corona

ದೆಹಲಿ ಸಿಆರ್ ಪಿಎಫ್  ಸಿಬ್ಬಂದಿಗೆ ಸೋಂಕು: ಪ್ರಧಾನ ಕಚೇರಿ ಬಂದ್
ದೇಶ

ದೆಹಲಿ ಸಿಆರ್ ಪಿಎಫ್  ಸಿಬ್ಬಂದಿಗೆ ಸೋಂಕು: ಪ್ರಧಾನ ಕಚೇರಿ ಬಂದ್

ಸಿಆರ್ ಪಿಎಫ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಚಾಲಕನಿಗೆ ಕೊರೋನಾ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ದೆಹಲಿಯ ಸಿಆರ್ ಪಿಎಫ್ ಕಚೇರಿಯನ್ನು ಸೀಲ್ ಮಾಡಲಾಗಿದೆ.

ಅಪಾಯದಲ್ಲಿದ್ದ ಮೈಸೂರು ಎಲ್ಲಾ ಅಡೆತಡೆಗಳನ್ನು ಮೆಟ್ಟಿನಿಂತು ಕೊರೋನಾ ಯುದ್ದ ಗೆದ್ದಿದ್ದು ಹೇಗೆ? 
ರಾಜ್ಯ

ಅಪಾಯದಲ್ಲಿದ್ದ ಮೈಸೂರು ಎಲ್ಲಾ ಅಡೆತಡೆಗಳನ್ನು ಮೆಟ್ಟಿನಿಂತು ಕೊರೋನಾ ಯುದ್ದ ಗೆದ್ದಿದ್ದು ಹೇಗೆ? 

ಮಹಾಮಾರಿ ಕೊರೊನಾ ವೈರಸ್ ಸೋಂಕು ಮೈಸೂರಿನಲ್ಲಿ ದಿನದಿಂದ ದಿನಕ್ಕೆ ಇಳಿಮುಖವಾಗುತ್ತಿದೆ. ಜಿಲ್ಲೆಯಲ್ಲಿ ಶೇ.3ರಷ್ಟಿದ್ದ ಸೋಂಕಿತರು ಕಡಿಮೆಯಾಗುತ್ತಿದ್ದಾರೆ. ಕೇಂದ್ರ ಸರಕಾರದ ಸೂಚನೆಯಂತೆ   ಯಾವುದೇ ಒಂದು ಕೊರೊನಾ ಪಾಸಿಟಿವ್ ಕೇಸ್ ಬಾರದಿದ್ದರೆ ಮೈಸೂರು ಹಸಿರು ವಲಯವಾಗುವ ಸಾಧ್ಯತೆಯಿದೆ.

ಕೊರೋನಾದ ಕೆಟ್ಟ ಹಂತ ದಾಟಿದ್ದೇವೆ, ಆದರೂ ಮುಂಜಾಗ್ರತಾ ಕ್ರಮ ಅವಶ್ಯಕ: ಜಾವ್ಡೇಕರ್
ದೇಶ

ಕೊರೋನಾದ ಕೆಟ್ಟ ಹಂತ ದಾಟಿದ್ದೇವೆ, ಆದರೂ ಮುಂಜಾಗ್ರತಾ ಕ್ರಮ ಅವಶ್ಯಕ: ಜಾವ್ಡೇಕರ್

ಸಾಂಕ್ರಾಮಿಕ ಪಿಡುಗಾದ ಕೋವಿಡ್ 19 ನ ಕೆಟ್ಟ ಹಂತವನ್ನು ಭಾರತ ದಾಟಿದೆ, ಹೀಗಿದ್ದರೂ ಅವಶ್ಯಕ ಮುಂಜಾಗ್ರತಾ ಕ್ರಮಗಳನ್ನು ಮುಂದುವರಿಸಿಕೊಂಡು ಹೋಗಬೇಕೆಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.

