಂದಿ ಭಾರತೀಯರಲ್ಲಿ ವೈರಸ್ ಹಬ್ಬಿದಂತಾಗಿದೆ.

ಡೈಮಂಡ್ ಪ್ರಿನ್ಸೆಸ್ ಹಡಗಿನಲ್ಲಿರುವ ಇನ್ನೂ ನಾಲ್ವರಿಗೆ ಮಾರಕ ಕೊರೋನಾ ಸೋಂಕು ದೃಢ: ರಾಯಭಾರ ಕಚೇರಿ
ಜಪಾನ್ ಕರಾವಳಿಯಲ್ಲಿ ನಿರ್ಬಂಧಿಸಲ್ಪಟ್ಟಿರುವ ಕ್ರೂಸ್ ಹಡಗಿನಲ್ಲಿರುವ ಇನ್ನೂ ನಾಲ್ವರು ಭಾರತೀಯ ಸಿಬ್ಬಂದಿಗಳಿಗೆ ಮಾರಕ ಕೊರೋನಾವೈರಸ್ ಇರುವುದು ಸಾಬೀತಾಗಿದೆ. ಅವರುಗಳಿಗೆ ನಡೆಸಲಾಗಿದ್ದ ವೈದ್ಯಕೀಯ ಪರೀಕ್ಷೆಗಳಲ್ಲಿ ಕೊರೋನಾವೈರಸ್ ಪಾಸಿಟಿವ್ ಎಂದು ವರದಿ ಬಂದಿದೆ. ಇದರೊಡನೆ ಹಡಗಿನಲ್ಲಿ ವೈರಸ್ ಸೋಂಕಿಗೆ ಒಳಗಾದ ಒಟ್ಟು ಭಾರತೀಯರ ಸಂಖ್ಯೆ 12 ತಲುಪಿದೆ ಎಂದು ಭಾರತೀಯ ರಾಯ

ಜಾಗತಿಕ ಪಿಡುಗಾಗಿ ಪರಿಣಮಿಸುತ್ತಿರುವ ಕೊರೋನಾ: ದಕ್ಷಿಣ ಕೊರಿಯಾ, ಇಟಲಿ, ಮಧ್ಯಪ್ರಾಚ್ಯಕ್ಕೂ ಹಬ್ಬಿದ ಮಾರಕ ವೈರಸ್
ಚೀನಾದಲ್ಲಿ 76,000 ಜನರಿಗೆ ತಗುಲಿ, ಈಗಾಗಲೇ 2345 ಮಂದಿಯನ್ನು ಬಲಿ ಪಡೆದಿರುವ ಮಹಾಮಾರಿ ಕೊರೋನಾ ವೈರಸ್ ಸೋಂಕು ನಿಧಾನಗತಿಯಲ್ಲಿ ಜಾಗತಿಕ ಪಿಡುಗಾಗಿ ಪರಿಣಮಿಸಲು ಆರಂಭಿಸಿದೆ.

ನೂರಾರು ರೋಗಿಗಳ ಜೀವ ರಕ್ಷಣೆಗಾಗಿ ವಿವಾಹ ಮುಂದೂಡಿದ್ದ ವೈದ್ಯ ಕೊರೋನಾ ವೈರಸ್'ಗೆ ಬಲಿ
ಮಾಹಾಮಾರಿ ಕೊರೋನಾ ವೈರಸ್ ಸೋಂಕಿಗೊಳಗಾದ ರೋಗಿಗಳ ಜೀವ ರಕ್ಷಣೆಗಾಗಿ ತನ್ನ ವಿವಾಹವನ್ನೇ ಮುಂದೂಡಿದ್ದ ಚೀನಾದ ವೈದ್ಯರೊಬ್ಬರು ಸ್ವತಃ ಸೋಂಕಿಗೆ ಬಲಿಯಾಗಿರುವ ಘಟನೆ ವುಹಾನ್ ಪ್ರಾಂತ್ಯದಲ್ಲಿ ನಡೆದಿದೆ.

ಕೊರೊನಾ ಸೋಂಕು: ಚೀನಾದಲ್ಲಿ ಸಾವಿನ ಸಂಖ್ಯೆ 2345 ಕ್ಕೆ ಏರಿಕೆ
ಚೀನಾದಲ್ಲಿ ಇತ್ತೀಚೆಗೆ ಕಾಣಿಸಿಕೊಂಡಿರುವ ಕೊರೊನಾ ವೈರಾಣು ಸೋಂಕಿಗೆ 2345 ಜನರು ಬಲಿಯಾಗಿದ್ದಾರೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ ಶನಿವಾರ ತಿಳಿಸಿದೆ.

ಕೊರೊನಾ ಸೋಂಕು: ಚೀನಾದಲ್ಲಿ ಸಾವಿನ ಸಂಖ್ಯೆ 2236 ಕ್ಕೆ ಏರಿಕೆ
ಇತ್ತೀಚೆಗೆ ಚೀನಾದಲ್ಲಿ ಕಾಣಿಸಿಕೊಂಡಿರುವ ಮಹಾಮಾರಿ ಕೊರೊನಾ ವೈರಾಣು ಸೋಂಕಿಗೆ 2236 ಜನರು ಬಲಿಯಾಗಿದ್ದಾರೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ ತಿಳಿಸಿದೆ.

ಕೊರೋನಾವೈರಸ್ ಪೀಡಿತ ವುಹಾನ್'ನಿಂದ ಮತ್ತಷ್ಟು ಭಾರತೀಯರ ಸ್ಥಳಾಂತರ: ವಿದೇಶಾಂಗ ವ್ಯವಹಾರಗಳ ಸಚಿವಾಲಯ
ಕೊರೋನಾವೈರಸ್ ಪೀಡಿತ ವುಹಾನ್ ನಿಂದ ಮತ್ತಷ್ಟು ಭಾರತೀಯರನ್ನು ಸ್ಥಳಾಂತರ ಮಾಡಲಾಗುತ್ತದೆ ಎಂದು ವಿದೇಶಾಂಗ ಸಚಿವಾಲಯ ಗುರುವಾರ ಹೇಳಿದೆ.

