coronavirus

ಹೊಸ ದೇಶಗಳಿಗೂ ವ್ಯಾಪಿಸಿದ ಕೊರೋನಾ ಸೋಂಕು: ಜಾಗತಿಕ ವೈರಸ್ ನಿಂದ ಹೆಚ್ಚಾದ ಅಪಾಯ-ಡಬ್ಲ್ಯುಎಚ್ ಒ
ಕೊರೋನಾ ಸಾಂಕ್ರಾಮಿಕ ರೋಗವು ಸಹರನ್ ಆಫ್ರಿಕಾಕ್ಕೆ ಹರಡಿದ ನಂತರ ಮತ್ತು ಆರ್ಥಿಕ ಮಾರುಕಟ್ಟೆ ಕುಸಿತಕ್ಕೆ ಕಾರಣವಾದ ನಂತರ ವಿಶ್ವ ಆರೋಗ್ಯ ಸಂಸ್ಥೆ ಕೊರೋನಾ ವೈರಸ್ ಅಪಾಯಕಾರಿಯಾಗಿ ಹೆಚ್ಚುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದೆ.

ಕೊರೋನಾ ಮಹಾಘಾತ: ಭಾರತದ ಟಾಪ್ 1 ಶ್ರೀಮಂತ ಮುಕೇಶ್ ಕಳೆದುಕೊಂಡಿದ್ದು 5 ಬಿಲಿಯನ್ ಡಾಲರ್!
ಚೀನಾ ಸೇರಿದಂತೆ ವಿಶ್ವದ ನಾನಾ ದೇಶಗಳಲ್ಲಿ ಮರಣ ಭೀತಿ ಸೃಷ್ಟಿಸಿರುವ ಕೊರೋನಾ ವೈರಸ್ ಎಫೆಕ್ಟ್ ಭಾರತೀಯ ಷೇರುಮಾರುಕಟ್ಟೆ ಮೇಲೂ ಆಗಿದ್ದು, ಕೇವಲ 5 ನಿಮಿಷಗಳ ಅಂತರದಲ್ಲಿ ಹೂಡಿಕೆದಾರರು 5 ಲಕ್ಷ ಕೋಟಿ ರೂ ನಷ್ಟ ಅನುಭವಿಸಿದ್ದಾರೆ.

ಇಟಲಿಗೂ ವ್ಯಾಪಿಸಿದ ಕೊರೊನಾ ವೈರಸ್ ಮಾರಿ, 400ಕ್ಕೆ ಏರಿದ ಸೋಂಕು ಪ್ರಕರಣಗಳ ಸಂಖ್ಯೆ
ಚೀನಾ, ಕೊರಿಯಾ ಸೇರಿದಂತೆ ವಿವಿಧ ದೇಶಗಳಲ್ಲಿ ಭೀತಿ ಸೃಷ್ಟಿಸಿರುವ ಮಾರಣಾಂತಿಕ ಕೊರೋನಾ ವೈರಸ್ ಮಾರಿ ಇದೀಗ ಹಲವಾರು ಯುರೋಪಿಯನ್ ರಾಷ್ಟ್ರಗಳಿಗೂ ವ್ಯಾಪಿಸಿದೆ.

ಸ್ಯಾಂಡಲ್ ವುಡ್ ಗೂ ಆವರಿಸಿದ ಕೊರೋನಾ ಭೀತಿ! 'ರಾಬರ್ಟ್' ಹಾಡಿನ ಚಿತ್ರೀಕರಣ ರದ್ದು
ಜಗತ್ತಿನ ನಾನಾ ಕಡೆ ತನ್ನ ಕಬಂಧ ಬಾಹುಗಳನ್ನು ಚಾಚಿ ಸಾವಿರಾರು ಮಂದಿಯ ಸಾವಿಗೆ ಕಾರಣವಾಗಿರುವ ಕೊರೋನಾವೈರಸ್ ಇದೀಗ ಸ್ಯಾಂಡಲ್ ವುಡ್ ಗೆ ಸಹ ಆತಂಕ ಮೂಡಿಸಿದೆ. ಅಷ್ಟು ಮಾತ್ರವಲ್ಲ ಸ್ಯಾಂಡಲ್ ವುಡ್ ನಲ್ಲಿ ಶೂಟಿಂಗ್ ಶೆಡ್ಯೂಲ್ ಗೆ ಸಹ ಡ್ಡಿ ಮಾಡಿದೆ! ಹೌದು, ದರ್ಶನ್ ಅಭಿನಯದ ರಾಬರ್ಟ್ ಚಿತ್ರತಂಡ ಸ್ಪೇನ್‌ನಲ್ಲಿ ಹಾಡಿನ ಚಿತ್ರೀಕರಣ ನಡೆಸಬೇಕಿತ್ತು. ಆದರೆ ಕೊರೋನಾ ಭೀತಿಯ

