Corona Virus

ಮಹಾರಾಷ್ಟ್ರ: ಒಂದೇ ದಿನ 6,330 ಹೊಸ ಕೊರೋನಾ ಪ್ರಕರಣ ಪತ್ತೆ, 125 ಬಲಿ; ಸೋಂಕಿತರ ಸಂಖ್ಯೆ 1,86,626ಕ್ಕೆ ಏರಿಕೆ
ಭಾರತದಲ್ಲಿ ಕೊರೋನಾ ಹಾಟ್ ಸ್ಪಾಟ್ ಎಂದೇ ಕುಖ್ಯಾತಿ ಪಡೆದಿರುವ ಮಹಾರಾಷ್ಟ್ರದಲ್ಲಿ ನಿನ್ನೆ ಒಂದೇ ದಿನ 6,330 ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು. ಆ ಮೂಲಕ ಒಟ್ಟಾರೆ ಸೋಂಕಿತರ ಸಂಖ್ಯೆ 1,86,626ಕ್ಕೇರಿದೆ.

ಪತಂಜಲಿಯ ಕೊರೋನಿಲ್ ಔಷಧಿಗೆ ಯಾವುದೇ ರೀತಿಯ ನಿರ್ಬಂಧವಿಲ್ಲ: ಬಾಬಾ ರಾಮ್ ದೇವ್
ಕೊರೊನಾ ಸೋಂಕು ನಿವಾರಣೆಗಾಗಿ ಪತಂಜಲಿ ಸಂಸ್ಥೆ ಸಿದ್ದಪಡಿಸಲಾಗಿರುವ ಕೊರೊನಿಲ್ ಔಷಧಿಗೆ ಯಾವುದೇ ರೀತಿಯ ನಿರ್ಬಂಧವಿಲ್ಲ. ದೇಶದ ಮೂಲೆ ಮೂಲೆಯಲ್ಲೂ ಕೊರೊನಿಲ್ ಲಭ್ಯವಿದೆ ಎಂದು ಯೋಗ ಗುರು ಬಾಬಾ ರಾಮ್ ದೇವ್ ಹೇಳಿದ್ದಾರೆ.

ಕೊರೋನಾ ವೈರಸ್: ಪ್ಲಾಸ್ಮಾ ಥೆರಪಿ ನನ್ನ ಪ್ರಾಣ ಉಳಿಸಿದೆ- ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್
ಮಾರಕ ಕೊರೋನಾ ವೈರಸ್ ಗೆ ತುತ್ತಾಗಿ ಪ್ರಾಣಾಪಾಯದ ಸ್ಥಿತಿಗೆ ತಲುಪಿದ್ದ ನಾನು ಪ್ಲಾಸ್ಮಾ ಥೆರಪಿಯಿಂದ ಬದುಕುಳಿದಿದ್ದೇನೆ ಎಂದು ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಹೇಳಿದ್ದಾರೆ.

ಕೊರೋನಾ ವೈರಸ್: ಅಮೆರಿಕಾದಲ್ಲಿ ಒಂದೇ ದಿನ ದಾಖಲೆಯ 47 ಸಾವಿರ ಜನರಿಗೆ ಸೊಂಕು!
ಮಾರಕ ಕೊರೋನಾ ವೈರಸ್ ನಿಯಂತ್ರಣದಲ್ಲಿ ವಿಶ್ವದ ದೊಡ್ಡಣ್ಣ ಅಕ್ಷರಶಃ ಕೈ ಚೆಲ್ಲಿ ಕುಳಿತಿದ್ದು, ಇದಕ್ಕೆ ಸ್ಪಷ್ಟ ನಿದರ್ಶನ ಎನ್ನುವಂತೆ ನಿನ್ನೆ ಒಂದೇ ದಿನ ಅಮೆರಿಕದಲ್ಲಿ ಬರೊಬ್ಬರಿ ದಾಖಲೆಯ 47 ಸಾವಿರಕ್ಕೂ ಅಧಿಕ ಸೋಂಕು ಪ್ರಕರಣಗಳು ದಾಖಲಾಗಿವೆ.

