Corona Virus

ತೆಲಂಗಾಣದಲ್ಲಿ ಕೊರೋನಾ 2ನೇ ಸ್ಟೇಜ್: ಸೋಂಕಿನ ವ್ಯಕ್ತಿಯಿಂದ ಮತ್ತೊಬ್ಬನಿಗೆ ಹರಡಿದ ಮೊದಲ ಪ್ರಕರಣ ಪತ್ತೆ, ಆಂತಕ ಸೃಷ್ಠಿ!
ಕೊರೋನಾ ವೈರಸ್ ಸೋಂಕಿತ ವ್ಯಕ್ತಿಯಿಂದ ಸ್ಥಳೀಯ ವ್ಯಕ್ತಿಯೊರ್ವನಿಗೆ ಸೋಂಕು ಹರಡಿದ್ದು ತೆಲಂಗಾಣದಲ್ಲಿ ಮೊದಲ ಪ್ರಕರಣ ಪತ್ತೆಯಾಗಿದೆ.

ಗದಗ ಜಿಲ್ಲೆಯ ಈ ಗ್ರಾಮ ಒಂದು ವಾರ ಸಂಪೂರ್ಣ ಸ್ತಬ್ಧ: ಸ್ವಯಂ ಕರ್ಫ್ಯೂ ಹಾಕಿಕೊಂಡ ಗ್ರಾಮಸ್ಥರು!
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಜನತಾ ಕರ್ಫ್ಯೂ ಘೋಷಿಸುವ ಮುನ್ನವೇ ಗದಗ ಜಿಲ್ಲೆಯ ಗ್ರಾಮವೊಂದು ಈಗಾಗಲೇ ಬಹುತೇಕ ಬಂದ್ ಆಗಿದೆ.

ಕರ್ನಾಟಕದಲ್ಲಿ ಇಂದು ಮತ್ತೆ 3 ಕೊರೋನಾ ಸೋಂಕು ದೃಢ: ಕೊವಿಡ್-19 ಸೋಂಕಿತರ ಸಂಖ್ಯೆ 18ಕ್ಕೆ ಏರಿಕೆ
ಕರ್ನಾಟಕದಲ್ಲಿ ಶನಿವಾರ ಕೊರೋನಾ ವೈರಸ್ ಸೋಂಕಿತ 3 ಹೊಸ ಪ್ರಕರಣಗಳು ವರದಿಯಾಗಿದ್ದು, ಈ ಮೂಲಕ ಕೊರೋನಾ ಸೋಂಕಿತರ ಸಂಖ್ಯೆ 18ಕ್ಕೆ ಏರಿದೆ.

ಚೌಡಯ್ಯ ಮೆಮೋರಿಯಲ್ ಹಾಲ್ ನ ಸಂಗೀತ ಕಾರ್ಯಕ್ರಮಕ್ಕೆ ಬಂದಿದ್ದ ಪ್ರೇಕ್ಷಕನಲ್ಲಿ ಕೊರೋನಾ ವೈರಸ್!
ಕಳೆದ ಮಾರ್ಚ್ 12ರಂದು ನಗರದ ಚೌಡಯ್ಯ ಮೆಮೋರಿಯಲ್ ಹಾಲ್ ನಲ್ಲಿ ಜಾನಪದ ಸಂಗೀತಗಾರ ಮಿರ್ ಮುಕ್ತಿಯಾರ್ ಅಲಿ ಅವರ ಸಂಗೀತ ಕಾರ್ಯಕ್ರಮ ವೀಕ್ಷಿಸಲು ಬಂದಿದ್ದ ಪ್ರೇಕ್ಷಕರೊಬ್ಬರಿಗೆ ಕೊರೋನಾ ಸೋಂಕು ಪತ್ತೆಯಾಗಿದೆ.

ಕನಿಕಾ ಕಪೂರ್ ಗೆ ಕೊರೋನಾ ಸೋಂಕು: ರಾಷ್ಟ್ರಪತಿ ಭವನ, ಸಂಸತ್ತಿನವರೆಗೆ ತಟ್ಟಿದ ಭೀತಿ, ರಾಷ್ಟ್ರಪತಿಗಳಿಗೆ ತಪಾಸಣೆ
ಮಾರಕ ಕೊರೋನಾ ವೈರಸ್ ಸೋಂಕಿನ ಬಿಸಿ ಇದೀಗ ರಾಷ್ಟ್ರಪತಿ ಭವನ ಮತ್ತು ಸಂಸತ್ತಿಗೂ ತಟ್ಟಿದೆ. ಅದಕ್ಕೆ ಕಾರಣ ಬಾಲಿವುಡ್ ಗಾಯಕಿ ಕನಿಕಾ ಕಪೂರ್ ಗೆ ಕೊರೋನಾ ಸೋಂಕು ಕಾಣಿಸಿಕೊಂಡಿರುವುದು.

