Corona Virus

ಸರ್ಕಾರಿ ನೌಕರರಿಗೆ ರಜೆ ಘೋಷಿಸಿದ ಯಡಿಯೂರಪ್ಪ: ಷರತ್ತುಗಳು ಅನ್ವಯ
ಕೋವಿಡ್ 19 ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮಾದರಿಯಲ್ಲಿ ರಾಜ್ಯ ಸರ್ಕಾರದಲ್ಲೂ ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರು ಸಲ್ಲಿಸಿದ್ದ ಮನವಿಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸ್ಪಂದಿಸಿ, ರಜೆ ಮಂಜೂರು ಮಾಡಿದ್ದಾರೆ

ಕೊರೋನ ಭೀತಿ: ನಾಳೆಯಿಂದ ಮಾ.31ರವರೆಗೆ ದೇಶೀಯ ವಿಮಾನ ಸೇವೆಗಳು ಲಾಕ್ ಡೌನ್
ಕೊರೋನಾವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಮತ್ತೊಂದು ಮಹತ್ವ ಹೆಜ್ಜೆ ಇಟ್ಟಿದ್ದು, ನಾಳೆಯಿಂದ ಎಲ್ಲಾ ದೇಶೀಯ ವಿಮಾನ ಸೇವೆ ರದ್ದುಗೊಳಿಸಲಿದೆ.

ಕರ್ನಾಟಕದಲ್ಲಿ ಕೊರೋನಾ ರೌದ್ರಾವತಾರ: ಇಂದು ಒಂದೇ ದಿನ 7 ಮಂದಿಗೆ ಸೋಂಕು, ರಾಜ್ಯದಲ್ಲಿ 33 ಪ್ರಕರಣ!
ರಾಜ್ಯದಲ್ಲಿ ಕೊರೋನಾ ವೈರಸ್ ಸೋಂಕು ತನ್ನ ಕದಂಬಬಾಹುವನ್ನು ಚಾಚುತ್ತಿದ್ದು ಇಂದು ಒಂದೇ ದಿನ 7 ಪ್ರಕರಣಗಳು ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆ 33ಕ್ಕೆ ಏರಿಕೆಯಾಗಿದೆ.

ಚರ್ಚೆಗೆ ಅವಕಾಶ ನೀಡದ ರಾಕ್ಷಸ ಸರ್ಕಾರ ಇದು: ಸ್ಪೀಕರ್ ವಿರುದ್ಧ ಸಿದ್ದರಾಮಯ್ಯ ಕಿಡಿ
ಕೊರೋನಾ ಸೋಂಕು ಹರಡುವ ಹಿನ್ನೆಲೆಯಲ್ಲಿ ಒಂಭತ್ತು ಜಿಲ್ಲೆಗಳಲ್ಲಿ ಲಾಕ್‌ಡೌನ್ ಮಾಡಲಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಹೇಳುತ್ತಾರೆ. ಮತ್ತೊಂದು ಕಡೆ ಸಾರಿಗೆ ಬಸ್ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ.

ಇಟಲಿಯಲ್ಲಿ ಹೆಣಗಳ ರಾಶಿ: ಕೊರೋನಾಗೆ ಒಂದೇ ದಿನ 651 ಬಲಿ, ಜಗತ್ತಿನಾದ್ಯಂತ 14,573 ಸಾವು!
ಕೊರೋನಾ ರೌದ್ರಾವತಾರಕ್ಕೆ ಇಟಲಿ ಅಕ್ಷರಶಃ ತತ್ತರಿಸಿದ್ದು ಭಾನುವಾರ ಬರೋಬ್ಬರಿ 651 ಮಂದಿ ಬಲಿಯಾಗಿದ್ದಾರೆ. ಇದರೊಂದಿಗೆ ದೇಶದಲ್ಲಿ ಸೋಂಕಿಗೆ ಬಲಿಯಾದವರ ಸಂಖ್ಯೆ 5,476ಕ್ಕೆ ಏರಿಕೆಯಾಗಿದೆ.

