ಕೊರೋನಾ ವೈರಸ್: ಹೆಚ್ಚಿದ ಬೇಡಿಕೆ, ರಾಜಧಾನಿ ದೆಹಲಿಯಲ್ಲಿ ಸ್ಯಾನಿಟೈಸರ್, ಮಾಸ್ಕ್ ಗಳಿಗೆ ಎದುರಾಯ್ತು ಬರ!
ಕೇವಲ ಚೀನಾ ಮಾತ್ರವಲ್ಲ ಭಾರತದಲ್ಲೂ ಕೊರೋನಾ ಭೀತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಹಾಗಾಗಿ ಭಾರತದಲ್ಲಿ ಇದೀಗ ಹ್ಯಾಂಡ್ ಸ್ಯಾನಿಟೈಸರ್, ಮಾಸ್ಕ್ ಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ.

ನವದೆಹಲಿ: ಕೇವಲ ಚೀನಾ ಮಾತ್ರವಲ್ಲ ಭಾರತದಲ್ಲೂ ಕೊರೋನಾ ಭೀತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಹಾಗಾಗಿ ಭಾರತದಲ್ಲಿ ಇದೀಗ ಹ್ಯಾಂಡ್ ಸ್ಯಾನಿಟೈಸರ್, ಮಾಸ್ಕ್ ಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಂತೂ ಸ್ಯಾನಿಟೈಸರ್ ಮತ್ತು ಮಾಸ್ಕ್ ಗಲಿಗೆ ಬೇಡಿಕೆ ವಿಪರೀತ ಹೆಚ್ಚಿದ್ದು, ಪೂರೈಕೆಯ ಕೊರತೆ ಉಂಟಾಗಿದೆ. ಆದರೆ, ಕೊರೋನಾ ಸೋಂಕಿನಿಂದ ರಕ್ಷಿಸಿಕೊಳ್ಳಲು ಸ್ಯಾನಿಟೈಸರ್ ಗಳನ್ನೇ ಬಳಸಬೇಕು ಎಂದೇನೂ ಇಲ್ಲ, ಸೋಪು ಕೂಡ ವೈರಾಣುವನ್ನು ಕೊಲ್ಲುವ ಶಕ್ತಿಯನ್ನು ಹೊಂದಿದೆ ಎಂಬುದು ಈಗಾಗಲೇ ಸಾಬೀತಾಗಿದೆ.
ರೂ.10 ಇರುವ ಮಾಸ್ಕ್ ಗಳು ಇದೀಗ ದೆಹಲಿಯಲ್ಲಿ ರೂ.40ಕ್ಕೆ ಮಾರಾಟವಾಗುತ್ತಿದೆ. ಹಾಗೆಯೇ ಎನ್ 95 ಿರುವ ಮಾಸ್ಕ್ ಗಳು ಈ ಹಿಂದೆ ರೂ.150 ಇತ್ತು. ಆದರೆ, ಇದೀಗ ರೂ.500ಕ್ಕೆ ಮಾರಾಟವಾಗುತ್ತಿವ. ದುಬಾರಿಯಾದರೂ ಈ ಮಾಸ್ಕ್ ಗಳಿಗೂ ಬರ ಎದುರಾಗಿದೆ ಎಂಧು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪ್ರತೀನಿತ್ಯ 10-15 ಮಾಸ್ಕ್ ಗಳು ಗರಿಷ್ಠ ಮಾರಾಟವಾಗುತ್ತಿದ್ದವು. ಆದರೆ, ಇದೀಗ ಅಂಗಡಿಯಲ್ಲಿಯೇ ಮಾಸ್ಕ್ ಗಳಿಗೆ ಬರ ಎದುರಾಗಿದೆ ಅಂಗಡಿ ಮಾಲೀಕರೊಬ್ಬರು ಹೇಳಿಕೆ ನೀಡಿದ್ದಾರೆ.
ಕೊರೋನಾ ವೈರಸ್ ಹೆಸರು ಕೇಳಿಬಂದಾಗಿನಿಂದ ಫೇಸ್ ಮಾಸ್ಕ್ ಎಲ್ಲೆಡೆ ಹೆಚ್ಚಾಗಿ ಬಳಕೆಯಾಗುತ್ತಿದೆ. ಎಲ್ಲರೂ ಮಾಸ್ಕ್ ಕೊಳ್ಳಲು ಮಗಿಬೀಳುತ್ತಿದ್ದಾರೆ. ಆದರೆ, ಮಾಸ್ಕ್ ನಿಂದ ಹೆಚ್ಚೇನೂ ಉಪಯೋಗವಿಲ್ಲ. ನಿಮಗೆ ಸೋಂಕು ಹರಡಿಲ್ಲದಿದ್ದರೆ ಫೇಸ್ ಮಾಸ್ಕ್ ಬಳಸುವುದರಿಂದ ಯಾವುದೇ ಉಪಯೋಗವಿಲ್ಲ. ಮಾಸ್ಕ್ ಧರಿಸಿದ್ದರೂ ಬೇರೆಯವರಿಂದ ನಿಮಗೆ ಕೊರೋನಾ ವೈರಸ್ ಸೋಂಕು ತಗುಲಬಹುದು. ಆದರೆ, ಈಗಾಗಲೇ ನೀವು ಸೋಂಕಿರಾಗಿದ್ದರೆ ನಿಮ್ಮಿಂದ ಇತರರಿಗೆ ವೈರಸ್ ಹರಡುವುದನ್ನು ನಿಯಂತ್ರಿಸಲು ಮಾಸ್ಕ್ ಧರಿಸಬೇಕು.
ಎನ್95 ಮಾಸ್ಕ್ ಪರಿಣಾಮಕಾರಿಯಾಗಿದ್ದು ಶೇ.95ರಷ್ಟು ಸಣ್ಣ ಸಣ್ಣ ಬ್ಯಾಕ್ಟೀರಿಯಾ ಗಳನ್ನು ತಡೆಗಟ್ಟುತ್ತದೆ. ಹಾಗೆಯೇ ನೀವು ಒಂದು ವೇಳೆ ಆರೋಗ್ಯ ಸೇವೆಗಳಲ್ಲಿ ಕೆಲಸ ಮಾಡುತ್ತಿದ್ದರೆ ಅಥವಾ ರೋಗಿಗಳ ಶುಶ್ರೂಷೆ ಮಾಡುತ್ತಿದ್ದರೆ ಫೇಸ್ ಮಾಸ್ಕ್ ಕಡ್ಡಾಯವಾಗಿ ಬಳಕೆ ಮಾಡಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


