corona

ಕರ್ನಾಟಕ: 5 ದಿನಗಳಲ್ಲಿ ಶೇ. 6.31 ಕೊರೋನಾ ಸೋಂಕಿತರ ಸಂಖ್ಯೆ ಏರಿಕೆ
ಕೊರೋನಾ ಸೋಂಕಿತರ ಸಂಖ್ಯೆ ಕರ್ನಾಟಕದಲ್ಲಿ ಗಣನೀಯ ಪ್ರಮಾಣದಲ್ಲಿ ಏರುತ್ತಲೇ ಇದೆ. ಕಳೆದ 5 ದಿನಗಳಲ್ಲಿ ಶೇ.6.31 ರಷ್ಟು ಪ್ರಮಾಣದಲ್ಲಿ ಸೋಂಕಿತರ ಸಂಖ್ಯೆ ಏರಿಕೆಯಾಗಿದೆ.

ಕೊರೋನಾ ಎಫೆಕ್ಟ್: ನವಜಾತ ಶಿಶುಗಳಿಗೆ ಕೊರೋನಾ- ಲಾಕ್ ಡೌನ್ ಎಂದು ನಾಮಕರಣ
ಉತ್ತರ ಪ್ರದೇಶದಲ್ಲಿ ನವಜಾತ ಶಿಶುಗಳಿಗೆ 'ಕೊರೊನಾ' ಮತ್ತು 'ಲಾಕ್‌ಡೌನ್' ಎಂದು ನಾಮಕರಣ ಮಾಡಲಾಗಿದೆ. ಈ ಹೆಸರುಗಳನ್ನು ನಾಮಕರಣ ಮಾಡುವ ಮೂಲಕ ಇಬ್ಬರು ಮಕ್ಕಳಿಗೆ ಸಂಬಂಧಿಸಿದ ಎರಡೂ ಕುಟುಂಬಗಳು ಕೊರೊನಾ ಬಗ್ಗೆ ಜನರು ಜಾಗೃತರಾಗಲಿ ಎನ್ನುವ ಆಶಯ ಹೊಂದಿವೆ.

ಧಾರಾವಿ ಕೊಳಗೇರಿಯಲ್ಲಿ ಕೊರೋನಾದಿಂದ ವ್ಯಕ್ತಿ ಸಾವು: ಸಮೀಪದ 300 ಅಂಗಡಿಗಳಿಗೆ ಬೀಗ
ಕೊರೋನಾ ಸೋಂಕಿತ 46 ವರ್ಷದ ವ್ಯಕ್ತಿ ಮುಂಬಯಿಯ ಕೊಳಗೇರಿ ಪ್ರದೇಶದಲ್ಲಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಸುತ್ತ ಮುತ್ತಲಿನ ಸುಮಾರು 300 ಅಂಗಡಿಗಳಿಗೆ ಸ್ಥಳೀಯ ಆಡಳಿತ ಬೀಗ ಜಡಿದಿದೆ.

ಸೋಂಕಿತರ ಸಂಖ್ಯೆ 10 ಲಕ್ಷ, ಕೊರೋನಾದಿಂದ ಸಾವು 50 ಸಾವಿರಕ್ಕೇರಲಿದೆ: ವಿಶ್ವ ಆರೋಗ್ಯ ಸಂಸ್ಥೆ
ಮುಂದಿನ ಕಕೆಲವು ದಿನಗಳಲ್ಲೇ ಜಾಗತಿಕ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 10 ಲಕ್ಷ ಹಾಗೂ 50 ಸಾವಿರ ಮಂದಿ ಸಾವನ್ನಪ್ಪುವ ಸಾಧ್ಯತೆ ಇರುವುದಾಗಿ ವಿಶ್ವ ಆರೋಗ್ಯ ಸಂಸ್ಥೆ (WHO) ಹೇಳಿದೆ.ಸೋಂಕು ಪ್ರಮಾಣ

ಬೆಂಗಳೂರು ಸೇರಿ ರಾಜ್ಯ 4 ಜಿಲ್ಲೆಗಳನ್ನು 'ರೆಡ್ ಝೋನ್' ಎಂದು ಘೋಷಿಸಿದ ಸರ್ಕಾರ
ಬೆಂಗಳೂರು ನಗರವನ್ನು ಈಗಾಗಲೇ ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ ಕೊರೋನಾ ಹಾಟ್'ಸ್ಪಾಟ್ ಎಂದು ಘೋಷಣೆ ಮಾಡಿದ ಬೆನ್ನಲ್ಲೇ ರಾಜ್ಯ ಸರ್ಕಾರ ಇದೀಗ ರಾಜ್ಯದ ನಾಲ್ಕು ಜಿಲ್ಲೆಗಳನ್ನು ರೆಡ್ ಝೋನ್ ಎಂದು ಘೋಷಣೆ ಮಾಡಿದೆ.

