Corona Virus

ಪುಣೆಯಲ್ಲಿ ಮತ್ತೆ 5 ಕೇಸು ಪತ್ತೆ: ಮಹಾರಾಷ್ಟ್ರದಲ್ಲಿ ಕೊರೋನಾ ಪೀಡಿತರ ಸಂಖ್ಯೆ 31ಕ್ಕೇರಿಕೆ
ಸ್ಪೈನ್ ನಿಂದ ಆಗಮಿಸಿದ ಜೈಪುರ ಮೂಲದ ವ್ಯಕ್ತಿಯಲ್ಲಿ ಕೊರೋನಾ ಸೋಂಕು ಪತ್ತೆಯಾದ ನಂತರ ಭಾರತದಲ್ಲಿ ಕೊರೋನಾ ಪೀಡಿತರ ಸಂಖ್ಯೆ ಭಾನುವಾರ 105ಕ್ಕೇರಿದೆ. ಮಹಾರಾಷ್ಟ್ರ ರಾಜ್ಯವೊಂದರಲ್ಲಿಯೇ 9 ಕೊರೋನಾ ವೈರಸ್ ಸೋಂಕು ತಗುಲಿದವರು ಇಂದು ದೃಢಪಟ್ಟಿದ್ದು ಇಲ್ಲಿ ಒಟ್ಟು ಸೋಂಕಿತರ ಸಂಖ್ಯೆ 31ಕ್ಕೇರಿದ್ದು ಕೇರಳವನ್ನು ಹಿಂದಿಕ್ಕಿದೆ.

ಕೊರೋನಾ ಭೀತಿ: ಮಾ.23ರವರೆಗೆ ರಾಜ್ಯದ ಎಲ್ಲ ಮೃಗಾಲಯಗಳು ಬಂದ್
ಕೊರೋನಾ ಸೋಂಕಿನ ಬಿಸಿ ಈಗ ಮೃಗಾಲಯಗಳಿಗೂ ತಟ್ಟಿದೆ. ಸೋಂಕು ಹರಡುವಿಕೆ ತಡೆಯುವ ಮುನ್ನೆಚ್ಚರಿಕಾ ಕ್ರಮವಾಗಿ ರಾಜ್ಯದ ಎಲ್ಲ ಮೃಗಾಲಯಗಳನ್ನು ಇಂದಿನಿಂದ ಮಾರ್ಚ್ 23ರವರೆಗೆ ಮುಚ್ಚಲು ಕರ್ನಾಟಕ ಮೃಗಾಲಯ ಪ್ರಾಧಿಕಾರ ನಿರ್ಧರಿಸಿದೆ.

ಸ್ಪೈನ್ ಪ್ರಧಾನಿ ಪತ್ನಿಗೆ ಕೊರೋನಾ ವೈರಸ್!
ಖ್ಯಾತನಾಮರ ಕೊರೋನಾ ವೈರಸ್ ಸೋಂಕು ಪಟ್ಟಿ ಬೆಳೆಯುತ್ತಾ ಹೋಗುತ್ತಿದೆ. ಸ್ಪೈನ್ ಪ್ರಧಾನಿ ಪೆಡ್ರೊ ಸ್ಯಾಂಚೆಝ್ ಅವರ ಪತ್ನಿ ಬೆಗೊನಾ ಗೊಮೆಜ್ ಅವರಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ.

ಹುಟ್ಟುಹಬ್ಬ ರದ್ದು, ಅಭಿಮಾನಿಗಳ ಸುರಕ್ಷತೆಯೇ ಉಡುಗೊರೆ ಎಂದ ಅಪ್ಪು
ಕೊರೋನಾ ವೈರಸ್ ನಿಯಂತ್ರಿಸಲು ಸರ್ಕಾರಕ್ಕೆ ಕೈಜೋಡಿಸುವ ಸಲುವಾಗಿ ಖ್ಯಾತ ನಟ ಪುನೀತ್ ರಾಜ್ಕುಮಾರ್ ತಮ್ಮ 45ನೇ ಹುಟ್ಟುಹಬ್ಬ ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದಾರೆ.

