CM

ಪಶ್ಚಿಮ ಬಂಗಾಳದ ಮೊದಲ ಬಿಜೆಪಿ ಮುಖ್ಯಮಂತ್ರಿಯಾಗಿ ಸುವೇಂದು ಅಧಿಕಾರಿ: ಇಂದು ಪ್ರಮಾಣ ವಚನ
ಬಿಜೆಪಿ ಮೂಲಗಳ ಪ್ರಕಾರ, ಕೋಲ್ಕತ್ತಾದಲ್ಲಿ ನಿನ್ನೆ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಅಧಿಕಾರಿಯವರ ಹೆಸರನ್ನು ಪ್ರಸ್ತಾಪಿಸಲಾಯಿತು ಮತ್ತು ಹೊಸದಾಗಿ ಆಯ್ಕೆಯಾದ ಬಿಜೆಪಿ ಶಾಸಕರು ಹಾಗೂ ಹಿರಿಯ ಪಕ್ಷದ ನಾಯಕರ ಸಮ್ಮುಖದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅಧಿಕೃತವಾಗಿ ಘೋಷಿಸಿದರು.

'ವಿಜಯ್ ಖಂಡಿತಾ ಸಿಎಂ ಆಗುತ್ತಾರೆ': ಚೆನ್ನೈ ನಿವಾಸ ಮುಂದೆ ಕಣ್ಣೀರು ಹಾಕುತ್ತಾ ಮಂಡಿಯೂರಿ ಅಭಿಮಾನಿ ಪ್ರಾರ್ಥನೆ; Viral Video
ತಮಿಳಗ ವೆಟ್ರಿ ಕಳಗಂ (TVK) ಮುಖ್ಯಸ್ಥ ವಿಜಯ್ ಅವರಿಗಾಗಿ ಪ್ರಾರ್ಥನೆ ಸಲ್ಲಿಸಲು ಬಂದಿದ್ದ ಬೆಂಬಲಿಗ, ಪ್ರಾರ್ಥನೆ ಮುಗಿದ ಬಳಿಕ ವಿಜಯ್ ಮನೆ ಎದುರು ಮೊಣಕಾಲೂರಿ ಕಣ್ಣೀರು ಹಾಕುತ್ತಿರುವ ದೃಶ್ಯ ವಿಡಿಯೋದಲ್ಲಿ ಕಾಣಿಸಿದೆ.

ಸಿಎಂ ಕುರ್ಚಿ ಕದನ: ತಮಿಳುನಾಡು ಚುನಾವಣಾ ಪ್ರಚಾರ ಬಳಸಿ ಡಿಕೆಶಿ ಸ್ಟ್ರಾಟಜಿ; ಹೈಕಮಾಂಡ್ ಗಮನ ಸೆಳೆಯುವ ಯತ್ನ..?
ರಾಜ್ಯ ಕಾಂಗ್ರೆಸ್ ಅಧ್ಯಕ್ಷರಾಗಿರುವ ಶಿವಕುಮಾರ್ ಅವರು ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಯಾಗಿದ್ದು, ನೆರೆ ರಾಜ್ಯಗಳ ಚುನಾವಣಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಪಕ್ಷದ ಹೈಕಮಾಂಡ್ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ.

'ಕರ್ನಾಟಕದಲ್ಲಿ ಆಟೋ, ಕ್ಯಾಬ್ ಚಾಲಕರಿಗೆ ಕನ್ನಡ ಭಾಷೆ ಕಡ್ಡಾಯಗೊಳಿಸಿ': ಸಿಎಂಗೆ KPCC ಪತ್ರ
ಮುಖ್ಯಮಂತ್ರಿಗೆ ಬರೆದ ಪತ್ರದಲ್ಲಿ, ಮಹಾರಾಷ್ಟ್ರದಲ್ಲಿ ಮೇ 1ರಿಂದ ಎಲ್ಲಾ ವಾಣಿಜ್ಯ ವಾಹನ ಚಾಲಕರು ಪರವಾನಗಿ ಪಡೆಯಲು ಸ್ಥಳೀಯ ಭಾಷೆ ಮರಾಠಿ ಓದಲು, ಬರೆಯಲು ಮತ್ತು ಮಾತನಾಡಲು ತಿಳಿದಿರಬೇಕು ಎಂಬ ಆ ರಾಜ್ಯದ ಮಾದರಿಯನ್ನು ಅನುಸರಿಸುವಂತೆ ಅವರು ಸೂಚಿಸಿದ್ದಾರೆ.