ಬೆಳಗಾವಿಯ 10, ಬೀದರ್ ನಲ್ಲಿ 26 ಮಂದಿಗೆ ಕ್ವಾರಂಟೈನ್: ಎಲ್ಲವೂ ನೆಗೆಟಿವ್
ಮಾರ್ಚ್ 17 ರಂದು ದೆಹಲಿಯ ನಿಜಾಮುದ್ದೂನ್ ದರ್ಗಾಕ್ಕೆ ತೆರೆಳಿದ್ದ ಬೆಳಗಾವಿಯ 10 ಹಾಗೂ ಬೀದರ್ ನ 26 ಮಂದಿಯನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿದ್ದು, ಅದರಲ್ಲಿ ಒಂದು ಕೊರೋನಾ ಪಾಸಿಟಿವ್ ಬಂದಿಲ್ಲ ಎಂದು ತಿಳಿದು ಬಂದಿದೆ.

ಬಂಗಾಳದಲ್ಲಿ 1 ಲಕ್ಷ ಜನರು ಕ್ವಾರೆಂಟೈನ್ ಗೆ!
ಕೊರೋನಾ ವೈರಸ್ ದೇಶಾದ್ಯಂತ ವೇಗವಾಗಿ ಹರಡುತ್ತಿದ್ದು, ಪಶ್ಚಿಮ ಬಂಗಾಳದಲ್ಲಿ 24 ಗಂಟೆಗಳಲ್ಲಿ 3 ಸಾವು ಸಂಭವಿಸಿದ್ದು, ಬರೊಬ್ಬರಿ 1 ಲಕ್ಷ ಜನರನ್ನು ಕ್ವಾರಂಟೈನ್ ನಲ್ಲಿರಿಸಲಾಗಿದೆ.

ತುಮಕೂರು ಜನತೆಗೆ ಸದ್ಯಕ್ಕೆ ರಿಲೀಫ್: ವೃದ್ಧನ ಪ್ರಾಥಮಿಕ ಸಂಪರ್ಕದಲ್ಲಿದ್ದ ವ್ಯಕ್ತಿಗಳಲ್ಲಿ ಕರೋನಾ ನೆಗೆಟಿವ್
ತುಮಕೂರಿನಲ್ಲಿ ಕರೋನಾ ಸೋಂಕಿನಿಂದ ಇತ್ತೀಚೆಗೆ ಸಾವನ್ನಪ್ಪಿದ ವೃದ್ಧನ ಪ್ರಾಥಮಿಕ ಸಂಪರ್ಕದಲ್ಲಿದ್ದ ವ್ಯಕ್ತಿಗಳಲ್ಲಿ ಕರೋನಾ ಟೆಸ್ಟ್ ನಲ್ಲಿ ನೆಗೆಟಿವ್ ಕಂಡು ಬಂದಿದೆ ಎಂದು ಬೆಂಗಳೂರಿನ ಐಸಿಎಂಆರ್ ಎನ್ ಐವಿ ಯಲಿಲು ನಡೆದ ಪರೀಕ್ಷೆಯಿಂದ ದೃಢಪಟ್ಟಿದೆ.

ಲಾಕ್ ಡೌನ್ ಉಲ್ಲಂಘಿಸಿದರೇ ನಿಮ್ಮ ವಾಹನ ಸೀಜ್: ರಾಜ್ಯ ಸರ್ಕಾರದ ಮಹತ್ವದ ಆದೇಶ
ದೇಶಾದ್ಯಂತ ಕೊರೋನಾ ವೈರಸ್ ನಿರಂತರವಾಗಿ ಹರಡುತ್ತಲೇ ಇದೆ. ಹೀಗಾಗಿ ಕೇಂದ್ರ ಸರ್ಕಾರ 21 ದಿನಗಳ ಲಾಕ್‌ಡೌನ್ ಆದೇಶ ಹೊರಡಿಸಿದೆ. ಆದಾಗ್ಯೂ ಅನೇಕರು ರಸ್ತೆಯ ಮೇಲೆ ಅನಗತ್ಯವಾಗಿ ಸುತ್ತಾಡುತ್ತಿದ್ದಾರೆ. ಈ ಬಗ್ಗೆ ಪೊಲೀಸರು ಎಷ್ಟೇ ಸೂಚನೆ ನೀಡಿದರು ಜನರು ಮಾತ್ರ ಬದಲಾಗುತ್ತಿಲ್ಲ. ಹೀಗಾಗಿ ಕಟ್ಟುನಿಟ್ಟಿನ ಕ್ರಮಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ.