ಪ್ರಧಾನಿ ಭಾಷಣ ನಂತರ ಮಾರುಕಟ್ಟೆಗಳಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ; ಲೋಕಸಭೆಯಲ್ಲಿ ಅಧೀರ್ ರಂಜನ್ ಆರೋಪ
ಪ್ರಧಾನಿ ನರೇಂದ್ರ ಮೋದಿ ಕೊರೊನಾ ವೈರಸ್ ಸಂಬಂಧ ದೇಶವನ್ನು ಉದ್ದೇಶಿಸಿ ಮಾಡಿದ ಭಾಷಣದ ನಂತರ ದೇಶದಲ್ಲಿ ಹಣದುಬ್ಬರ ಹೆಚ್ಚಳಗೊಂಡು ಮಾರುಕಟ್ಟೆಯಿಂದ ಹಲವು ಅಗತ್ಯವಸ್ತುಗಳು ಕಣ್ಮರೆಯಾಗಿವೆ ಎಂದು ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಶುಕ್ರವಾರ ಲೋಕಸಭೆಯಲ್ಲಿ ದೂರಿದ್ದಾರೆ.

ಕೊರೋನಾ ಭೀತಿಯಲ್ಲೂ ಲಾಭದ ಆಸೆ: ಸಿಸಿಬಿಯಿಂದ 50 ಲಕ್ಷ ರೂ ಮೌಲ್ಯದ ನಕಲಿ ಸ್ಯಾನಿಟೈಸರ್ಸ್ ವಶ!
ಇಡೀ ದೇಶವೇ ಕೊರೋನಾ ಭೀತಿಯಲ್ಲಿ ಮುಳುಗಿರುವಾಗ ಇತ್ತ ಕೆಲ ದುಷ್ಕರ್ಮಿಗಳು ಮಾತ್ರ ಈ ಪರಿಸ್ಥಿತಿಯ ಲಾಭ ಪಡೆದು ನಕಲಿ ಸ್ಯಾನಿಟೈಸರ್ಸ್ ತಯಾರಿಸಿ ಮಾರಾಟ ಮಾಡಲು ಮುಂದಾಗಿದ್ದಾರೆ.

ಪ್ರಧಾನಮಂತ್ರಿ ಭಾಷಣದಲ್ಲಿ ಕೊರೋನಾ ವೈರಸ್ ನಿಯಂತ್ರಣಕ್ಕೆ ಯಾವುದೇ ಪ್ಯಾಕೇಜ್ ಇಲ್ಲ: ಸೀತಾರಾಂ ಯೆಚೂರಿ ಕಿಡಿ
ಇಡೀ ದೇಶವೇ ಮಾರಕ ಕೊರೋನಾ ವೈರಸ್ ನಿಂದಾಗಿ ಬಳಲುತ್ತಿದ್ದು, ಇಂತಹ ಸಂದರ್ಭದಲ್ಲಿ ಭಾಷಣ ಮಾಡಿದ್ದ ಪ್ರಧಾನಿ ಮೋದಿ ವೈರಸ್ ನಿಯಂತ್ರಣಕ್ಕೆ ಯಾವುದೇ ಪ್ಯಾಕೇಜ್ ಘೋಷಣೆ ಮಾಡಿಲ್ಲ ಎಂದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಕಿಡಿಕಾರಿದ್ದಾರೆ.

ಕೊರೋನಾ ವೈರಸ್: ಭಾರತದ ಶೇ.50ಕ್ಕೂ ಹೆಚ್ಚು ಕಂಪೆನಿಗಳ ಕಾರ್ಯನಿರ್ವಹಣೆ ಮೇಲೆ ವ್ಯತಿರಿಕ್ತ ಪರಿಣಾಮ
ಕೊರೊನಾ ವೈರಸ್ ನಿಂದಾಗಿ ಶೇಕಡಾ 50ಕ್ಕಿಂತಲೂ ಹೆಚ್ಚು ಭಾರತೀಯ ಕಂಪೆನಿಗಳ ಕಾರ್ಯನಿರ್ವಹಣೆ ಮೇಲೆ ಪರಿಣಾಮ ಬೀರಿದ್ದು ಶೇಕಡಾ 80ಕ್ಕೂ ಹೆಚ್ಚು ಕಂಪೆನಿಗಳಲ್ಲಿ ನಗದು ವಹಿವಾಟು ಹರಿಯುವಿಕೆ ಇಳಿಕೆಯಾಗಿದೆ ಎಂದು ಸಮೀಕ್ಷೆಯೊಂದು ಹೇಳಿದೆ.

