CM

ನಮಗೂ ಅನುಮತಿ ನೀಡಿ: ಸರ್ಕಾರಕ್ಕೆ ಮಾಲ್, ಪ್ರವಾಸೋದ್ಯಮ ಸಂಘ ಪದಾಧಿಕಾರಿಗಳಿಂದ ಮನವಿ
ಮಾಲ್, ಹೋಟೆಲ್ ಸೇರಿದಂತೆ ಪ್ರವಾಸಿ ವಲಯಗಳು ಪುನರಾರಂಭಿಸಲು ಅನುಮತಿ ನೀಡುವಂತೆ ಅಖಿಲ ಭಾರತ ಶಾಪಿಂಗ್ ಮಾಲ್'ಗಳ ಸಂಘ ಹಾಗೂ ಹೋಟೆಲ್ ಮತ್ತು ರೆಸ್ಟೋರೆಂಟ್ ಸಂಘಗಳ ಪದಾಧಿಕಾರಿಗಳು ಪ್ರತ್ಯೇಕವಾಗಿ ಮಂಗಳವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದವು.

ಪಾರ್ಸೆಲ್ ಸೇವೆ ರದ್ದುಗೊಳಿಸುವುದಾಗಿ ಸರ್ಕಾರಕ್ಕೆ ಹೋಟೆಲ್ ಮಾಲೀಕರ ಬೆದರಿಕೆ
ಬೀದಿ ಬದಿ ವ್ಯಾಪಾರಕ್ಕೆ ಅವಕಾಶ ನೀಡಿರುವ ಸರಕಾರ ಲಕ್ಷಾಂತರ ರೂ. ಸಾಲ ಮಾಡಿ ನಡೆಸುತ್ತಿರುವ ಹೋಟೆಲ್‌ಗಳಿಗೆ ಅನುಮತಿ ನೀಡಿಲ್ಲ. ಹಾಗಾಗಿ, ಹೋಟೆಲ್‌ಗಳನ್ನು ಸಂಪೂರ್ಣವಾಗಿ ಬಂದ್ ಮಾಡಿ ಬೀದಿ ಬದಿ ಹೋಟೆಲ್ ನಡೆಸುವುದಾಗಿ ಹೇಳಿದ್ದಾರೆ,

ರಂಜಾನ್ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ನೀಡಿ: ಸಿಎಂ ಗೆ ಶಾಸಕ ಹ್ಯಾರಿಸ್ ಮನವಿ
ರಂಜಾನ್ ನಿಮಿತ್ತ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ಕೋರಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಶಾಸಕ ಹ್ಯಾರಿ ಪತ್ರ ಬರೆದಿದ್ದಾರೆ. ಮುಸ್ಲಿಂ ಬಾಂಧವರು ಚಂದ್ರ ದರ್ಶನ ನಂತರ ಮೇ 24 ಅಥವಾ 25ರಂದು ಈದುರ್ ಫಿತರ್/ ರಂಜಾನ್ ಹಬ್ಬವನ್ನು ಆಚರಿಸುತ್ತಿದ್ದಾರೆ.

ನಮಗೂ ಕೆಲಸ ಮಾಡಲು ಅವಕಾಶ ಕೊಡಿ: ಮುಖ್ಯಮಂತ್ರಿಗಳಿಗೆ ಅರ್ಚಕರ ಮನವಿ
ಕಾಯಕವೇ ಕೈಲಾಸ ಎಂಬ ಮಾತು ಅರ್ಚಕರ ವಿಷಯದಲ್ಲಿ ಅಕ್ಷರಶಃ ಸತ್ಯ, ತಿಂಗಳುಗಳಿಂದ ದೇವಾಲಯಗಳು ಬಂದ್ ಆಗಿರುವುದರಿಂದ ತಮ್ಮ ಜೀವನ ನಿರ್ವಹಣೆ ಕಷ್ಟವಾಗಿದೆ ಹೀಗಾಗಿ ಮತ್ತೆ ದೇವಾಲಯಗಳನ್ನು ಪುನಾರಂಭ ಮಾಡಬೇಕೆಂದು ಅರ್ಚಕರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಟೋಲ್ ಶುಲ್ಕ ಮನ್ನಾ ಮಾಡಿ: ಸಿಎಂ ಯಡಿಯೂರಪ್ಪಗೆ ರೈತರ ಮನವಿ
ಲಾಕ್‌ಡೌನ್ ಪರಿಣಾಮವಾಗಿ ಈಗಾಗಲೇ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಮೇಲಾಗಿ ಅವರ ಉತ್ಪನ್ನಗಳಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ. ಸಾಗಾಣಿಕೆಯ ಅಡಚಣೆಗಳಿಂದಾಗಿ ಬೇಕಾ ಬಿಟ್ಟಿ ಬೆಲೆಗಳಿಗೆ ಉತ್ಪನ್ನ ಮಾರಾಟ ಮಾಡುವಂತಾಗಿದೆ ಹಾಗಾಗಿ ಟೋಲ್ ಶುಲ್ಕ ಮನ್ನಾ ಮಾಡಬೇಕು ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಗಳು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.

