ವಿದೇಶ

ರಷ್ಯಾದಿಂದ ಆಮ್ಲಜನಕ, ವೆಂಟಿಲೇಟರ್, ಔಷಧಿ ಹೊತ್ತ ವಿಮಾನಗಳು ಭಾರತಕ್ಕೆ ಆಗಮನ

ಜಗತ್ತಿಗೆ ಕಾಡಿರುವ ಕೊರೋನಾ ವೈರಸ್ ಮಹಾಮಾರಿ ವಿರುದ್ಧ ಸಕ್ರಿಯವಾಗಿ ಎಲ್ಲರೂ ಒಟ್ಟಾಗಿ ಒಗ್ಗಟ್ಟಿನಿಂದ ಹೋರಾಡಬೇಕಾದುದು ಪ್ರಸ್ತುತ ಸನ್ನಿವೇಶದಲ್ಲಿ ಮುಖ್ಯವಾಗಿದೆ ಎಂದು ಭಾರತದ ರಷ್ಯಾ ರಾಯಭಾರಿ ನಿಕೋಲಾಯ್ ಕುಡಶೇವ್ ಹೇಳಿದ್ದಾರೆ.

ರಷ್ಯಾದಿಂದ ಆಮ್ಲಜನಕ, ವೆಂಟಿಲೇಟರ್, ಔಷಧಿ ಹೊತ್ತ ವಿಮಾನಗಳು ಭಾರತಕ್ಕೆ ಆಗಮನ
ರಷ್ಯಾದಿಂದ ಅಗತ್ಯ ಸಾಮಗ್ರಿಗಳೊಂದಿಗೆ ಬಂದಿಳಿದ ವಿಮಾನ
Published On :

ನವದೆಹಲಿ/ಮಾಸ್ಕೊ: ಜಗತ್ತಿಗೆ ಕಾಡಿರುವ ಕೊರೋನಾ ವೈರಸ್ ಮಹಾಮಾರಿ ವಿರುದ್ಧ ಸಕ್ರಿಯವಾಗಿ ಎಲ್ಲರೂ ಒಟ್ಟಾಗಿ ಒಗ್ಗಟ್ಟಿನಿಂದ ಹೋರಾಡಬೇಕಾದುದು ಪ್ರಸ್ತುತ ಸನ್ನಿವೇಶದಲ್ಲಿ ಮುಖ್ಯವಾಗಿದೆ ಎಂದು ಭಾರತದ ರಷ್ಯಾ ರಾಯಭಾರಿ ನಿಕೋಲಾಯ್ ಕುಡಶೇವ್ ಹೇಳಿದ್ದಾರೆ.

ರಷ್ಯಾದ ಒಕ್ಕೂಟವು ನಮ್ಮ ಉಭಯ ದೇಶಗಳ ನಡುವಿನ ವಿಶೇಷ ಮತ್ತು ಸವಲತ್ತು ಪಡೆದ ಕಾರ್ಯತಂತ್ರದ ಸಹಭಾಗಿತ್ವದಲ್ಲಿ ಮತ್ತು ಕೋವಿಡ್-19 ವಿರುದ್ಧ ಹೋರಾಟದ ಸಹಕಾರದ ಹಿನ್ನೆಲೆಯಲ್ಲಿ ಭಾರತಕ್ಕೆ ಮಾನವೀಯ ನೆರವು ಕಳುಹಿಸಲು ನಿರ್ಧರಿಸಿದೆ ಎಂದು ತಿಳಿಸಿದ್ದಾರೆ.

ಈ ಉದ್ದೇಶಕ್ಕಾಗಿ, ರಷ್ಯಾದ ಎಮ್ ಕಾರ್ಮ್ ನಿರ್ವಹಿಸುತ್ತಿರುವ 2 ತುರ್ತು ವಿಮಾನಗಳು ಇಂದು ಭಾರತಕ್ಕೆ ಬಂದಿಳಿದಿವೆ. ಅವುಗಳಲ್ಲಿ ಆಮ್ಲಜನಕ ಸಾಂದ್ರಕಗಳು, ಶ್ವಾಸಕೋಶದ ಉಸಿರಾಟಕ್ಕೆ ಸಂಬಂಧಪಟ್ಟ ಉಪಕರಣಗಳು, ಹಾಸಿಗೆಯ ಪಕ್ಕದ ಮಾನಿಟರ್‌ಗಳು, ಕೊರೊನಾವಿರ್ ಮತ್ತು ಇತರ ಅಗತ್ಯ ಔಷಧಗಳನ್ನು ತರಲಾಗಿದೆ ಎಂದು ಅವರು ವಿವರಿಸಿದ್ದಾರೆ.

ಮೇ 21 ರಿಂದ ಪ್ರಾರಂಭವಾಗುವ ಸ್ಪುಟ್ನಿಕ್ ವಿ ಯ ಮುಂಬರುವ ವಿತರಣೆಗಳು ಮತ್ತು ನಂತರದ ಭಾರತದಲ್ಲಿ ಅದರ ಉತ್ಪಾದನೆಗೆ ಅನುಕೂಲವಾಗುವಂತೆ ವೈದ್ಯಕೀಯ ವಿಜ್ಞಾನ ಕ್ಷೇತ್ರದಲ್ಲಿ ಸಹಕಾರ ನೀಡಲಾಗುವುದು ಎಂದು ಕೂಡ ಅವರು ತಿಳಿಸಿದ್ದಾರೆ.

ಇಂದು ಬೆಳಗ್ಗೆ ರಷ್ಯಾದಿಂದ 20 ಆಮ್ಲಜನಕ ಸಾಂದ್ರಕ, 75 ವೆಂಟಿಲೇಟರ್‌ಗಳು, 150 ಹಾಸಿಗೆಯ ಪಕ್ಕದ ಮಾನಿಟರ್‌ಗಳು ಮತ್ತು 22 ಮೆಟ್ರಿಕ್ ಟನ್ ಔಷಧಿಗಳನ್ನು ತರಲಾಗಿದೆ ಎಂದು ಕೇಂದ್ರ ಪರೋಕ್ಷ ತೆರಿಗೆಗಳು ಮತ್ತು ಸುಂಕ ಮಂಡಳಿ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.