Corona Virus

ಮೇ 10 ರಿಂದ 24 ರವರೆಗೆ ತಮಿಳು ನಾಡಿನಲ್ಲಿ ಸಂಪೂರ್ಣ ಲಾಕ್ ಡೌನ್: ಅಗತ್ಯ ಸೇವೆಗಳಿಗೆ ಮಾತ್ರ ಅವಕಾಶ
ಕೊರೋನಾ ಎರಡನೇ ಅಲೆ ನಿಯಂತ್ರಣಕ್ಕೆ ಬಾರದಷ್ಟು ಹರಡುತ್ತಿರುವ ಹಿನ್ನೆಲೆಯಲ್ಲಿ ಒಂದೊಂದೇ ರಾಜ್ಯಗಳು ರಾಜ್ಯಮಟ್ಟದಲ್ಲಿ ಸಂಪೂರ್ಣ ಲಾಕ್ ಡೌನ್ ಹೇರಿಕೆ ಮಾಡುತ್ತಿವೆ.

'ನೀವು ಕೊರೋನಾ ವೈರಸ್ ಗಿಂತಲೂ ಡೇಂಜರ್, ಯೋಗ್ಯತೆ ಇದ್ದರೆ ಪಕ್ಷದಲ್ಲಿ ಇರಿ, ಇಲ್ಲದಿದ್ದರೆ ತೊಲಗಿ': ಮಾಜಿ ಸಚಿವ ವಿಶ್ವನಾಥ್ ವಿರುದ್ಧ ಕಿಡಿ
ಮಾಜಿ ಸಚಿವ ಬಿಜೆಪಿಯ ಹಿರಿಯ ನಾಯಕ, ವಿಧಾನ ಪರಿಷತ್ ಸದಸ್ಯ ಹೆಚ್ ವಿಶ್ವನಾಥ್ ಅವರು ಇಂತಹ ಕೊರೋನಾ ಸಂಕಷ್ಟ ಕಾಲದಲ್ಲಿ ಮಾನಸಿಕ ಸ್ಥಿಮಿತ ಕಳೆದುಕೊಂಡ ರೀತಿಯಲ್ಲಿ ಮಾತನಾಡುತ್ತಿದ್ದಾರೆ ಎಂದು ಯಲಹಂಕ ಕ್ಷೇತ್ರದ ಶಾಸಕ ಎಸ್ ಆರ್ ವಿಶ್ವನಾಥ್ ಟೀಕಿಸಿದ್ದಾರೆ.

ಅಫಜಲಪುರದಲ್ಲಿ ಸೋಂಕಿತರು ಆಕ್ಸಿಜನ್ ಕೊರತೆಯಿಂದ ಸಾವನ್ನಪ್ಪಿಲ್ಲ: ಜಿಲ್ಲಾಧಿಕಾರಿ ವಿ.ವಿ ಜ್ಯೋತ್ಸ್ನಾ ಸ್ಪಷ್ಟನೆ
ಅಫಜಲಪುರ ಸರ್ಕಾರಿ ಆಸ್ಪತ್ರೆಯಲ್ಲಿ ಯಾವತ್ತೂ ಆಕ್ಸಿಜನ್ ಕೊರತೆಯಾಗಿಲ್ಲ. ಯಾವ ರೋಗಿಯೂ ಆಕ್ಸಿಜನ್ ಕೊರತೆಯಿಂದ ಸಾವನ್ನಪ್ಪಿಲ್ಲ ಎಂದು ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ ಸ್ಪಷ್ಟಪಡಿಸಿದ್ದಾರೆ.

ರಷ್ಯಾದಿಂದ ಆಮ್ಲಜನಕ, ವೆಂಟಿಲೇಟರ್, ಔಷಧಿ ಹೊತ್ತ ವಿಮಾನಗಳು ಭಾರತಕ್ಕೆ ಆಗಮನ
ಜಗತ್ತಿಗೆ ಕಾಡಿರುವ ಕೊರೋನಾ ವೈರಸ್ ಮಹಾಮಾರಿ ವಿರುದ್ಧ ಸಕ್ರಿಯವಾಗಿ ಎಲ್ಲರೂ ಒಟ್ಟಾಗಿ ಒಗ್ಗಟ್ಟಿನಿಂದ ಹೋರಾಡಬೇಕಾದುದು ಪ್ರಸ್ತುತ ಸನ್ನಿವೇಶದಲ್ಲಿ ಮುಖ್ಯವಾಗಿದೆ ಎಂದು ಭಾರತದ ರಷ್ಯಾ ರಾಯಭಾರಿ ನಿಕೋಲಾಯ್ ಕುಡಶೇವ್ ಹೇಳಿದ್ದಾರೆ.

