coronavirus

ಕೊರೋನಾ ವೈರಸ್: ವಿದೇಶಗಳಲ್ಲಿರುವ 17 ಭಾರತೀಯರಲ್ಲಿ ಸೋಂಕು ಪತ್ತೆ: ವಿದೇಶಾಂಗ ಇಲಾಖೆ
ವಿದೇಶಗಳಲ್ಲಿರುವ 17 ಮಂದಿ ಭಾರತೀಯರಲ್ಲಿ ಮಾರಕ ಕೊರೋನಾ ವೈರಸ್ ಪತ್ತೆಯಾಗಿದೆ ಎಂದು ವಿದೇಶಾಂಗ ಇಲಾಖೆ ಮಾಹಿತಿ ನೀಡಿದೆ.

ಕೊರೋನಾ ಭೀತಿಯಿಂದ ಕೈಕುಲುಕಲು ಭಯ ಎಂದ ಕೃಷಿ ಸಚಿವ ಬಿಸಿ ಪಾಟೀಲ್, ಭಯ ಬಿಡಿ ಎಂದು ಅಭಯ ನೀಡಿದ ಡಾ. ಸುಧಾಕರ್!
ಕೃಷಿ ಸಚಿವ ಬಿ.ಸಿ ಪಾಟೀಲ್ ಮಾತನಾಡಿ, ನಾನು ಮಂತ್ರಿ ಆದ ಮೇಲೆ ನನ್ನ ಕ್ಷೇತ್ರಕ್ಕೆ ಹೋದೆ. ಜನರು ನನ್ನ ಕೈಕುಲುಕಿ ಅಭಿನಂದನೆ ಹೇಳಲು ಬಂದಿದ್ದರು. ಆದರೆ ನನಗೆ ಕೈಕುಲುಕಲು ಭಯ, ಸುಮ್ಮನೆ ನಮಸ್ಕಾರ ಮಾಡುತ್ತಿದ್ದೆ. ಆದರೆ ಮಂತ್ರಿ ಆದ ಮೇಲೆ ಇವನಿಗೆ ಸೊಕ್ಕು ಬಂದಿದೆ ಎಂದು ಜನ ತಿಳಿದುಕೊಳ್ಳುತ್ತಿದ್ದರು. ಆಮೇಲೆ ಅವರಿಗೆ ಕೊರೋನಾ ಕಾಯಿಲೆ ಭಯದಿಂದ ಹಾಗೆ ಮಾಡಿದೆ

ಕೊರೋನಾವೈರಸ್ ಕುರಿತು ಒಡಿಶಾ ಹಣ್ಣಿನ ವ್ಯಾಪಾರಿಯಿಂದ 'ಭಾರತ ರಕ್ಷಿಸಿ' ಅಭಿಯಾನ
ಭರತ್ ಎಂದಿಗೂ ಭಾರತದ ಬಗೆಗೆ ಕಾಳಜಿ ವಹಿಸುತ್ತಾರೆ ಇದು ಬಂದರು ನಗರಿ ಪರದೀಪ್ ನಿವಾಸಿ ಭಾರತ್ ನಾಥ್ ಬಗೆಗೆ ಬಳಕೆಯಾಗುತ್ತಿರುವ ನಾಣ್ನುಡಿ. ಏಕೆಂದರೆ ಈ ಪಟ್ಟಣ ಸಧ್ಯ ಜಾಗತಿಕ ಭೀತಿ ಹುಟ್ಟಿಸುತ್ತಿರುವ ಕೊರೋನಾವೈರಸ್ (ಕೋವಿಡ್ 19) ಬಗೆಗೆ ಜನರಲ್ಲಿ ಜಾಗೃತಿ ಮೂಡಿಸುವ ಹೊಸ ಮಿಷನ್ ನ ಪ್ರಮುಖ ಭಾಗವಾಗಿದೆ. ಕುಕುಜಾಂಗ್ ಬ್ಲಾಕ್‌ನ 61 ವರ್ಷದ ಹಣ್ಣಿನ ವ್ಯಾಪಾರಿಯೊಬ್ಬ ಈ ನಿ

ದೇಶದ 28 ಮಂದಿಯಲ್ಲಿ ಕೊರೋನಾ ವೈರಸ್ ಪತ್ತೆ: ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್
ಭಾರತದಲ್ಲಿ ಒಟ್ಟು 28 ಮಂದಿಯಲ್ಲಿ ಕೊರೋನಾ ವೈರಸ್ ಪತ್ತೆಯಾಗಿದ್ದು, ಎಲ್ಲಾ ಅಂತರಾಷ್ಟ್ರೀಯ ವಿಮಾನಗಳಲ್ಲಿ ತೀವ್ರ ತಪಾಸಣೆ ನಡೆಸಲಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಅವರು ಬುಧವಾರ ಹೇಳಿದ್ದಾರೆ.