ಕೊರೋನಾ ಗೆದ್ದ 12 ದಿನಗಳ ಹಸುಗೂಸು: ಪ್ರಕೃತಿ ಎಂದು ನಾಮಕರಣ
ದೇಶ

ಕೊರೋನಾ ಗೆದ್ದ 12 ದಿನಗಳ ಹಸುಗೂಸು: ಪ್ರಕೃತಿ ಎಂದು ನಾಮಕರಣ

ಕೊರೋನಾ ಸೋಂಕಿನಿಂದ ಗುಣಮುಖವಾಗಿದ್ದ ಮಧ್ಯಪ್ರದೇಶದ 12 ದಿನದ ಹಸುಗೂಸಿಗೆ ಪ್ರಕೃತಿ ಎಂದು ನಾಮಕರಣ ಮಾಡಲಾಗಿದೆ.

ಮಹಾರಾಷ್ಟ್ರ: ಸರ್ಕಾರಿ ಆಸ್ಪತ್ರೆ ಮಾತ್ರವಲ್ಲ, ಖಾಸಗಿ ಆಸ್ಪತ್ರೆಗಳಲ್ಲೂ ಉಚಿತ ಕೊರೋನಾ ಚಿಕಿತ್ಸೆ!
ದೇಶ

ಮಹಾರಾಷ್ಟ್ರ: ಸರ್ಕಾರಿ ಆಸ್ಪತ್ರೆ ಮಾತ್ರವಲ್ಲ, ಖಾಸಗಿ ಆಸ್ಪತ್ರೆಗಳಲ್ಲೂ ಉಚಿತ ಕೊರೋನಾ ಚಿಕಿತ್ಸೆ!

ಇದೇ ಮೊದಲ ಬಾರಿಗೆ ಕೇವಲ ಸರ್ಕಾರಿ ಆಸ್ಪತ್ರೆಗಳಲ್ಲಿ ಮಾತ್ರವಲ್ಲದೇ ಖಾಸಗಿ ಆಸ್ಪತ್ರೆಗಳಲ್ಲಿಯೂ ಕೊರೋನಾ ರೋಗಿಗಳಿಗೆ ಚಿಕಿತ್ಸೆ ನೀಡಲು ಮಹಾರಾಷ್ಟ್ರ ಸರ್ಕಾರ ಆಫರ್ ನೀಡಿದೆ.

ದಕ್ಷಿಣ ಕನ್ನಡ: ಕೊರೋನಾ ಸೋಂಕಿನ ಮೂಲ ಹುಡುಕಲು ಕೆಪಿಸಿಸಿ ಒತ್ತಾಯ
ರಾಜ್ಯ

ದಕ್ಷಿಣ ಕನ್ನಡ: ಕೊರೋನಾ ಸೋಂಕಿನ ಮೂಲ ಹುಡುಕಲು ಕೆಪಿಸಿಸಿ ಒತ್ತಾಯ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನ ಸೋಂಕಿನ ನೈಜ ಮೂಲ ಹುಡುಕಲು ವಿಶೇಷ ತನಿಖಾಧಿಕಾರಿಯನ್ನು ನೇಮಕಗೊಳಿಸುವಂತೆ ಕೆಪಿಸಿಸಿ ವಕ್ತಾರ ಪಿವಿ ಮೋಹನ್ ಆಗ್ರಹಿಸಿದ್ದಾರೆ.

ಕೊರೋನಾ: ದಕ್ಷಿಣ ಕನ್ನಡದಲ್ಲಿ 3ನೇ ಸಾವು, ಬಂಟ್ವಾಳ ಮೂಲದ ಮಹಿಳೆ ಮಹಾಮಾರಿಗೆ ಬಲಿ
ರಾಜ್ಯ

ಕೊರೋನಾ: ದಕ್ಷಿಣ ಕನ್ನಡದಲ್ಲಿ 3ನೇ ಸಾವು, ಬಂಟ್ವಾಳ ಮೂಲದ ಮಹಿಳೆ ಮಹಾಮಾರಿಗೆ ಬಲಿ

ಕೊರೋನಾ ಸೋಂಕಿಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದ ಬಂಟ್ವಾಳ ಮೂಲದ 67 ವರ್ಷದ ಮಹಿಳೆಯೊಬ್ಬರು ಗುರುವಾರ ಮಂಗಳೂರಿನ ವೆನ್ಲಾಕ್ ಕೋವಿಡ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಇದರೊಂದಿಗೆ ಕೊರೋನಾ ವೈರಸ್'ನ ಕರಿಛಾಯೆ ಆವರಿಸಿದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೃತರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ. 