ಕೊರೋನಾವೈರಸ್: ಚೀನಾದಲ್ಲಿ ಮೃತರ 2,744 ಕ್ಕೆ ಏರಿಕೆ, 78,497 ಕ್ಕೇರಿದ ಸೋಂಕಿತರ ಸಂಖ್ಯೆ
ಚೀನಾದಲ್ಲಿ ಮಾರಣಾಂತಿಕ ಕೊರೋನಾ ವೈರಸ್ ಸೊಂಕಿನಿಂದ ಮೃತಪಟ್ಟವರ ಸಂಖ್ಯೆ ಈಗ 2,744 ಕ್ಕೆ ತಲುಪಿದೆ.

ಆಸ್ಟ್ರಿಯಾದಲ್ಲಿ ಮೊದಲ ಎರಡು ಕೊರೊನಾ ಸೋಂಕು ಪತ್ತೆ
ಆಸ್ಟ್ರಿಯಾದಲ್ಲಿ ಮಂಗಳವಾರ ಮೊದಲ ಬಾರಿಗೆ ಎರಡು ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗಿವೆ ಎಂದು ಅಲ್ಲಿನ ಆರೋಗ್ಯ ಸಚಿವಾಲಯ ತಿಳಿಸಿದೆ.

ಕೊರಿಯಾದಲ್ಲಿ ಕೊರೋನಾ ವೈರಸ್: ಸಾವಿನ ಸಂಖ್ಯೆ 10ಕ್ಕೇರಿಕೆ, 1000 ಗಡಿಯತ್ತ ಸೋಂಕು ಪೀಡಿತರು
ಚೀನಾದಲ್ಲಿ ಎರಡೂವರೆ ಸಾವಿರಕ್ಕೂ ಅಧಿಕ ಮಂದಿಯ ಬಲಿ ಪಡೆದ ಮಾರಣಾಂತಿಕ ಕೊರೋನಾ ವೈರಸ್ ಇದೀಗ ದಕ್ಷಿಣ ಕೊರಿಯಾಗೂ ಕಾಲಿಟ್ಟಿದ್ದು, ದಕ್ಷಿಣ ಕೊರಿಯಾದಲ್ಲಿ ಸಾವಿನ ಸಂಖ್ಯೆ 10ಕ್ಕೇರಿಕೆಯಾಗಿದೆ.

ಚೀನಾದಲ್ಲಿ ಮತ್ತೆ ಕೊರೋನಾ ವೈರಸ್ ಗೆ 71 ಮಂದಿ ಬಲಿ, ಸಾವಿನ ಸಂಖ್ಯೆ 2,663ಕ್ಕೆ ಏರಿಕೆ
ಚೀನಾದಲ್ಲಿ ಮತ್ತೆ ಮಾರಕ ಕೊರೋನಾ ವೈರಸ್ ಗೆ 71 ಮಂದಿ ಬಲಿಯಾಗಿದ್ದು, ಸಾವಿನ ಸಂಖ್ಯೆ 2,663ಕ್ಕೆ ಏರಿಕೆಯಾಗಿದೆ.

ಚೀನಾ, ಕೊರಿಯಾ ಬಳಿಕ ಇದೀಗ ಇಟಲಿ, ಇರಾನ್ ನಲ್ಲೂ 'ಕೊರೋನಾ' ಅಬ್ಬರ, 50ಕ್ಕೂ ಹೆಚ್ಚು ಸಾವು
ಚೀನಾ ಮತ್ತು ಕೊರಿಯಾದಲ್ಲಿ ಮರಣ ಮೃದಂಗ ಬಾರಿಸುತ್ತಿರುವ ಮಾರಣಾಂತಿಕ ಕೊರೋನಾ ವೈರಸ್ ಇದೀಗ ಇಟಲಿ ಮತ್ತು ಇರಾನ್ ನಲ್ಲೂ ತನ್ನ ಅಬ್ಬರ ಆರಂಭಿಸಿದೆ.

