coronavirus

ಕೊರೋನಾ ಭೀತಿ: ವಿದೇಶಗಳಲ್ಲಿ ಮಾಸ್ಕ್ ಗಳಿಗೆ ಹಾಹಾಕಾರ, ಫ್ರೆಂಚ್ ಆಸ್ಪತ್ರೆಯಲ್ಲಿ 2,000 ಮಾಸ್ಕ್ ಗಳ ಕಳ್ಳತನ
ಚೀನಾದಲ್ಲಿ ಮರಣ ಮೃದಂಗ ಬಾರಿಸುತ್ತಿರುವ ಕೊರೋನಾ ವೈರಸ್ ಇದೀಗ ವಿಶ್ವದಾದ್ಯಂತ ಭೀತಿ ಹುಟ್ಟಿಸಿದ್ದು, ವೈರಸ್ ನಿಂದ ದೂರ ಉಳಿಯುವ ಸಲುವಾಗಿ ಧರಿಸುವ ಮಾಸ್ಕ್ ಗಳಿಗಾಗಿ ಇದೀಗ ವಿದೇಶಗಳಲ್ಲಿ ಆಹಾಕಾರ ಶುರುವಾಗಿದೆ. ಇದರಂತೆ ಮಾಸ್ಕ್ ಗಳ ಕಳ್ಳತನ ಕೂಡ ಶುರುವಾಗಿದೆ.

ಬೆಂಗಳೂರು ಟೆಕ್ಕಿಗೆ ಕೊರೋನಾ ವೈರಸ್: ರೂಮ್'ಮೇಟ್'ನಲ್ಲಿ ದೃಢಪಟ್ಟಿಲ್ಲ ಸೋಂಕು
ಕೊರೋನಾ ಸೋಂಕು ದೃಢಪಟ್ಟಿರುವ ತೆಲಂಗಾಣದ ಟೆಕ್ಕಿಯೊಬ್ಬ ಬೆಂಗಳೂರಿಗೆ ಬಂದು ಹೋಗಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಆರೋಗ್ಯ ಇಲಾಖೆ ತೀವ್ರ ಕಟ್ಟೆಚ್ಚರ ವಹಿಸಿದ್ದು, ವ್ಯಕ್ತಿಯೊಂದಿಗೆ ಸಂಪರ್ಕ ಸಾಧಿಸಿದ್ದ 65 ಮಂದಿಯನ್ನು ಪ್ರತ್ಯೇಕವಾಗಿಟ್ಟು ಅವರೆಲ್ಲರ ಆರೋಗ್ಯದ ಮೇಲೆ ನಿಗಾವಹಿಸಿದೆ. ಅಲ್ಲದೆ. ವ್ಯಕ್ತಿ ವಾಸ್ತವ್ಯ ಹೂಡಿದ್ದ ಅಪಾರ್ಟ್ ಮೆಂಟ್'ನ 93 ಫ್ಲ್ಯಾಟ್ ನಲ್ಲಿ...

ಎಲ್ಲೆಲ್ಲೂ ಹರಡಿದ ಕೊರೋನಾ ಭೀತಿ: ರಾಜ್ಯದೆಲ್ಲೆಡೆ ತೀವ್ರ ಕಟ್ಟೆಚ್ಚರ, ಎಲ್ಲಾ ಜಿಲ್ಲೆಗಳಿಗೂ ಮಾರ್ಗಸೂಚಿ ರವಾನೆ
ಬೆಂಗಳೂರು ಟೆಕ್ಕಿಯೊಬ್ಬರಿಗೆ ಮಾರಕ ಕೊರೋನಾ ಸೋಂಕು ದೃಢಪಟ್ಟ ಬೆನ್ನಲ್ಲೇ ರಾಜ್ಯದಾದ್ಯಂತ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ವಿಮಾನ ನಿಲ್ದಾಣ, ಬಂದರು, ರೈಲು ನಿಲ್ದಾಣ, ಪ್ರಮುಖ ಬಸ್ ನಿಲ್ದಾಣ, ಪ್ರವಾಸಿ ತಾಣಗಳಲ್ಲಿ ಸಾಕಷ್ಟು ಮುಂಜಾಗ್ರತಾ ಕ್ರಮ ತಗೆದುಕೊಳ್ಳಲಾಗಿದ್ದು, ವೈರಸ್ ಎದುರಿಸಲು ಆರೋಗ್ಯ ಇಲಾಕೆ ಸರ್ವಸನ್ನದ್ಧವಾಗಿ ಕಾರ್ಯನಿರ್ವಹಿಸುತ್ತಿದೆ.

ಜೈಪುರದಲ್ಲಿ ಇಟಲಿ ಪ್ರವಾಸಿಗನ ಪತ್ನಿಗೂ ಕೊರೋನಾ ವೈರಸ್ ಪಾಸಿಟಿವ್, ದೇಶದಲ್ಲಿ ಪ್ರಕರಣಗಳ ಸಂಖ್ಯೆ 7ಕ್ಕೆ ಏರಿಕೆ
ಜೈಪುರದಲ್ಲಿ ಇಟಲಿಯ ಪ್ರವಾಸಿಗರೊಬ್ಬರಲ್ಲಿ ಕೊರೋನಾ ವೈರಸ್ ಪಾಸಿಟಿವ್ ಕಂಡುಬಂದಿತ್ತು. ಈಗ ಆತನ ಪತ್ನಿಯಲ್ಲೂ ಮಾರಣಾಂತಿಕ ಸೋಂಕು ಪತ್ತೆಯಾಗಿದ್ದು, ಇದರೊಂದಿಗೆ ಭಾರತದಲ್ಲಿ ಕೊರೋನಾ ವೈರಸ್...