ಕೊರೋನಾ ಸಂಕಷ್ಟದ ಸಮಯದಲ್ಲಿ ಆತಂಕ: ನಿಭಾಯಿಸುವುದು ಹೇಗೆ?
ಕೊರೋನಾ ಸೋಂಕಿನ ಆರೋಗ್ಯ ಸಮಸ್ಯೆ, ಆರ್ಥಿಕ ದುಸ್ಥಿತಿ, ಕೆಲಸ ಕಳೆದುಕೊಳ್ಳುವ ಅಥವಾ ಇನ್ನು ಕೆಲವರು ಕೆಲಸ ಕಳೆದುಕೊಂಡು ಭವಿಷ್ಯ ಏನಾಗುತ್ತದೋ ಎಂಬ ಭೀತಿಯಲ್ಲಿ ಹೀಗೆ ಹತ್ತಾರು ಸಮಸ್ಯೆ ಇತ್ತೀಚೆಗೆ ಜನರನ್ನು ಕಾಡುತ್ತಿವೆ.

ಮನಕಲಕುವ ಘಟನೆ: 4 ಲಕ್ಷ ಬಿಲ್ ಕಟ್ಟಲಾಗದೆ ಪತಿಯ ಮೃತದೇಹವನ್ನು ಆಸ್ಪತ್ರೆಯಲ್ಲೇ ಬಿಟ್ಟು ಹೋದ ಬೆಂಗಳೂರು ಮಹಿಳೆ
ಮೊದಲೇ ಕೊರೋನಾ ಹೊಡೆತಕ್ಕೆ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿರುವ ಜನರು ಇದೀಗ ಕೊರೋನಾ ಚಿಕಿತ್ಸೆಯ ಬಿಲ್ ಕಟ್ಟಲು ಸಾಧ್ಯವಾಗದೇ ಅಸಹಾಯಕರಾಗುತ್ತಿದ್ದಾರೆ. ಅಂತೆಯೇ ಖಾಸಗಿ ಆಸ್ಪತ್ರೆಯ 4 ಲಕ್ಷ ರುಪಾಯಿ ಬಿಲ್ ಕಟ್ಟಲು ಸಾಧ್ಯವಾಗದೇ ಪತ್ನಿಯೊಬ್ಬಳು ಪತಿಯ ಮೃತದೇಹವನ್ನು ಆಸ್ಪತ್ರೆಯಲ್ಲೇ ಬಿಟ್ಟು ಹೋಗಿದ್ದಾರೆ.

ಸಿಬ್ಬಂದಿ ಕೊರತೆಯ ಮಧ್ಯೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಕೊಡಗು ಜಿಲ್ಲೆಯ ಏಕೈಕ ಸರ್ಕಾರಿ ಕೋವಿಡ್ ಆಸ್ಪತ್ರೆ!
ಕೊಡಗು ಜಿಲ್ಲೆಯಲ್ಲಿ ಕೊರೋನಾ ಸೋಂಕಿತ ರೋಗಿಗಳಿಗೆ ಚಿಕಿತ್ಸೆ ನೀಡುವ ಏಕೈಕ ಸರ್ಕಾರಿ ಕೋವಿಡ್-19 ಆಸ್ಪತ್ರೆ, ಸೋಂಕಿತರ ಸಂಖ್ಯೆ ಹೆಚ್ಚಾಗಿ ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆಯಿದ್ದರೂ ಸರಿಯಾಗಿ ಕಾರ್ಯನಿರ್ವಹಿಸುತ್ತಿದೆ. ಯಾವುದೇ ಸಮಸ್ಯೆ ಕಾಡುತ್ತಿಲ್ಲ.

ಪತಂಜಲಿ ಮುಖ್ಯ ಕ್ಯಾಂಪಸ್ ನಲ್ಲಿ ಯಾರಿಗೂ ಕೊರೋನಾ ಸೋಂಕಿಲ್ಲ: ಬಾಬಾ ರಾಮದೇವ್
ಪತಂಜಲಿ ಯೋಗಪೀಠದ ಮುಖ್ಯ ಕ್ಯಾಂಪಸ್ ನಲ್ಲಿ ಯಾವುದೇ ಕೊರೋನಾ ವೈರಸ್ ಪ್ರಕರಣಗಳಿಲ್ಲ ಎಂದು ಯೋಗಗುರು ಬಾಬಾ ರಾಮ್ ದೇವ್ ಸ್ಪಷ್ಟನೆ ನೀಡಿದ್ದಾರೆ.

ರಾಜ್ಯದಲ್ಲಿ ಮರಣ ಮೃದಂಗ: ಕೊರೋನಾಗೆ 190 ಮಂದಿ ಬಲಿ, ಬೆಂಗಳೂರು 16,662 ಸೇರಿ 26,962 ಮಂದಿಗೆ ಪಾಸಿಟಿವ್
ರಾಜ್ಯದಲ್ಲಿ ಕೊರೋನಾ ಮರಣ ಮೃದಂಗ ಮುಂದುವರೆದಿದ್ದು, ಮಹಾಮಾರಿಗೆ ಶುಕ್ರವಾರ ಒಂದೇ ದಿನ ಬೆಂಗಳೂರುನಲ್ಲಿ 124 ಮಂದಿ ಸೇರಿ ರಾಜ್ಯದಲ್ಲಿ ಬರೋಬ್ಬರಿ 190 ಮಂದಿ ಬಲಿಯಾಗಿದ್ದಾರೆ. ಇದರೊಂದಿಗೆ ಸಾವಿನ ಸಂಖ್ಯೆ 14 ಸಾವಿರ ಗಡಿ ದಾಟಿದೆ.