ಪೋಲೀಸರು, ಮಾಧ್ಯಮ, ಪೌರಕಾರ್ಮಿಕರಿಗೆ ವಿಶೇಷ ಪ್ಯಾಕೇಜ್ ಘೋಷಿಸಿ: ಯಡಿಯೂರಪ್ಪಗೆ ಎಚ್.ಕೆ. ಪಾಟೀಲ್ ಪತ್ರ
ಕೊರೋನಾ ವಿರುದ್ಧ ರಾಜ್ಯದಲ್ಲಿ ಪ್ರಾಣತ್ಯಾಗಕ್ಕೂ ಸಿದ್ಧರಾಗಿ ಹೋರಾಡುತ್ತಿರುವ ವೈದ್ಯರು, ನರ್ಸ್‌ಗಳು, ಆರೋಗ್ಯ ಕಾರ್ಯಕರ್ತರು, ರಕ್ಷಣಾ ವ್ಯವಸ್ಥೆಯಲ್ಲಿರುವ ಪೊಲೀಸರು, ಮಾಧ್ಯಮದವರು, ಸ್ವಚ್ಛತಾ ವ್ಯವಸ್ಥೆಯಲ್ಲಿರುವ ಪೌರ ಕಾರ್ಮಿಕರಿಗೆಲ್ಲ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಕಾಂಗ್ರೆಸ್ ಹಿರಿಯ ಶಾಸಕ ಎಚ್.ಕೆ.ಪಾಟೀಲ್ ಒತ್ತಾಯಿಸಿದ್ದಾರೆ.

ಕೊರೋನಾ ಅಂಕಿ ಅಂಶ: ಸಿಎಂ, ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಇಲಾಖೆಯಿಂದ ತದ್ವಿರುದ್ಧ ಮಾಹಿತಿ
410, 401, 390, ಇದು ಕೊರೋನಾ ಬಗ್ಗೆ ಸರ್ಕಾರ ನೀಡಿದ ವಿಭಿನ್ನ ಹೇಳಿಕೆಗಳು, ಸಿಎಂ, ವೈದ್ಯಕೀಯ ಶಿಕ್ಷಣ ಇಲಾಖೆ ಮತ್ತು ಆರೋಗ್ಯ ಇಲಾಖೆ ನೀಡಿರುವ ವೈವಿಧ್ಯಮಯವಾದ ಅಂಕಿ ಅಂಶಗಳು.

ಸಂಕಷ್ಟದಲ್ಲಿದ್ದೇವೆ ನೆರವು ನೀಡಿ: ರಾಜ್ಯ ಸರ್ಕಾರಕ್ಕೆ ಚಲನಚಿತ್ರ ರಂಗ ಮನವಿ
ಕೊರೋನಾ ವೈರಾಣು ಸೋಂಕಿನಿಂದಾಗಿ ದೇಶದ ವಿವಿಧ ಉದ್ಯಮಗಳಂತೆ ಸಂಕಷ್ಟಕ್ಕ ಸಿಲುಕಿರುವ ಚಿತ್ರರಂಗವು, ಸರ್ಕಾರದ ನೆರವು ಕೋರಿ ಮುಖ್ಯಮಂತ್ರಿಯವರಿಗೆ ಪತ್ರ ಬರೆದಿದೆ

ಕೊರೋನಾ ವೈರಸ್ ಎಫೆಕ್ಟ್: ಉದ್ಧವ್ ಠಾಕ್ರೆ ಶಾಸಕ ಚುನಾವಣೆ ವಿಳಂಬ?
ಕೊರೋನಾ ವೈರಸ್ ಭೀತಿಯಿಂದಾಗಿ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಅವರ ಶಾಸಕ ಸ್ಥಾನದ ಚುನಾವಣೆ ಮತ್ತಷ್ಟು ವಿಳಂಬವಾಗುವ ಸಾಧ್ಯತೆಯಿದೆ.