ಕೊರೋನಾ ವೈರಸ್: ಶಾಲೆಗಳಲ್ಲಿ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಂತೆ ಶಿಕ್ಷಣ ಇಲಾಖೆ ಸೂಚನೆ
ಕೇಂದ್ರ ಮತ್ತು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು(ಕೋವಿದ್ -19) ಕೊರೋನಾ ವೈರಸ್ ಸೋಂಕು ಹರಡುವುದನ್ನು ತಡೆಗಟ್ಟುವ ಹಾಗೂ ನಿಯಂತ್ರಿಸುವ ಕುರಿತು ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಅರಿವು ಮೂಡಿಸಲು ರಾಜ್ಯದ ಶಾಲಾ- ಕಾಲೇಜುಗಳು ಕೆಲವು ಅಂಶಗಳನ್ನು ಕಡ್ಡಾಯವಾಗಿ ಪಾಲಿಸಲು ಆದೇಶಿಸಿದೆ.

ಜೈಪುರದಲ್ಲಿ ಇಟಲಿ ಪ್ರವಾಸಿಗನಿಗೆ ಕೊರೋನಾ ವೈರಸ್ ಪಾಸಿಟಿವ್: ದೇಶದಲ್ಲಿ ಆರು ಪ್ರಕರಣಗಳು ದೃಢ
ಜೈಪುರದಲ್ಲಿರುವ ಇಟಲಿಯ ಪ್ರವಾಸಿಗರೊಬ್ಬರಲ್ಲಿ ಕೊರೋನಾ ವೈರಸ್ ಪಾಸಿಟಿವ್ ಕಂಡುಬಂದಿದೆ. ಇದರೊಂದಿಗೆ ಭಾರತದಲ್ಲಿ ಒಟ್ಟಾರೆ 6 ಮಂದಿಯಲ್ಲಿ ಈ ಸೋಂಕು ದೃಢಪಟ್ಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಮೂಲಗಳು ಇಂದು ತಿಳಿಸಿವೆ.

ಕೊರೋನಾ ವೈರಸ್ ಭೀತಿ: ಆರ್ಬಿಐ ಅಭಯ, ಸತತ ಏಳು ದಿನಗಳ ಕುಸಿತದಿಂದ ಚೇತರಿಸಿಕೊಂಡ ಸೆನ್ಸೆಕ್ಸ್!
ಕೊರೋನಾ ವೈರಸ್ ಆರ್ಥಿಕತೆ ಮೇಲೆ ಪರಿಣಾಮ ಬೀರದಂತೆ ಕ್ರಮ ಕೈಗೊಳ್ಳುವುದಾಗಿ ಆರ್ ಬಿಐ ಭರವಸೆ ನೀಡಿದ ನಂತರ ಮಂಗಳವಾರ ಸೆನ್ಸೆಕ್ಸ್ 480 ಅಂಕಗಳೊಂದಿಗೆ ಮುಕ್ತಾಯಗೊಳ್ಳುವುದರೊಂದಿಗೆ ಸತತ ಏಳು ದಿನಗಳ ಕುಸಿತದಿಂದ ಚೇತರಿಸಿಕೊಂಡಿದೆ.

ಸೋಷಿಯಲ್ ಮೀಡಿಯಾದೊಂದಿಗಿನ ಆಟ ಬಿಟ್ಟು, ಕರೋನಾ ವೈರಸ್‌ನೊಂದಿಗೆ ವ್ಯವಹರಿಸಿ: ರಾಹುಲ್
ಭಾರತದಲ್ಲೂ ಕರೋನಾ ವೈರಸ್ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

ನೋಯ್ಡಾ ಶಾಲೆಯಲ್ಲಿ ಕೊರೋನಾ ಭೀತಿ: 40 ವಿದ್ಯಾರ್ಥಿಗಳ ಮೇಲೆ 28 ದಿನ ತೀವ್ರ ನಿಗಾ
ಚೀನಾ ಮಾತ್ರವಲ್ಲದೇ ವಿಶ್ವಾದ್ಯಂತ ಮೂರು ಸಾವಿರಕ್ಕೂ ಅಧಿಕ ಮಂದಿಯ ಬಲಿ ತೆಗೆದುಕೊಂಡಿರುವ ಮಾರಕ ಕೊರೋನಾ ವೈರಸ್ ಭೀತಿಯಿಂದಾಗಿ ನೋಯ್ಡಾದ ಶಾಲೆಯೊಂದರ 40 ಶಾಲಾಮಕ್ಕಳನ್ನು 28 ದಿನಗಳ ಕಾಲ ತೀವ್ರ ನಿಗಾದಲ್ಲಿರಿಸಲಾಗಿದ್ದು, ಪ್ರಸ್ತುತ ಶಾಲೆಯನ್ನು ಸ್ಥಗಿತ ಮಾಡಲಾಗಿದೆ.