ಮುಖ್ಯಮಂತ್ರಿ ಸ್ಥಾನಕ್ಕೆ ಅರ್ಜಿಯನ್ನೇ ಕರೆಯೋದಿಲ್ಲವಲ್ಲ: ಸಿಎಂ ಆಗುವ ಇಂಗಿತ ವ್ಯಕ್ತಪಡಿಸಿದ ಡಾ. ಜಿ. ಪರಮೇಶ್ವರ್
ನನಗೆ ಆಸೆ ಇದೆ ಎಂದು ನಿಮಗೆ ಯಾರು ಹೇಳಿದರು? ನಮ್ಮ ಪಕ್ಷದಲ್ಲಿ ಏನೇ ತೀರ್ಮಾನ ಆಗಬೇಕಾದರೂ, ಅದನ್ನು ಹೈಕಮಾಂಡ್ ತೀರ್ಮಾನಿಸಬೇಕು. ಸಂಪುಟ ಪುನರ್ ರಚನೆ, ಸಿಎಂ ಬದಲಾವಣೆ, ಯಾರಿಗೆ ಅರ್ಹತೆ ಇದೆ, ಯಾರಿಗೆ ಅರ್ಹತೆ ಇಲ್ಲ ಎಂಬುದು ಸೇರಿ ಎಲ್ಲವನ್ನೂ ಹೈಕಮಾಂಡ್ ತೀರ್ಮಾನ ಮಾಡುತ್ತದೆ.

CM ಕುರ್ಚಿಯೇ ಅಲುಗಾಡುತ್ತಿದೆ, ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಖಚಿತವೆಂದು ಹೇಗೆ ಹೇಳುತ್ತಾರೆ..?: ಆರ್.ಅಶೋಕ್
“ಐದು ವರ್ಷ ಪೂರ್ಣಾವಧಿ ಸಿಎಂ ಆಗಿ ಮುಂದುವರಿಯುವುದೇ ಖಚಿತವಿಲ್ಲದ ನಾಯಕರು ಕಾಂಗ್ರೆಸ್ ಗೆಲುವಿನ ಭರವಸೆ ಹೇಗೆ ನೀಡುತ್ತಾರೆ?”

ನೆಹರೂ ಬದುಕಿದ್ದರೆ, ಕಾನ್ಶಿರಾಮ್ ಅವರನ್ನು ಕಾಂಗ್ರೆಸ್‌ನಿಂದಲೇ ಮುಖ್ಯಮಂತ್ರಿ ಮಾಡುತ್ತಿದ್ದರು: ರಾಹುಲ್
ಕಾನ್ಶಿರಾಮ್ ಅವರು 1978 ರಲ್ಲಿ ಅಖಿಲ ಭಾರತ ಹಿಂದುಳಿದ ಹಾಗೂ ಅಲ್ಪಸಂಖ್ಯಾತ ನೌಕರರ ಒಕ್ಕೂಟ (ಬಿಎಎಂಸಿಇಎಫ್) ಸ್ಥಾಪಿಸಿದ್ದರು. 1984ರಲ್ಲಿ ಬಹುಜನ್ ಸಮಾಜ ಪಕ್ಷವನ್ನು ಹುಟ್ಟುಹಾಕಿದ್ದರು.

ಹೈಕಮಾಂಡ್ ಅವಕಾಶ ಕೊಟ್ಟರೆ ಮತ್ತೆರೆಡು ಬಜೆಟ್ ಮಂಡಿಸುತ್ತೇನೆ: ಸಿಎಂ ಸಿದ್ದರಾಮಯ್ಯ
ಯಾರೋ ಏನೋ ಹೇಳುತ್ತಾರೆ ಎಂಬುದು ನನಗೆ ಮುಖ್ಯ ಅಲ್ಲ. ನನಗೆ ಹೈ ಕಮಾಂಡ್ ತೀರ್ಮಾನವಷ್ಟೇ ಮುಖ್ಯ. ಹೈಕಮಾಂಡ್ ಬಗ್ಗೆ ನನಗೆ ಸಂಪೂರ್ಣ ವಿಶ್ವಾಸ ಇದೆ' ಎಂದರು.

'ಸಿದ್ದರಾಮಯ್ಯನವರು 5 ವರ್ಷ ಅಲ್ಲ, ಮುಂದಿನ 15 ವರ್ಷಗಳವರೆಗೆ ಸಿಎಂ ಆಗಿರಬೇಕು': ಶಾಸಕ ಹರೀಶ್ ಗೌಡ
ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಇಬ್ಬರ ಮೇಲೂ ನನಗೆ ಅಪಾರ ಗೌರವ ಇದೆ. ನಾಯಕತ್ವ ಬದಲಾವಣೆ ಕುರಿತು ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರವೇ ಅಂತಿಮ.