1918ರ ಸ್ಪ್ಯಾನಿಷ್ ಫ್ಲೂ ನಿಂದ ತಪ್ಪಿಸಿಕೊಂಡು, ಕ್ಯಾನ್ಸರ್ ಗೆದ್ದು, ಕೊರೋನಾಗೆ ಸೆಡ್ಡು ಹೊಡೆದ 101 ವರ್ಷದ ಅಜ್ಜಿ!
ವಿದೇಶ

1918ರ ಸ್ಪ್ಯಾನಿಷ್ ಫ್ಲೂ ನಿಂದ ತಪ್ಪಿಸಿಕೊಂಡು, ಕ್ಯಾನ್ಸರ್ ಗೆದ್ದು, ಕೊರೋನಾಗೆ ಸೆಡ್ಡು ಹೊಡೆದ 101 ವರ್ಷದ ಅಜ್ಜಿ!

ಸ್ಪ್ಯಾನಿಷ್ ಫ್ಲೂ ವೇಳೆ ಜನಿಸಿ ಅದರಿಂದ ಬಚಾವಾಗಿದ್ದ ನ್ಯೂಯಾರ್ಕ್ ಮಹಿಳೆ ಸದ್ಯ ಕೊರೋನಾವನ್ನು ಗೆದ್ದಿದ್ದಾಳೆ. ಲೇಕ್ ಮೊಹೆಗನ್ ನ ನರ್ಸಿಂಗ್ ಹೋಂನಲ್ಲಿ ವಾಸಿಸುವ ಏಂಜಲೀನಾ ಫ್ರೀಡ್ಮನ್ ಅವರನ್ನು ಮಾರ್ಚ್ 21 ರಂದು ಸಣ್ಣ ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಬೆಳಗಾವಿಯಲ್ಲಿ ಕೊರೋನಾ ಸ್ಫೋಟ: 69 ಕ್ಕೇರಿದ ಸೋಂಕಿತರ ಸಂಖ್ಯೆ; ಆತಂಕದಲ್ಲಿ ಜನತೆ
ರಾಜ್ಯ

ಬೆಳಗಾವಿಯಲ್ಲಿ ಕೊರೋನಾ ಸ್ಫೋಟ: 69 ಕ್ಕೇರಿದ ಸೋಂಕಿತರ ಸಂಖ್ಯೆ; ಆತಂಕದಲ್ಲಿ ಜನತೆ

ಒಂದೇ ದಿನ ಹತ್ತಕ್ಕೂ ಹೆಚ್ಚು ಕೊರೊನಾ ಪಾಸಿಟಿವ್‌ ಪ್ರಕರಣಗಳು ದಾಖಲಾಗುವ ಮೂಲಕ ಬೆಳಗಾವಿ ಜಿಲ್ಲೆ ಮತ್ತೊಮ್ಮೆ ರಾಜ್ಯದ ಗಮನ ಸೆಳೆದಿದೆ. ಜನ ಮತ್ತಷ್ಟು ಆತಂಕಕ್ಕೊಳಗಾಗುವಂತೆ ಮಾಡಿದೆ. ಬೆಳಗಾವಿಯಲ್ಲಿ ಸೋಂಕಿತರ ಸಂಖ್ಯೆ 69ಕ್ಕೆ ಏರಿಕೆಯಾಗುವ ಮೂಲಕ ರಾಜ್ಯದಲ್ಲಿ ಮೂರನೇ ಸ್ಥಾನದಲ್ಲಿದೆ.