ದೆಹಲಿಯಲ್ಲಿ ಕೊವಿಡ್-19 ಪರಿಸ್ಥಿತಿ ಸುಧಾರಣೆ, 26 ಸಾವಿರ ಸಕ್ರಿಯ ಪ್ರಕರಣಗಳು ಮಾತ್ರ ಇವೆ: ಸಿಎಂ ಕೇಜ್ರಿವಾಲ್
ಮಾರಕ ಕೊರೋನಾ ವೈರಸ್ ಸಾಂಕ್ರಾಮಿಕಕ್ಕೆ ತುತ್ತಾಗಿದ್ದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪರಿಸ್ಥಿತಿ ಈಗ ಸಾಕಷ್ಟು ಸುಧಾರಿಸುತ್ತಿದ್ದು, ರಾಜ್ಯದಲ್ಲಿ ಪ್ರಸ್ತುತ 26 ಸಾವಿರ ಸಕ್ರಿಯ ಪ್ರಕರಣಗಳು ಮಾತ್ರ ಇವೆ ಎಂದು ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

'ದೇಹವೆಂಬ ಗುಡಿಗೆ ವೈದ್ಯರೇ ದೇವರು': ವೈದ್ಯರ ದಿನಾಚರಣೆ ನಿಮಿತ್ತ ಸಚಿವ ಡಾ. ಸುಧಾಕರ್ ಹಾರೈಕೆ
ದೇಹವೆಂಬ ಗುಡಿಗೆ ವೈದ್ಯರೇ ದೇವರು ಎಂದು ಹೇಳುವ ಮೂಲಕ ವೈದ್ಯರ ದಿನಾಚರಣೆ ನಿಮಿತ್ತ ಸಚಿವ ಡಾ.ಕೆ ಸುಧಾಕರ್ ಸಮಸ್ತ ವೈದ್ಯರಿಗೆ ಶುಭ ಕೋರಿದ್ದಾರೆ.

ಮಂಗಳೂರಿನಲ್ಲಿ ಮತ್ತಿಬ್ಬರು ಕೊರೋನಾ ಸೋಂಕಿನಿಂದ ಸಾವು
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ ಇಂದು ಬೆಳಿಗ್ಗೆ ಮತ್ತಿಬ್ಬರು ಸಾವನ್ನಪ್ಪಿದ್ದಾರೆ.

ವೈದ್ಯರ ನಿಸ್ವಾರ್ಥ ಸೇವೆಯನ್ನು ಎಷ್ಟು ಕೊಂಡಾಡಿದರೂ ಕಡಿಮೆಯೇ: ಬಿ. ಶ್ರೀರಾಮುಲು
ತಮ್ಮ ಪ್ರಾಣ ಲೆಕ್ಕಿಸದೇ ಕೊರೋನಾ ಸಂಕಷ್ಟ ಸಂದರ್ಭದಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯಕೀಯ ಸಮೂಹಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಶುಭ ಕೋರಿದ್ದಾರೆ.

ಕ್ವಾರಂಟೈನ್ ನಿಯಮ ಉಲ್ಲಂಘನೆ: ಮೂವರ ವಿರುದ್ಧ ದೂರು
ರಾಜ್ಯದಲ್ಲಿ ದಿನದಂದ ದಿನಕ್ಕೆ ಕೊರೊನಾ ಸೋಂಕು ಹೆಚ್ಚು ಜನರನ್ನು ವಕ್ಕರಿಸಿರುತ್ತಿದ್ದು, ಜನ ಬೆಚ್ಚಿ ಬಿದ್ದಿದ್ದಾರೆ. ಈ ನಡುವೆ ಕ್ವಾರಂಟೈನ್ ನಲ್ಲಿ ಇರಬೇಕಾದವರು ಸರ್ಕಾರದ ನಿಯಮ ಗಾಳಿಗೆ ತೂರಿ ಹೊರಗಡೆ ಅಡ್ಡಾಡುತ್ತಿರುವುದು ಅಧಿಕಾರಿಗಳಿಗೆ ಮತ್ತೊಂದು ತಲೆನೋವಾಗಿ ಪರಿಣಮಿಸಿದೆ.