ವಿದೇಶಗಳಿಂದ ಕರ್ನಾಟಕಕ್ಕೆ ಬರುತ್ತೀರಾ? 14 ದಿನ ಪ್ರತ್ಯೇಕವಾಗಿ ಇರಬೇಕು
ರಾಜ್ಯಕ್ಕೆ ವಿದೇಶಗಳಿಂದ ಬರುವ ಪ್ರಯಾಣಿಕರನ್ನು 14 ದಿನಗಳ ಕಾಲ ಪ್ರತ್ಯೇಕವಾಗಿಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಪ್ರತ್ಯೇಕ ವಾಸದ ಕೋಣೆಯಲ್ಲಿ ಕೊರೋನಾ ಶಂಕಿತರಲ್ಲದ ಪ್ರಯಾಣಿಕರನ್ನು ಸಹ ಇರಿಸಲಾಗುತ್ತದೆ.

ಸುಪ್ರೀಂ, ದೆಹಲಿ ಹೈಕೋರ್ಟ್ ಗೂ ತಟ್ಟಿದ 'ಕೊರೋನಾ'ಬಿಸಿ: ಮಾರ್ಚ್ 16ರಿಂದ ತುರ್ತು ವಿಚಾರಣೆ ಮಾತ್ರ!
ಕೊರೋನಾ ವೈರಸ್ ಭೀತಿ ಸುಪ್ರೀಂ ಕೋರ್ಟ್ ವರೆಗೆ ತಲುಪಿದೆ. ಇದೇ 16ರಿಂದ ತುರ್ತು ವಿಚಾರಣೆ ಮಾತ್ರ ನಡೆಸಲಿದ್ದು ನ್ಯಾಯಾಲಯದ ಕೊಠಡಿಯೊಳಗೆ ಸಂಬಂಧಪಟ್ಟ ವಕೀಲರು ಬಿಟ್ಟರೆ ಬೇರೆ ಯಾರನ್ನೂ ಒಳಗೆ ಬಿಡುವುದಿಲ್ಲ.

ಕೊರೋನಾ ಎಫೆಕ್ಟ್: ಚಿನ್ನ, ಬೆಳ್ಳಿ ದರದಲ್ಲಿ ಭಾರಿ ಇಳಿಕೆ!
ಕೊರೋನಾ ವೈರಸ್ ಪ್ರಭಾವ ಷೇರುಮಾರುಕಟ್ಟೆಯಷ್ಟೇ ಅಲ್ಲದೇ ಹಳದಿ ಲೋಹದ ಮೇಲೂ ಬೀರಿದೆ.

'ಕೊರೋನಾ' ಸೋಂಕು: ಸಾಮಾನ್ಯರಿಗಿಂತ ವಿಐಪಿಗಳಿಗೇ ಹೆಚ್ಚು ಆತಂಕ!, ಸಿಎಂ,ಸಚಿವರುಗಳಿಗೇನಿದೆ ರಕ್ಷಣೆ?
ಕೊರೋನಾ ಸಾಂಕ್ರಾಮಿಕ ಸೋಂಕು ತಡೆಗೆ ಶಾಲಾ ಕಾಲೇಜುಗಳು, ಮಾಲ್ ಗಳು, ಸಿನೆಮಾ ಥಿಯೇಟರ್ ಗಳು, ಪಬ್, ಕ್ಲಬ್ ಗಳನ್ನು ಒಂದು ವಾರದ ಮಟ್ಟಿಗೆ ಬಂದ್ ಮಾಡಿ ಮುಖ್ಯಮಂತ್ರಿ ಆದೇಶ ಹೊರಡಿಸಿರಬಹುದು. ಆದರೆ ಸ್ವತಃ ಸಿಎಂ ಮತ್ತು ಅವರ ಸಂಪುಟ ಸಚಿವರುಗಳು ಅಪಾಯಕಾರಿ ಸನ್ನಿವೇಶದಲ್ಲಿರುತ್ತಾರೆ.

'ಕೊರೋನಾ ವೈರಸ್' ಶಂಕೆ: ಬೆಂಗಳೂರಿನ ಕಚೇರಿಯೊಂದನ್ನು ಸ್ಥಳಾಂತರಿಸಿದ ಇನ್ಫೋಸಿಸ್
ಉದ್ಯೋಗಿಯೊಬ್ಬರಲ್ಲಿ ಕೊರೋನಾ ವೈರಾಣು ಸೋಂಕು ತಗುಲಿರುವ ಶಂಕೆ ಹಿನ್ನೆಲೆಯಲ್ಲಿ ಇನ್ಫೋಸಿಸ್ ಸಂಸ್ಥೆ ತನ್ನ ಕಚೇರಿಯೊಂದನ್ನು ಸ್ಥಳಾಂತರ ಮಾಡಿದೆ.

