ನಮಗೂ ಕೆಲಸ ಮಾಡಲು ಅವಕಾಶ ಕೊಡಿ: ಮುಖ್ಯಮಂತ್ರಿಗಳಿಗೆ ಅರ್ಚಕರ ಮನವಿ
ಕಾಯಕವೇ ಕೈಲಾಸ ಎಂಬ ಮಾತು ಅರ್ಚಕರ ವಿಷಯದಲ್ಲಿ ಅಕ್ಷರಶಃ ಸತ್ಯ, ತಿಂಗಳುಗಳಿಂದ ದೇವಾಲಯಗಳು ಬಂದ್ ಆಗಿರುವುದರಿಂದ ತಮ್ಮ ಜೀವನ ನಿರ್ವಹಣೆ ಕಷ್ಟವಾಗಿದೆ ಹೀಗಾಗಿ ಮತ್ತೆ ದೇವಾಲಯಗಳನ್ನು ಪುನಾರಂಭ ಮಾಡಬೇಕೆಂದು ಅರ್ಚಕರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಬೆಂಗಳೂರು:ಕಾಯಕವೇ ಕೈಲಾಸ ಎಂಬ ಮಾತು ಅರ್ಚಕರ ವಿಷಯದಲ್ಲಿ ಅಕ್ಷರಶಃ ಸತ್ಯ, ತಿಂಗಳುಗಳಿಂದ ದೇವಾಲಯಗಳು ಬಂದ್ ಆಗಿರುವುದರಿಂದ ತಮ್ಮ ಜೀವನ ನಿರ್ವಹಣೆ ಕಷ್ಟವಾಗಿದೆ ಹೀಗಾಗಿ ಮತ್ತೆ ದೇವಾಲಯಗಳನ್ನು ಪುನಾರಂಭ ಮಾಡಬೇಕೆಂದು ಅರ್ಚಕರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಮುಜರಾಯಿ ಇಲಾಖೆ ವ್ಯಾಪ್ತಿಗೆ ಸುಮಾರು 34 ಸಾವಿರ ದೇವಾಲಯಗಳು ಒಳಪಟ್ಟಿದ್ದು, ಅದರಲ್ಲಿ ಎ ಗುಂಪಿನಲ್ಲಿ 175, ಬಿ ಗುಂಪಿನಲ್ಲಿ 158, ಉಳಿದವೆಲ್ಲಾ ಸಿ ಗುಂಪಿಗೆ ಸೇರಲಿವೆ. ಇನ್ನು ಹಲವು ದೇವಾಲಯಗಳನ್ನು ಟ್ರಸ್ಟ್ ಗಳು ಮತ್ತು ಸಂಘ ಸಂಸ್ಥೆಗಳು ನಡೆಸುತ್ತಿವೆ.
ಎ ಮತ್ತು ಬಿ ಗುಂಪಿನ ದೇವಾಲಯಗಳ ಅರ್ಚಕರಿಗೆ ತಿಂಗಳ ವೇತನ ಸಿಗಲಿದೆ,. ಆದರೆ ಸಿ ಗುಂಪಿನ ದೇವಾಲಯಗಳ ಅರ್ಚಕರು ದೇವಾಲಯಗಳಿಗೆ ಬರುವ ಭಕ್ತರು ನೀಡುವ ಕಾಣಿಕೆ ಮೇಲೆ ಅವರ ಆದಾಯ ಅವಲಂಬಿಸಿದೆ. ಹೀಗಾಗಿ ದೇವಾಲಯಗಳನ್ನು ತೆರೆಯಲು ಅನುಮತಿ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಬೇರೆ ಎಲ್ಲಾ ವರ್ಗದ ಜನರಿಗೆ ಸಿಎಂ ಧನ ಸಹಾಯ ನೀಡಿದ್ದಾರೆ, ಆದರೆ ನಮೆ ಮಾತ್ರ ನೀಡಿಲ್ಲ ಎಂದು ಅರ್ಚಕರೊಬ್ಬರು ಅಳಲು ತೋಡಿಕೊಂಡಿದ್ದಾರೆ, ಆದರೆ ಸದ್ಯಕ್ಕೆ ದೇವಾಲಯ ತೆರೆಯುವ ನಿರ್ಧಾರ ಸರ್ಕಾರದ ಮುಂದಿಲ್ಲ ಎಂದು ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


