'ದೇಹವೆಂಬ ಗುಡಿಗೆ ವೈದ್ಯರೇ ದೇವರು': ವೈದ್ಯರ ದಿನಾಚರಣೆ ನಿಮಿತ್ತ ಸಚಿವ ಡಾ. ಸುಧಾಕರ್ ಹಾರೈಕೆ
ದೇಹವೆಂಬ ಗುಡಿಗೆ ವೈದ್ಯರೇ ದೇವರು ಎಂದು ಹೇಳುವ ಮೂಲಕ ವೈದ್ಯರ ದಿನಾಚರಣೆ ನಿಮಿತ್ತ ಸಚಿವ ಡಾ.ಕೆ ಸುಧಾಕರ್ ಸಮಸ್ತ ವೈದ್ಯರಿಗೆ ಶುಭ ಕೋರಿದ್ದಾರೆ.

ಬೆಂಗಳುರು: ದೇಹವೆಂಬ ಗುಡಿಗೆ ವೈದ್ಯರೇ ದೇವರು ಎಂದು ಹೇಳುವ ಮೂಲಕ ವೈದ್ಯರ ದಿನಾಚರಣೆ ನಿಮಿತ್ತ ಸಚಿವ ಡಾ.ಕೆ ಸುಧಾಕರ್ ಸಮಸ್ತ ವೈದ್ಯರಿಗೆ ಶುಭ ಕೋರಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ದೇಹವೆಂಬ ಗುಡಿಗೆ ವೈದ್ಯರೇ ದೇವರು" ಎನ್ನಲಾಗುತ್ತದೆ. ಪ್ರಸ್ತುತ ಈ ಸಾಂಕ್ರಾಮಿಕದ ಸಮಯದಲ್ಲಿ ನಮ್ಮ ವೈದ್ಯರುಗಳ ಅಪಾರ ಪರಿಶ್ರಮ, ಸೇವೆ, ನಿಷ್ಟೆಗಳನ್ನು ನಾವು ಕಾಣುತ್ತಿದ್ದೇವೆ. ರೋಗಿಗಳಿಗೆ ಚಿಕಿತ್ಸೆ ನೀಡಲು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟವರು ಇವರು! ಈ ವೈದ್ಯರ ದಿನದಂದು ಎಲ್ಲ ವೈದ್ಯರಿಗೆ ಒಂದು ಹೃತ್ಪೂರ್ವಕ ಧನ್ಯವಾದ ಹೇಳೋಣ ಎಂದು ಟ್ವೀಟ್ ಮಾಡಿದ್ದಾರೆ.
ಕೆ ಸುಧಾಕರ್ ಅವರು, ಇತ್ತೀಚೆಗಷ್ಟೇ ಹೋಮ್ ಕ್ವಾರಂಟೈನ್ ಮುಕ್ತಾಯಗೊಳಿಸಿ ಕರ್ತವ್ಯಕ್ಕೆ ವಾಪಸ್ ಆಗಿದ್ದಾರೆ. ಸುಧಾಕರ್ ಅವರ ಕುಟುಂಬಸ್ಥರಿಗೆ ಕೊರೋನಾ ಸೋಂಕು ಕಂಡುಬಂದಿತ್ತು. ಹೀಗಾಗಿ ಸುಧಾಕರ್ ಅವರು ಸ್ವಯಂ ನಿರ್ಬಂಧಕ್ಕೊಳಗಾಗಿದ್ದರು. ಸತತ ಐದು ದಿನಗಳ ಬಳಿಕ ಮತ್ತೆ ಕೋವಿಡ್-19 ಟೆಸ್ಟ್ ಒಳಗಾಗಿದ್ದ ಅವರ 2 ವರದಿಗಳು ನೆಗೆಟಿವ್ ಬಂದಿತ್ತು. ಹೀಗಾಗಿ ಸುಧಾಕರ್ ಅವರು ಮತ್ತೆ ಕರ್ತವ್ಯಕ್ಕೆ ವಾಪಸ್ ಆಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