ದೇಶದಾದ್ಯಂತ 6 ಮಂದಿಯಲ್ಲಿ ಕೊರೋನಾವೈರಸ್ ಪತ್ತೆ: ಆರೋಗ್ಯ ಸಚಿವಾಲಯ
ದೇಶದಾದ್ಯಂತ ಒಟ್ಟು 6 ಮಂದಿಯಲ್ಲಿ ಕೊರೋನಾವೈರಸ್ ಪ್ರಕರಣಗಳು ಪತ್ತೆಯಾಗಿವೆ ಎಂದು ಕೇಂದ್ರೀಯ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಕೊರೊನಾ ವೈರಾಣು: ವಿಶ್ವಬ್ಯಾಂಕ್ ನಿಂದ 12 ಶತಕೋಟಿ ಡಾಲರ್ ನೆರವು
ಇತ್ತೀಚೆಗೆ ಕಾಣಿಸಿಕೊಂಡಿರುವ ಕೊರೊನಾ ವೈರಾಣು ಸೋಂಕು ಜಗತ್ತಿನಾದ್ಯಂತ ವ್ಯಾಪಿಸಿರುವ ಹಿನ್ನೆಲೆಯಲ್ಲಿ ಅನೇಕ ದೇಶಗಳಿಗೆ ನೆರವಾಗಲು ವಿಶ್ವಬ್ಯಾಂಕ್ 12 ಶತಕೋಟಿ ಡಾಲರ್ ವರೆಗೆ ನೆರವು ನೀಡುವುದಾಗಿ ಘೋಷಿಸಿದೆ.

ಕೊರೋನಾವೈರಸ್ ಭೀತಿ ಬೇಡ: ಪ್ರಧಾನಮಂತ್ರಿ ನರೇಂದ್ರ ಮೋದಿ
ದೇಶದಲ್ಲಿ ಹೊಸದಾಗಿ ಕೊರೋನಾ ಸೋಂಕಿನಲ್ಲಿ ಪ್ರಕರಣಗಳು ಬೆಳಕಿಗೆ ಬಂದ ಬೆನ್ನಲ್ಲೇ, ಪ್ರಧಾನಮಂತ್ರಿ ನರೇಂದ್ರ ಮೋದಿ, ಮಂಗಳವಾರ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ.

ಕೊರೋನಾ ವೈರಸ್: ಹೆಚ್ಚಿದ ಬೇಡಿಕೆ, ರಾಜಧಾನಿ ದೆಹಲಿಯಲ್ಲಿ ಸ್ಯಾನಿಟೈಸರ್, ಮಾಸ್ಕ್ ಗಳಿಗೆ ಎದುರಾಯ್ತು ಬರ!
ಕೇವಲ ಚೀನಾ ಮಾತ್ರವಲ್ಲ ಭಾರತದಲ್ಲೂ ಕೊರೋನಾ ಭೀತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಹಾಗಾಗಿ ಭಾರತದಲ್ಲಿ ಇದೀಗ ಹ್ಯಾಂಡ್ ಸ್ಯಾನಿಟೈಸರ್, ಮಾಸ್ಕ್ ಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ.

ವಿಶ್ವದಾದ್ಯಂತ ಭೀತಿ ಹುಟ್ಟಿಸಿರುವ ಕೊರೋನಾ: ವೈರಸ್ ನಿಂದ ದೂರ ಇರಲು ಏನು ಮಾಡಬೇಕು?
ವಿಶ್ವದಾದ್ಯಂತ ಭೀಟಿ ಹುಟ್ಟಿಸಿರುವ ಕೊರೋನಾ ವೈರಸ್ ವೊಂದು ಜಾತಿಯ ವೈರಸ್ ಆಗಿದೆ. ಸೂಕ್ಷ್ಮ ದರ್ಶಕದಲ್ಲಿ ಇದು ಕಿರೀಟ ರೀತಿ ಕಾಣಿಸುತ್ತದೆ. ಲ್ಯಾಟಿನ್ ಭಾಷೆಯಲ್ಲಿ ಕೊರೋನಾ ಎಂದರೆ ಕಿರೀಟ ಎಂದರ್ಥ. ಹೀಗಾಗಿ ವೈರಸ್'ಗೆ ಕೊರೋನಾ ಎಂದು ಹೆಸರು. ಚೀನಾದ ವುಹಾನ್ ನಗರದಲ್ಲಿನ ಅಕ್ರಮ ವನ್ಯ ಜೀವಿ ಮಾಂಸ ಕೇಂದ್ರದ ಮೂಲಕ ಮಾನವರಿಗೆ ವೈರಸ್ ತಗುಲಿದೆ.