ಅಮೆರಿಕವನ್ನು ನಡುಗಿಸುತ್ತಿರುವ ಕೊರೋನಾ: ಸೆನೆಟರ್ ರಾಂಡ್ ಪೌಲ್ ಗೆ ಸೋಂಕು!
ಜಗತ್ತಿನ ದೊಡ್ಡಣ್ಣ ಎಂದು ಕರೆಸಿಕೊಳ್ಳುವ ಅಮೆರಿಕವನ್ನೇ ಕೊರೋನಾ ವೈರಸ್ ನಡುಗಿಸುತ್ತಿದ್ದು ಸೆನೆಟರ್ ರಾಂಡ್ ಪೌಲ್ ಸೋಂಕಿಗೆ ತುತ್ತಾಗಿದ್ದಾರೆ.

ಪ್ರಧಾನಿ ಮೋದಿ ಕರೆಗೆ ಚಿಂದಿ ಆಯುವವನ ಮನ ಮಿಡಿಯುವ ಚಪ್ಪಾಳೆ, ವಿಡಿಯೋ!
ಪ್ರಧಾನಿ ನರೇಂದ್ರ ಮೋದಿ ಅವರು ಕೊರೋನಾ ವೈರಸ್ ವಿರುದ್ಧದ ಹೋರಾಟಕ್ಕೆ ಮುಂದಡಿಯಾಗಿ ಜನತಾ ಕರ್ಫ್ಯೂಗೆ ಕರೆ ನೀಡಿದ್ದು ಕಂಡು ಕೇಳರಿಯದ ರೀತಿಯಲ್ಲಿ ದೇಶದ ಜನತೆ ಸ್ಪಂದನೆ ನೀಡಿದ್ದರು.

ಜನತಾ ಕರ್ಫ್ಯೂ ಬೆನ್ನಲ್ಲೇ ದೇಶದ ಜನತೆಗೆ ಆರ್. ಅಶ್ವಿನ್ ಮತ್ತು ಇರ್ಫಾನ್ ಹೇಳಿದ್ದೇನು?
ದೇಶದಲ್ಲಿ ಕೊರೊನಾ ವೈರಸ್ ವಿರುದ್ಧ ಹೋರಾಡಿದ ಜನತಾ ಕರ್ಫ್ಯೂ ಅನ್ನು ಭಾರತದ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಶ್ಲಾಘಿಸಿದ್ದು, ಹೀಗೆ ಜಾಗರುಕತೆಯನ್ನು ಮುಂದುವರಿಸಬೇಕು ಎಂದು ಹೇಳಿದ್ದಾರೆ.

ಕ್ವಾರಂಟೈನ್ ತಪ್ಪಿಸಿಕೊಳ್ಳಲು ಪ್ರಯಾಣಿಕರ ಹೊಸ ತಂತ್ರ, ವಿಮಾನ ಲ್ಯಾಂಡಿಂಗೂ ಮೊದಲೇ ಮಾತ್ರೆ ಸೇವನೆ: ಆಘಾತಕಾರಿ ಮಾಹಿತಿ!
ವಿಶ್ವಾದ್ಯಂತ ಮರಣ ಮೃದಂಗ ಭಾರಿಸುತ್ತಿರುವ ಕೊರೋನಾ ವೈರಸ್ ನಿಂದಾಗಿ ವಿಶ್ವದ 150 ರಾಷ್ಟ್ರಗಳು ತತ್ತರಿಸುತ್ತಿದ್ದು, ಸೋಂಕು ತಡೆಗೆ ಹಲವು ಕ್ರಮಗಳನ್ನು ಕೈಗೊಳ್ಳುತ್ತಿವೆ. ಆದರೆ ಸರ್ಕಾರದ ಈ ಎಲ್ಲ ಪ್ರಯತ್ನಗಳೂ ನಿರ್ಲಕ್ಷಿತ ಜನರಿಂದಾಗಿ ನೀರಿನಲ್ಲಿ ಹೋಮ ಮಾಡಿದಂತಾಗುತ್ತಿದೆ.

